This is the title of the web page
This is the title of the web page

Please assign a menu to the primary menu location under menu

State

ಸ್ವೀಕರ್ ಕಾಗೇರಿಯವರನ್ನು ವಜಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ


ಬಳ್ಳಾರಿ,ಫೆ.೧೮: ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯದೇ ಪಕ್ಷಪಾತದಿಂದ ವರ್ತಿಸುತ್ತಿರುವ ಸ್ಪೀಕರ್ ಅವರನ್ನು ಈ ಕೂಡಲೇ ಆ ಹುದ್ದೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿಂದು ಪ್ರತಿಭಟಿಸಿ, ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ವಿಧಾನಸಭಾಧ್ಯಕ್ಷರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಅವರು ಪಕ್ಷಾತೀತವಾದವರು ಮತ್ತು ಅವರ ಹುದ್ದೆ ಸಾಂವಿಧಾನಿಕವಾದ್ದು. ಅದನ್ನು ಮರೆತು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಲ್ಕಿಯ ಶಾಸಕರಾದ ಈಶ್ವರ ಖಂಡ್ರೆರಿಗೆ ಮತ್ತು ಭಾಲ್ಕಿಯ ಮತದಾರರಿಗೆ ಅವಮಾನ ಮಾಡಿರುವುದು ಅಕ್ಷಮ್ಯ. ಸ್ಪೀಕರ್ ಅವರು ಈ ರೀತಿ ಒಂದು ಪಕ್ಷದ ಏಜೆಂಟ¬ರಂತೆ ವರ್ತಿಸುವುದು ಸರ್ವತಾ ಸಲ್ಲದ್ದು, ಈ ಮೂಲಕ ಆಗ್ರಹಿಸುತ್ತಿದ್ದೇವೆ. ಫೆ.೧೬ರಂದು ಮಧ್ಯಾಹ್ನ ವಿಧಾನಸಭೆಯ ಕಲಾಪ ನಡೆಯುತ್ತಿದ್ದಾಗ, ಶಾಸಕರಾದ ಯು.ಟಿ. ಖಾದರ್ ಅವರು ನಿನ್ನೆ ಮಂಡ್ಯದ ಬಹಿರಂಗ ಸಭೆಯೊಂದರಲ್ಲಿ ಸಚಿವರಾದ ಡಾ. ಅಶ್ವತ್ಥ ನಾರಾಯಣ ಅವರು, ಟಿಪ್ಪೂ ಸುಲ್ತಾನರನ್ನು ಉರಿಗೌಡ ಮತ್ತು ನಂಜೆಗೌಡರು ಹೊಡೆದು ಹಾಕಿದ ರೀತಿಯಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು ಎಂದು ಹೇಳಿಕೆ ನೀಡಿರುವುದನ್ನು ಖಂಡಿಸುತ್ತಿದ್ದಾಗ, ಖಾದರ್ ಅವರ ಮಾತಿಗೆ ಬೆಂಬಲ ನೀಡಿ ಮಾತನಾಡಲು ಈಶ್ವರ ಖಂಡ್ರೆ ಅವರು ಎದ್ದು ನಿಂತಾಗ, ಸ್ಪೀಕರ್ ಅವರು, ತಮ್ಮ ಪಕ್ಷದ ಸಚಿವರ ಪರ ವಹಿಸಿ, ಪ್ರತಿಪಕ್ಷದ ಸದಸ್ಯರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಲ್ಲದೆ, ಈಶ್ವರ ಖಂಡ್ರೆ ಅವರಿಗೆ ನೀವು ಹೀಗೆ ಎದ್ದು ನಿಲ್ಲುವುದು ಸರಿಯಲ್ಲ, ನಿಮ್ಮಂತವರು ಶಾಸಕರಾಗಿರುವುದೇ ಸದನಕ್ಕೆ ಅಗೌರವ, ಸದನ ಎಂದರೆ ಏನೆಂದುಕೊಂಡಿದ್ದೀರಿ. ಈ ರೀತಿ ವರ್ತನೆ ತೋರಿದರೆ ಅಧಿಕಾರ ಬಳಸಬೇಕಾಗುತ್ತದೆ, ಸದನದಿಂದ ಹೊರ ಹಾಕಬೇಕಾಗುತ್ತದೆ. ಮಾತನಾಡಬೇಡಿ. ನಿಮ್ಮಂತರವನ್ನು ಕ್ಷೇತ್ರದ ಜನತೆ ಆಯ್ಕೆ ಮಾಡಿ ಕಳುಹಿಸಿರುವುದೇ ಅಗೌರವ ಎಂದು ಹೇಳುವ ಮೂಲಕ ಇಡೀ ಭಾಲ್ಕಿಯ ಮತದಾರರಿಗೆ ಮತ್ತು ಶಾಸಕರಿಗೆ ಅವಮಾನ ಮಾಡಿರುತ್ತಾರೆ.
ಈ ಹೇಳಿಕೆಯನ್ನು ಖಂಡಿಸಿ, ಕರ್ನಾಟಕದಾಧ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೆ, ಜಿಲ್ಲಾಧಿಕಾ¬ರಿಗಳಿಗೆ ಮೂಲಕ ಈ ಮನವಿ ಪತ್ರ ಕಳುಹಿಸುತ್ತಿದ್ದೇವೆ. ಈ ಮನವಿಯನ್ನು ಪರಿಗಣಿಸಿ, ಪಕ್ಷಪಾತದಿಂದ ವರ್ತಿಸಿದ ಮತ್ತು ಮತ ನೀಡಿದ ಕ್ಷೇತ್ರದ ಸಮಸ್ತ ಜನತೆಗೆ ಅವಮಾನ ಮಾಡಿದ್ದಲ್ಲದೆ, ಅವರನ್ನು ಆಯ್ಕೆ ಮಾಡಿದ ಮತದಾರ¬ರಿಗೂ ಅವಮಾನ ಮಾಡಿದ ಸ್ಪೀಕರ್ ವಿರುದ್ಧ ಕ್ರಮ ಕೈಗೊಂಡು ಅವರನ್ನು ಸ್ಪೀಕರ್ ಹುದ್ದೆಯಿಂದ ವಜಾ ಮಾಡುವಂತೆ ಈ ಮೂಲಕ ಕೋರುತ್ತಿದ್ದೇವೆ. ಈ ಸಂದರ್ಭದಲ್ಲಿ ಅಲ್ಲಂ ಪ್ರಶಾಂತ್, ಕೇಣಿ ಬಸಪ್ಪ, ಕೋರಿ ವಿರುಪಾಕ್ಷಪ್ಪ, ಜಾನೆಕುಂಟೆ ಸಣ್ಣ ಬಸವರಾಜ, ಆರ್.ಹೆಚ್.ಎಂ. ಚನ್ನಬಸಯ್ಯಸ್ವಾಮಿ, ಅಂಗಡಿ ಶಂಕರ್, ಯಾಳ್ಪಿ ದಿವಾಕರ್, ಕೆ.ಪಿ.ಚನ್ನಬಸವ, ಮಂಜು ಬೆಳಿಗಾರ್, ಶಿವಕುಮಾರ್, ವಿರೇಶ್ ಗಂಗಾವತಿ, ಚಂದ್ರಮೋಹನ್, ಹಡ್ಲಿಗಿ ಹನುಮನಗೌಡ, ಸುನೀಲ್‌ಕುಮಾರ್, ನಂದೀಶ್, ದಂಡಿನ ಶಿವಾನಂದ, ಮುದ್ದಾಪುರ ಮಲ್ಲಿಕಾರ್ಜುನ, ಮೆಟ್ರಿ ಜಗದೀಶ್, ಜಾಲಿಹಾಳ್ ಶ್ರೀಧರ್, ಬಾದನಹಟ್ಟಿ ಸಣ್ಣ ರಂಗಪ್ಪ, ತಿಮ್ಮನಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


Gadi Kannadiga

Leave a Reply