ಬೆಳಗಾವಿ: ಅಗಸ್ಟ್ ೨೨ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಕೆರೆ ಅಭಿವೃದ್ಧಿ ಸಮಿತಿ ಮಣ್ಣೂರು, ಗ್ರಾಮ ಪಂಚಾಯತ್ ಅಂಬೆವಾಡಿ ಸಹಬಾಗಿತ್ವದಲ್ಲಿ ನಮ್ಮೂರ ನಮ್ಮ ಕೆರೆ ಹಸ್ತಾಂತರ ಹಾಗೂ ಬಾಗಿಣ ಅರ್ಪಣೆ ಕಾರ್ಯಕ್ರಮದಲ್ಲಿ ಮಾತಾಡಿ ನೀರು ಅತ್ಯಮೂಲ್ಯವಾದ ಆಸ್ತಿ ಜೀವ ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಮಣ್ಣೂರ ಗ್ರಾಮದಲ್ಲಿ ರಚನೆಯಾದ ಕೆರೆಯಿಂದ ಪಶು ಪ್ರಾಣಿಪಕ್ಷಗಳಿಗೆ ಕುಡಿಯಲು ನೀರಿನ ಮೂಲ ಸಿಕ್ಕಂತಾಗಿದೆ ರೈತರಿಗೆ ಬೋರವೇಲ್ ಅಂತರಜಲ ಹೆಚ್ಚಳ ಆಗುತ್ತದೆ ಇದರಿಂದ ಊರಿಗೆ ಜಲ ಸಂಪತ್ತು ಧರ್ಮಸ್ಥಳ ಪೂಜ್ಯ ವೀರೇಂದ್ರ ಹೆಗ್ಗಡೆಯವರು ನೀಡಿರುವುದು ಅಭಿನಂದನೀಯಾವಾಗಿದೆ ಎಂದು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಜನಜಾಗೃತಿ ಸದಸ್ಯರು ಖ್ಯಾತ ವಕೀಲ ಜಿ . ಆರ್ ಸೋನೆರ ರವರು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಗಾವಿ ತಾಲೂಕು, ಕೆರೆ ಅಭಿವೃದ್ದಿ ಸಮಿತಿ ಮಣ್ಣೂರು, ಗ್ರಾಮ ಪಂಚಾಯತ್ ಅಂಬೆವಾಡಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಲಾಗಿದ್ದು ಜನತಾ ಕಾಲೋನಿಯ ನಮ್ಮೂರ ನಮ್ಮ ಕೆರೆಗೆ ಸುಮಾರು ೧೦ ಲಕ್ಷ ಮೊತ್ತದಲ್ಲಿ ಕೆರೆ ರಚನೆಮಾಡಲಾಗಿದ್ದು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕನಸು ಪ್ರತಿ ಗ್ರಾಮಗಳಲ್ಲಿಯ ಜೀವ ಸಂಕುಲಗಳ ಸಂರಕ್ಷಣೆ ಆಗಬೇಕು ಎಂದು ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ ರವರು ತಿಳಿಸಿದರು,
ಊರಿನ ಗಣ್ಯರಾದ ವಿನಾಯಕ ಕದಂ ರವರು ಊರಿಗೆ ಒಂದು ಕೆರೆಯನ್ನು ಶ್ರೀ ಧರ್ಮಸ್ಥಳದಿಂದ ಮಾಡಿಸಿದ್ದ ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದರು, ಮುಖ್ಯಾತಿಥಿಗಳಾಗಿ ಆಗಮಿಸಿದ ನಾರಾಯಣ ಶಾಪೂರಕರವರು ನಮಗೆ ಜವಾಬ್ದಾರಿ ನೀಡಿದ ಕೆರೆಯ ಜವಾಬ್ದಾರಿಯನ್ನು ನಮ್ಮ ಊರಿನಿಂದ ನಾವು ನಿರ್ವಹಣೆ ಮಾಡಿಕೊಳ್ಳುತ್ತವೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಿ ಯಳಗೂಕರ, ಬಸವರಾಜ ಸೊಪ್ಪಿಮಠ, ಉಮೇಶ ಚೌಗಲೆ ಜೈವಂತ ಬಾಳೆಕುಂದ್ರಿ ಅರುಣ ಸಾಂಬ್ರೆಕರ ಜ್ಯೋತಿಬಾ ಶಾಪೂರಕರ , ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಮುಂತಾದ ಗಣ್ಯರು ಭಾಗವಹಿಸಿದ್ದರು.
ತಾಲೂಕು ಯೋಜನಾಧಿಕಾರಿ ನಾಗರಾಜ ಹದ್ಲಿ ಸ್ವಾಗತಿಸಿದರು ಕೃಷಿ ಮೇಲ್ವಿಚಾರಕ ಸತೀಶ, ಮೇಲ್ವಿಚಾರಕಿ ಸಂಗೀತಾ ನಿರೂಪಿಸಿದರು, ವಲಯ ಸೇವಾಪ್ರತಿನಿಧಿಗಳಾದ ಜಯಶ್ರೀ ನಾಯಕ, ಗಾಯತ್ರಿ ಕಾಕಡೆ,ಸಂತೋಷ ಲಕ್ಮೀ ಕಾಂಬ್ಳೆ , ವಿಜಯಲಕ್ಷ್ಮಿ ದೇವಸ್ಥಾನ ಪಂಚ ಕಮಿಟಿ ಸದಸ್ಯರು, ಹಿಂದವಿ ಸ್ವರಾಜ್ಯ ಸಂಘಟನೆ ಸದಸ್ಯರು, ದಗೊಲ್ಡ್ ಕಾಯಿಣ ಗ್ರೂಪ್ ಸದಸ್ಯರು, ಕೃಷಿ ಹಾಗೂ ಟ್ರಾಕ್ಟರ್ ಸಂಘಟನೆ ಸದಸ್ಯರು, ಊರಿನ ಗ್ರಾಮಸ್ಥರು, ಶಾಲೆಯ ಮಕ್ಕಳು, ಯೋಜನೆ ಸಂಘದ ಸದಸ್ಯರು ಭಾಗವಹಿಸಿದ್ದರು. ಯಳಗೂಕರ, ಬಸವರಾಜ ಸೊಪ್ಪಿಮಠ, ಉಮೇಶ ಚೌಗಲೆ ಜೈವಂತ ಬಾಳೆಕುಂದ್ರಿ ಅರುಣ ಸಾಂಬ್ರೆಕರ ಜ್ಯೋತಿಬಾ ಶಾಪೂರಕರ , ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಮುಂತಾದ ಗಣ್ಯರು ಭಾಗವಹಿಸಿದ್ದರು.
Gadi Kannadiga > Local News > ಕೆರೆಗಳ ಸಂರಕ್ಷಣೆಯಿಂದ ಜೀವ ಸಂಕುಲ ರಕ್ಷಣೆ- ಜಿ. ಆರ್ ಸೋನೆರ
ಕೆರೆಗಳ ಸಂರಕ್ಷಣೆಯಿಂದ ಜೀವ ಸಂಕುಲ ರಕ್ಷಣೆ- ಜಿ. ಆರ್ ಸೋನೆರ
Suresh22/08/2023
posted on

More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023