This is the title of the web page
This is the title of the web page

Please assign a menu to the primary menu location under menu

State

ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಹಾಗೂ ಅವಧಿ ವಿಸ್ತರಣೆ ಮಾಡಲು ಆಗ್ರಹಿಸಿ ಪ್ರತಿಭಟನೆ


ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಹಾಗೂ ಅವಧಿ ವಿಸ್ತರಣೆ ಮಾಡಲು ಆಗ್ರಹಿಸಿ ಪ್ರತಿಭಟನೆ

ಗಂಗಾವತಿ:- ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ತಾಲೂಕು ಸಮಿತಿ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮೂಲಕ ಆಗ್ರಹಿಸಿದರು. ಪದವಿ ವಿದ್ಯಾರ್ಥಿಗಳ 1 .3 .5 ನೇ ಸಮಿಸ್ಟರ್ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿ 1050 ರೂಪಾಯಿ ಕಟ್ಟಬೇಕು ಎಂದು ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಹೇಳುತ್ತಿರುವುದು ಸರಿಯಲ್ಲ.ಹಾಗೂ ಎಸ್ ಸಿ ಎಸ್ ಟಿ. ಓಬಿಸಿ ಅಲ್ಪಸಂಖ್ಯಾತರಿಗೆ ಸರಕಾರ ಹಾಗೂ ವಿಶ್ವ ವಿದ್ಯಾಲಯ ಶುಲ್ಕ ವಿನಾಯಿತಿ ನೀಡಲು ಆದೇಶವನ್ನು SKNG ಪ್ರಾಚಾರ್ಯರು ಉಲ್ಲಂಘನೆ ಮಾಡಿದ್ದಾರೆ . ಈ ಶೈಕ್ಷಣಿಕ ವರ್ಷ ಆರಂಭವಾಗಿ ಸುಮಾರು ದಿನಗಳು ಆದರೂ ಇಲ್ಲಿಯವರೆಗೂ ಪಾಠ ಬೋಧನೆ ಆಗಿಲ್ಲ. ಒಂದು ತಿಂಗಳು ಕಾಲ ಅತಿಥಿ ಉಪನ್ಯಾಸಕರು ಹೋರಾಟ ಕುಳಿತ್ತಿದ್ದರು .ಹಾಗಾಗಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕಾದರೆ ಪರೀಕ್ಷೆ ಶುಲ್ಕ ಕಟ್ಟುವ ದಿನಾಂಕ ಅವಧಿ ವಿಸ್ತರಣೆ ಮಾಡಬೇಕು
ಹಾಗೂ ವಿಶ್ವವಿದ್ಯಾಲಯವು ಮಾಡಿದ ಶುಲ್ಕ ವಿನಾಯಿತಿಯನ್ನು SC ST /OBC ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 150 ರೂ ಮಾತ್ರ ತೆಗೆದುಕೊಳ್ಳಲು ಅವಕಾಶ ಮಾಡಬೇಕು.ಇಲ್ಲದಿದ್ದರೆ ಸರ್ಕಾರ ವಿ. ವಿ ಆದೇಶವನ್ನು ಉಲ್ಲಂಘನೆ ಮಾಡುವ ಪ್ರಾಚಾರ್ಯರ ಮೇಲೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲು SFI ಸಂಘಟನೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ SFI ಅಧ್ಯಕ್ಷ ಗ್ಯಾನೇಶ .ಕೆ ಸಹಕಾರ್ಯದರ್ಶಿ ಸೋಮನಾಥ.ಬಾಳಪ್ಪ .ಖಾದರ್.ಅಮರೇಶ.ರಾಜಭಕ್ಷಿ.ಟಿಪ್ಪು .ಮಂಜುನಾಥ್ .ಖಾಸಿಂ. ದೇವರಾಜ.ಶಿವು.ಹೊನ್ನುರು.ಆರಿಫ್.ಪಾಂಡುರಂಗ.ಪೀರಸಾಬ್.ಮುದಕಪ್ಪ.ಜಯಪ್ಪ.ಅಪ್ಸರಾ .ಇತರರು ಇದ್ದರು

ವರದಿ
(ಹನಮೇಶ ಬಟಾರಿ ಗಂಗಾವತಿ)


Gadi Kannadiga

Leave a Reply