This is the title of the web page
This is the title of the web page

Please assign a menu to the primary menu location under menu

Local News

ಗ್ರಾ.ಪಂ ನಿರ್ಮಾಣಕ್ಕೆ ರೈತರ ಜಮೀನು ಒತ್ತುವರಿ ಆರೋಪಿಸಿ ಪ್ರತಿಭಟನೆ


ಬೆಳಗಾವಿ:  ಜಿಲ್ಲೆಯ ನಾಗನೂರ ಗ್ರಾಮದ ಸಿದ್ದರಾಮಪ್ಪ ಹೊಸಮನಿ ಎಂಬ ರೈತನು ಗ್ರಾಮ ಪಂಚಾಯಿತಿಯವರು ತನ್ನ ಜಮೀನು ಆಕ್ರಮಿಸಿಕೊಂಡಿದ್ದಾರೆ ಎಂದು ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲು ರೈತನ ಸಹಿ ಫೋರ್ಜರಿ ಮಾಡಿ 5 ಗುಂಟೆ ಜಮೀನನ್ನ ಕಬಳಿಸಿರುವ ಆರೋಪ ಕೇಳಿ ಬಂದಿದೆ.

ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮ ಪಂಚಾಯಿತಿಯನ್ನು ರೈತನಿಂದ ಕಸಿದುಕೊಂಡ ಜಮೀನಿನಲ್ಲಿ ಕಟ್ಟಲಾಗಿದೆ ಎನ್ನಲಾಗುತ್ತಿದೆ. ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮ ಪಂಚಾಯಿತಿ ಈಗ ಪ್ರತಿಭಟನಾ ಸ್ಥಳವಾಗಿ ಮಾರ್ಪಟ್ಟಿದೆ.

ಗ್ರಾಮದ ಸಿದ್ದರಾಮಪ್ಪ ಹೊಸಮನಿ ಎಂಬ ರೈತನ ಜಮೀನನ್ನು ಗ್ರಾಮ ಪಂಚಾಯಿತಿ ನಿರ್ಮಿಸಲು ಕಬಳಿಸಿರುವುದಾಗಿ ಸ್ವತಃ ಜಮೀನಿನ ಮಾಲಿಕರು ಮಾತ್ರವಲ್ಲದೆ ಗ್ರಾಮಸ್ಥರು ಕೂಡ ಆರೋಪಿಸಿದ್ದಾರೆ.
ವಿಷಯ ತಿಳಿದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಮಾಧ್ಯಮ ದವರೊಂದಿಗೆ ಪ್ರತಿಭಟನಾಕಾರರು ಮಾತನಾಡಿ, ರೈತನಿಗೆ ನ್ಯಾಯ ಸಿಗುವವರೆಗೂ ಧರಣಿ ನಡೆಸುವುದಾಗಿ ತಿಳಿಸಿದರು.

ಹಾಗೂ ಜಮೀನಿನ ಮಾಲೀಕ ಎಂದು ಹೇಳಿಕೊಳ್ಳುವ ಸಿದ್ದರಾಮಪ್ಪ ಹೊಸಮನಿ ಮಾತನಾಡಿ,ತಾಲೂಕು ಪಂಚಾಯಿತಿ ಇಓ ಅವರು ಮಾತ್ರವಲ್ಲದೆ ಗ್ರಾಮ ಪಂಚಾಯತಿ ಅದ್ಯಕ್ಷರು, ಪಿಡಿಓ, ಕ್ಲಾರ್ಕ್ ಇವರೆಲ್ಲರೂ ನನಗೆ ನ್ಯಾಯ ಕೊಡಿಸುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ನನಗೆ ನ್ಯಾಯ ಸಿಗದೆ ಇದ್ದಲ್ಲಿ ತಾಲೂಕು ಪಂಚಾಯಿತಿ ಇಓ ಸೇರಿದಂತೆ ನಾಲ್ವರ ಹೆಸರು ಬರೆದಿಟ್ಟು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹಾಗಾದ್ರೆ ರೈತನ ಜಮೀನಿನಲ್ಲಿ ಅಕ್ರಮವಾಗಿ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಿಸುವ ಅಗತ್ಯ ವಾದರು ಏನಿತ್ತು..?
ಜಮೀನು ರೈತನಿಗೆ ಸಂಬಂಧಿಸಿಲ್ಲ ಎಂಬುದಾದರೆ..?
ರೈತನನ್ನು ಸಂದಾನಕ್ಕೆ ಕರೆಯುವುದಾಗಲಿ ಸುಳ್ಳು ಭರವಸೆ ನೀಡುವ ಅವಶ್ಯಕತೆ ಯಾದರೂ ಏನಿತ್ತು ಎಂಬ ಪ್ರಶ್ನೆಗಳೂ ಉದ್ಭವಾಗುತ್ತಿವೆ.

ರೈತನ ಆರೋಪ ಎಷ್ಟರ ಮಟ್ಟಿಗೆ ಸತ್ಯ..? ಸತ್ಯವಾದಲ್ಲಿ ರೈತನಿಗೆ ನ್ಯಾಯ ಸಿಗುವುದಾದರೂ ಹೇಗೆ..? ಎಂಬ ಪ್ರಶ್ನೆ ಗಳಿಗೆ ಸಂಭಂದ ಪಟ್ಟ ಇಲಾಖೆ ಯವರು ಉತ್ತರ ನೀಡಬೇಕಾಗಿದೆ….!


Gadi Kannadiga

Leave a Reply