This is the title of the web page
This is the title of the web page

Please assign a menu to the primary menu location under menu

Local News

ಹೆಸ್ಕಾಂನಲ್ಲಿ ಭ್ರಷ್ಟಾಚಾರ ಆರೋಪಿಸಿ ಹೆಸ್ಕಾಂ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ


ಬೆಳಗಾವಿ: ಹೆಸ್ಕಾಂನ ಕೆಲ ಅಧಿಕಾರಿಗಳು ಒಂದು ಫೈಲ್ ಮೂವ್ ಮಾಡಲು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ಹೆಸ್ಕಾಂ ಗುತ್ತಿಗೆದಾರರ ಸಂಘ ಬುಧವಾರ ಶಾಸಕ ಅನಿಲ್ ಬೆನಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳಗಾವಿ ಹೆಸ್ಕಾಂ ಕಚೇರಿಯಲ್ಲಿ ತಲತಲಾಂತರದಿಂದ ಬೇರೂರಿರುವ ಕೆಲ ಅಧಿಕಾರಿಗಳು ತಮಗೆ ಬೇಕಾದರ ರೀತಿಯಲ್ಲಿ ವರ್ತನೆ ನಡೆಸಿದ್ದಾರೆ. ಒಂದು ಫೈಪ್ ಮೂವ್ ಮಾಡಬೇಕೆಂದರೂ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.

ಗುತ್ತಿಗೆದಾರರ ಸಂತೋಷ ಪಾಟೀಲ ಮೃತಪಟ್ಟ ಬಳಿಕ ಸರಕಾರಕ್ಕೆ‌ 40 ಪ್ರತಿಶತ ಸರಕಾರ ಎನ್ನುವ ಆರೋಪ ಇಂಥ ಭ್ರಷ್ಟ ಅಧಿಕಾರಿಗಳಿಂದ ಬಂದಿದೆ. ಹೊಸ ಮೀಟರ್ ಅಳವಡಿಕೆಯ ಸಂದರ್ಭದಲ್ಲಿ 40 ರಿಂದ 50 ಸಾವಿರ ರೂ.ಗಳ ಬೇಡಿಕೆಯನ್ನು ಹೆಸ್ಕಾಂ ಅಧಿಕಾರಿಗಳು ಇಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಣಿಜ್ಯ ಮಳಿಗೆಗಳಿಗೆ ಗುತ್ತಿಗೆದಾರ ಮೀಟರ್ ಅಳವಡಿಸಿದರೆ 200 ರಿಂದ 400 ರೂ. ಹಣ ಸಿಗುತ್ತದೆ. ಆದರೆ ಹೆಸ್ಕಾಂ ಅಧಿಕಾರಿಗಳು ನಮ್ಮ ಬಳಿ ಲಕ್ಷಾಂತರ ರೂ.ಗಳನ್ನು ಕೇಳುತ್ತಿದ್ದಾರೆ. ಇಂಥ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಅನಿಲ್ ಬೆನಕೆ, ವಿದ್ಯುತ್ ಗುತ್ತಿಗೆದಾರರ ಸಂಘ ಮಾಡುತ್ತಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಇದೆ ವೇಳೆ ಭ್ರಷ್ಟಾಚಾರಕ್ಕೆ ನಮ್ಮ ಸರ್ಕಾರ ಯಾವತ್ತೂ ಅವಕಾಶ ಕೊಡೋಲ್ಲ ಎಂದರು.

ಈ ಸಂಧರ್ಭದಲ್ಲಿ ಆರ್.ಎಂ.ಕುಂಟೆ, ಹರೀಶ ಪಾಟೀಲ,‌ ಸುನೀಲ ದೇಶಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Gadi Kannadiga

Leave a Reply