This is the title of the web page
This is the title of the web page

Please assign a menu to the primary menu location under menu

Local News

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ


ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ಹಂದಿಗಳ ಮತ್ತು ಬಿಡಾಡಿ ದನಗಳ ಹಾವಳಿಯನ್ನು ತಪ್ಪಿಸಿಬೇಕೆಂದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಸಿ ಪಟ್ಟಣದ ಸಾರ್ವಜನಿಕರು ಪುರಸಭೆ ಕಾರ್ಯಾಲಯದ ಮುಂದೆ ನಡೆಸಿದ ಪ್ರತಿಭಟನೆ ಹಂದಿಗಳನ್ನು ಮತ್ತು ಬಿಡಾಡಿ ದನಗಳನ್ನು ಬಂದಿಸಲು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಒಂದು ವಾರ ಸಮಯ ಪಡೆದಿಂದರಿಂದ ಪ್ರತಿಭಟನೆ ಕೈ ಬಿಟ್ಟ ಪ್ರಸಂಗ ಮಂಗಳವಾರ ಜರುಗಿತ್ತು.
ಪಟ್ಟಣದ ಪುರಸಭೆಯ ಸರ್ವ ಸಾಧರಣ ಸಭೆ ಜರುಗುವ ವೇಳೆ ಪಟ್ಟಣದ ಸಾರ್ವಜನಿಕರು ಮಂಗಳವಾರ ಪುರಸಭೆ ಕಾರ್ಯಾಲಯದ ಮುಂದೆ ಧರಣೆ ನಡೆಸಿ, ಹಂದಿಗಳ ಸ್ಥಳಾಂತರಿಸುವ ಕುರಿತು ಹಾಗೂ ಅನೇಕ ಅಭಿವೃದ್ಧಿ ಕಾರ್ಯಾಗಳ ಬಗ್ಗೆ ಮತ್ತು ಪುರಸಭೆ ಜಾಗವು ಅತಿಕ್ರಮವಾಗಿರುವ ಬಗ್ಗೆ ಪುರಸಭೆ ಅಧಿಕಾರಿಗಳ ವಿರುದ್ದ ನಡೆಸುತ್ತಿರುವ ಪ್ರತಿಭಟನಾಕಾರರು ಸ್ಥಳಕ್ಕೆ ಬೈಲಹೊಂಗಲ ಉಪವಿಭಾಗಧಿಕಾರಿ ಆಗಮಿಸುವಂತೆ ಪಟ್ಟು ಹಿಡಿದರು.
ಪುರಸಭೆ ಅಧಿಕಾರಿಗಳು ಮತ್ತು ಅಧ್ಯಕ್ಷರು, ಸದಸ್ಯರು, ಪಿಎಸ್‌ಐ ಅವರು ಚರ್ಚಿಸಿ ಪ್ರತಿಭಟನಾಕಾರ ಎದರುರಿಗೆ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಪಟ್ಟಣದ ಹಂದಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ರಕ್ಷಣೆ ನೀಡುವಂತೆ ಪಿಎಸ್‌ಐ ಎಚ್ ವೈ ಬಾಲದಂಡಿಯವರಿಗೆ ಮನವಿ ಸಲ್ಲಿಸಿ, ಹಂದಿಗಳ ಹಾವಳಿಯನ್ನು ತಪ್ಪಿಸಲು ಒಂದು ವಾರದೊಳಗೆ ಹಂದಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮಾಡಲಾಗುವುದೆಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಈ ವೇಳೆ ಕೆಲ ಕಾಲ ಪುಸರಭೆ ಸದಸ್ಯರ ಜೊತೆಗೆ ಸಾರ್ವಜನಿಕರ ವಾಗ್ವಾದವೂ ಕೂಡಾ ಜರುಗಿದ್ದು, ಹಂದಿಗಳಿಂದ ಹಾನಿಯಾದ ಬೆಳೆಗಳು, ಮಕ್ಕಳಿಗೆ ಕಚ್ಚಿದ ವಿಡಿಯೋ ಮತ್ತು ಪೋಟೋಗಳನ್ನು ತೋರಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಸಾರ್ವಜನಿಕರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದರು ಸಹ ಯಾವುದೇ ಪ್ರಯೋಜನೆವಾಗಿಲ್ಲ ಆದರಿಂದ ಕೂಡಲೇ ಹಂದಿಗಳನ್ನು ಸ್ಥಾಳಾಂತರಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರು ಸಹ ಒಂದು ವಾರದೊಳಗೆ ಸ್ಥಳಾತಂರಿಸದೇ ಇದ್ದ ಪಕ್ಷದಲ್ಲಿ ಮುಂದೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಸಹ ನೀಡಿದರು.
ಪಟ್ಟಣದ ಲಕ್ಷ್ಮೀನಗರದ ಪುಠಾಣಿ ಪ್ಲಾಟ್‌ದಲ್ಲಿನ ಸಾರ್ವಜನಿಕ ಬಾವಿಯನ್ನು ಮುಚ್ಚುವಂತೆ ಸಾಕಷ್ಟು ಬಾರಿ ಮನವಿ ಮಾಡದರೂ ನಮ್ಮ ಮನವಿ ಸ್ಪಂದಿಸಿಲ್ಲಾ ಎಂದು ಮುಖ್ಯಾಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಸಭೆಯಲ್ಲಿ ಬಾವಿ ಮುಚ್ಚುವಂತೆ ಚರ್ಚಿಸಿ ಠರಾವು ಪ್ರತಿ ನೀಡುವಂತೆ ಮುಖ್ಯಧಿಕಾರಿ ದೀಪಕ್ ಹರ್ದಿಗೆ ಮಹಿಳೆಯರು ಆಗ್ರಹಿಸಿದರು.
ಈ ವೇಳೆಯಲ್ಲಿ ಮಲ್ಲಪ್ಪ ಮದಗುಣಕಿ, ಈರಪ್ಪ ಢವಳೇಶ್ವರ, ಶ್ರೀಶೈಲ್ ಜೈನಾಪೂರ, ಗುರು ಗಂಗಣ್ಣವರ, ಪ್ರಭು ತೇರದಾಳ, ರಾಮಣ್ಣ ಹಂದಿಗುಂದ, ಚನ್ನಪ್ಪ ಅಥಣಿ, ಇಜಾಜಹ್ಮದ ಕೊಟ್ಟಲಗಿ, ಶ್ರೀಶೈಲ್ ಗಾಣಿಗೇರ, ಸುರೇಶ ಸಣ್ಣಕ್ಕಿ, ಈರಯ್ಯಾ ಹಿರೇಮಠ, ಮಂಜುಳಾ ವಾಣಿ, ಅನ್ನಪೂರ್ಣಾ ಮೆಣಶಿ, ಸುಚಿತ್ರಾ ಕಲ್ಲೋಳಿ, ರಾಜಶ್ರೀ ಅಡಿಬಟ್ಟಿ, ಶಾಂತವ್ವಾ ಮನ್ನಿಕೇರಿ, ಯಲ್ಲವ್ವ ಮೆಳವಂಕಿ, ರುಕ್ಮವ್ವ ದಾಸರ,ಮೇರಮಾ ನದಾಫ್, ಶಿವಮ್ಮಾ ಹಿರೇಮಠ ಸೇರಿದಂತೆ ಅನೇಕರು ಇದ್ದರು.

 


Gadi Kannadiga

Leave a Reply