This is the title of the web page
This is the title of the web page

Please assign a menu to the primary menu location under menu

Local News

ತಪಾಸಣೆ ಹೆಸರಲ್ಲಿ ಚಾಲಕರ ಮೇಲೆ ದೌರ್ಜನ್ಯ ಆರೋಪಿಸಿ ಪ್ರತಿಭಟನೆ


ಬೆಳಗಾವಿ: ವಾಹಾನಗಳ ತಪಾಸಣೆ ಹೆಸರಲ್ಲಿ ಚಾಲಕರ ಮೇಲೆ ದೌರ್ಜನ್ಯ ಮಾಡುವದನ್ನು ಪೊಲೀಸರು ನಿಲ್ಲಿಸಬೇಕ ಯಾವದೇ ಸಂಚಾರಿ ನಿಯಮವನ್ನು ಉಲ್ಲಂಘಿಸದೆ ಇದ್ರೂ ಕೂಡಾ, ತಪಾಸಣೆ ಹೆಸರಲ್ಲಿ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ವಾಣಿಜ್ಯ ಚಾಲಕರ ಟ್ರೇಡ್ ಯೂನಿಯನ್ ಬೆಳಗಾವಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ವಾಣಿಜ್ಯ ಚಾಲಕರ ಸಂಸ್ಥಾಪಕ ಅಧ್ಯಕ್ಷ ಪುನೀತ್ ಕೇರೆಹಳ್ಳಿ ಅವರು ಮಾತನಾಡಿ ಸಂಚಾರಿ ನಿಯಮ ಉಲ್ಲಂಘಿಸಿದರೆ ಮಾತ್ರ ಪೊಲೀಸರು ವಿಚಾರಣೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ಅವರಲ್ಲಿ ಮನವಿ ಮಾಡಿದ್ದೇವೆ.

ಚಾಲಕರ ನಿಗಮ ಮಂಡಳಿ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಚಾಲಕರಿಗೆ ತಪಾಸಣೆ ಹೆಸರಲ್ಲಿ ಸುಖಾಸುಮ್ಮನೆ ಕಿರಿಕಿರಿ ಮಾಡಿ, ಅದರಿಂದ ಪ್ರಯಾಣಿಕರಿಗೂ ತೊಂದರೆ ಆಗಿ ಮುಂದೆ ಯಾವ ಪ್ರಯಾಣಿಕರೂ ನಮಗೆ ಸಿಗದಾಗ ಏನು ಮಾಡೋದು? ಚಾಲಕರನ್ನು ನಂಬಿಕೊಂಡು ಕುಟುಂಬಗಳಿವೆ, ಅದರ ಬಗ್ಗೆ ಅರಿತು ನಡೆದುಕೊಳ್ಳಬೇಕು ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹೋಗಬೇಕಾದ ಸಂಧರ್ಬದಲ್ಲಿ ಟೋಲ್ ಗೇಟ್ ಆದ ಮೇಲೆ ಈ ತಪಾಸಣೆ ನಡೆಯುತ್ತೆ, ಇದರಿಂದ ತುಂಬಾ ತೊಂದರೆಯಾಗಿದೆ, ದಂಡದ ಹೆಸರಲ್ಲಿ ಚಾಲಕರಿಗೆ ಪೊಲೀಸರಿಂದ ಕಿರಿಕಿರಿ ಆಗಿದೆ.

ಜಿಲ್ಲಾಧಿಕಾರಿಯವರು ಈ ರೀತಿ ತೊಂದರೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸುಚಿಸುತ್ತೆನೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.


Gadi Kannadiga

Leave a Reply