This is the title of the web page
This is the title of the web page

Please assign a menu to the primary menu location under menu

Local News

ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ


ಬೆಳಗಾವಿ: ಕಬ್ಬಿಗೆ ಪ್ರತಿ ಟನ್ ಗೆ 5,500 ರೂ. ಬೆಲೆ ನಿಗದಿ ಪಡಿಸಬೇಕು ಮತ್ತು ವಿದ್ಯೂತ್ ಖಾಸಗಿಕರನವನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಬಟನೆ ನಡೆಸಿದ ಅವರು. ರೈತರ ಕಬ್ಬಿನಿಂದ 1 ಟನ್ ಗೆ ಸರಕಾರ ತೆರಿಗೆ ರೂಪದಲ್ಲಿ ಸುಮಾರು 4,500 ರೂ ತೆರಿಗೆ ಸಂದಾಯವಾಗುತ್ತಿರುವುದರಿಂದ ರೂ. 2,000 ಪರ ಟನ್ ಗೆ ರೈತರಿಗೆ ಸಹಾಯ ಧನ ರೂಪದಲ್ಲಿ ಸರಕಾರ ನೀಡಬೇಕು. ಕಾರ್ಖಾನೆಯವರು 3,500 ರೂ. ಕೊಡಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಖಾಸಗೀಕರಣ ಜಾರಿಗೆ ತರಲು ಹೊರಟಿರುವ ಸರಕಾರದ ನೀತಿಯನ್ನು ಖಂಡಿಸುತ್ತೇವೆ. ರೈತರ ನೀರಾವರಿ ವ್ಯವಸ್ಥೆಗೆ ಮೀಟರ್ ಅಳವಡಿಕೆ ಮತ್ತು ಕರೆನ್ಸಿ ಚಿಪ್ ಅಳವಡಿಕೆ ಮಾಡುವುದು ಬೇಡ. ರೈತರಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ನೀಡದೆ ಇರುವುದು ರೈತ ವಿರೋಧಿ ಅನುಸರಿಸುತ್ತಿದೆ. ರೈತರಿಗೆ ನಿರಂತರ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.


Gadi Kannadiga

Leave a Reply