This is the title of the web page
This is the title of the web page

Please assign a menu to the primary menu location under menu

Local News

ಹಿಂದುಗಳ ಮೇಲೆ ಮುಸ್ಲೀಂ ದಬ್ಬಾಳಿಕೆ ಆರೋಪಿಸಿ ಬೆಳಗಾವಿಯಲ್ಲಿ ಪ್ರತಿಭಟನೆ


ಬೆಳಗಾವಿ: ದೇಶಾದ್ಯಂತ ಹಿಂದುಗಳ‌ ಮೇಲೆ ಮುಸ್ಲಿಂ ಜಿಹಾದಿಗಳಿಂದ ಹಲ್ಲೆಯಾಗುತ್ತಿದೆ ಇದನ್ನು ತಡೆಯಬೇಕು ಮತ್ತು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ವಿಶ್ವಹಿಂದು ಪರಿಷತ್ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅವರು ಹಿಂದುಗಳ ಮೇಲೆ ಮುಸ್ಲೀಂ ಜಿಹಾದಿಗಳಿಂದ ಹಲ್ಲೆ, ಶೋಷಣೆಗಳು ನಡೆಯುತ್ತಲೇ ಇವೆ ಧರ್ಮದ ಹೆಸರಿನಲ್ಲಿ ಕಾನೂನನ್ನೆ ಕೈಗೆತ್ತಿಕೊಳ್ಳುವ ಮನಸ್ಥಿತಿ ಇರವ ಅವರು ಶ್ರೀರಾಮ ನವಮಿ ಶೋಭಾ ಯಾತ್ರೆಯಲ್ಲಿಯೂ ಹಲವಾರು ಸ್ಥಳಗಳಲ್ಲಿ ದಾಳಿ ಮಾಡಿ ಅಶಾಂತಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದು ಆರೋಫಿಸಿದರು.

ನೂಪೂರ ಶರ್ಮ ಮತ್ತು ನವೀನ ಜಿಂದಾಲ ಅವರ ಹೇಳಿಕೆಯ ನೆಪದಲ್ಲಿ ಹಿಂದುಗಳ ಮೇಲೆ ಹಲ್ಲೆ, ಕೀಳುಮಟ್ಟದ ಬೈಗಳ, ಜೀವಬೆದರಿಕೆ ಹಾಕುವುದಲ್ಲದೆ  ದೇವತೆಗಳ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ ಕೂಡಲೆ ಸರಕಾರ ಇದರ ಕಡೆ ಗಮನ ಹರಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.


Gadi Kannadiga

Leave a Reply