This is the title of the web page
This is the title of the web page

Please assign a menu to the primary menu location under menu

Local News

ಗಂಗಾ ಮಾತೆಗೆ ಅವಮಾನ ಮಾಡಿದ‌ ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ಪ್ರತಿಭಟನೆ


ಬೆಳಗಾವಿ: ಬರಗೂರು ರಾಮಚಂದ್ರಪ್ಪ ಅವರು ಬರೆದ ಭರತ ನಗರಿ ಎಂಬ ಕಾದಂಬರಿಯಲ್ಲಿ ಗಂಗಾ ಮಾತೆಯ ಬಗ್ಗೆ ಅಶ್ಲೀಲ ಪದಬಳಕೆ ಮಾಡಿ ಮಗಾ ಮತಸ್ಥರಿಗೆ ಮತ್ತು ದೇವರಿಗೆ ಅವಮಾನ ಮಾಡಿದ್ದಾರೆ. ಅದ್ದರಿಂದ ಕೂಡಲೇ ಪುಸ್ತಕವನ್ನು ಮುಟ್ಟುಗೋಲು ಹಾಕಿ ಕಠೀಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಚಿಕ್ಕೋಡಿ ಗಂಗಾ ಮತಸ್ಥ ಕೋಳಿ ಸಮಾಜ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಗುರುವಾರ ಜೆಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು  ಸಕಲ ಕಾರ್ಯಕ್ಕೂ ಗಂಗೆಯೇ ಅವಶ್ಯಕವಾಗಿದ್ದು ಗಂಗಾ ಸ್ಥಾನವಿಲ್ಲದೆ ಪವತ್ರತೆ ಬರಲು ಸಾದ್ಯವಿಲ್ಲ ಅಂತಹ ಗಂಗೆಯ ಬಗ್ಗೆ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ಗಂಗಾ ಮಾತೆಯ ಜನಾಂಗದ ಬಗ್ಗೆ ಪ್ರೊ. ಬರಗೂರು ರಾಮಚಂದ್ರಪ್ಪನವರ ಭರತ ನಗರಿ ಎಂಬ ಕಾದಂಬರಿಯಲ್ಲಿ ಅಶ್ಲೀಲವಾಗಿ ಬರೆಯಲಾಗಿದೆ. ಕೀಳು ಮಟ್ಟದ ಪದಬಳಕೆಯಿಂದ ಗಂಗೆಗೆ ಅವಮಾನ ಮಾಡಲಾಗಿದೆ ಇದರಿಂದ ಗಂಗಾ ಸಮಾಜಕ್ಕೆ ಅವಮಾನವಾಗಿದ್ದು ಕೂಡಲೆ ಇದರ ವಿರುದ್ಧ ಸರಕಾರ ಕಠೀಣ ಕ್ರಮ ಕೈಗೊಳ್ಳಬೇಕು. ಪುಸ್ತಕವನ್ನು ಬ್ಯಾನ‌ ಮಾಡಿ ಅವರಿಗೆ ಶಿಕ್ಷೆ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಈ ಸಂದರ್ಬದಲ್ಲಿ ಆರ್.ಎ ಗಸ್ತಿ, ಕಿಶೋರ್ ಶಿರಗೆ, ವೀರಭದ್ರ ದುಂಡಗಿ, ಪಿ.ಆರ್.ದಾಸನಟ್ಟಿ, ವಿನಾಯಕ ಕೋಚರಿ, ಕೆಎಸ್ ನಾಯಕ್, ಐ ವೈ ಪೀಜೇರ್, ಬಸವರಾಜ್ ಸುಣಗಾರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.


Gadi Kannadiga

Leave a Reply