ಬೆಳಗಾವಿ: ಕೇಂದ್ರ ಬಸ್ ನಿಲ್ದಾನ ಕಾಮಗಾರಿ ಮುಕ್ತಾಯ ದಿನಾಂಕ ಅವಧಿ ಮುಗಿದು ಸುಮಾರು ವರ್ಷಗಳಾದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಪ್ರಯಾಣಿಕರು ಕಲ್ಲು-ಮಣ್ಣು ದೂಳುಗಳಲ್ಲಿ ಸಂಚಾರಿಸುವಂತಾಗಿದೆ ಕೂಡಲೇ ನಿಲ್ದಾಣ ಕಾಮಗಾರಿ ಸಂಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಅವರು ಕೆಂದ್ರ ಬಸ್ ನಿಲ್ದಾಣ ಕಾಮಗಾರಿಯ ಅವದಿ ಮುಗಿದರು ಆಮೇಗತಿಯಲ್ಲಿಯೇ ಸಾಗುತ್ತಿದೆ ಸ್ಮಾರ್ಟ್ ಸಿಟಿಯಾಗುತ್ತಿರುವ ಬೆಳಗಾವಿಯಲ್ಲಿ ಸಮರ್ಪಕ ಬಸ್ ನಿಲ್ದಾಣವಿಲ್ಲದೆ ಸಾರ್ವಜನೀಕರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಕಾಮಗಾರಿಯ ಗುತ್ತಿಗೆದಾರರು ಅನುಸರಿಸುತ್ತಿರುವ ವಿಳಂಬಕ್ಕೆ ಕಾರಣವನ್ನು ಕೂಲಂಕುಶವಾಗಿ ಪರಿಶೀಲಿಸಿ ತಪ್ಪು ಕಂಡು ಬಂದಲ್ಲಿ ಇವರ ಮೇಲೆ ದಂಡ ವಿಧಿಸಿ ಇವರ ಗುತ್ತಿಗೆ ಪರವಾನಿಗೆಯನ್ನು ರದ್ದುಗೊಳಿಸಿ ಹಾಗೂ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣ ಹಾಗೂ ನಗರ ಸಾರಿಗೆ ಘಟಕದ ಬಸ್ ನಿಲ್ದಾಣದ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಬೇಗನೆ ನಗರದ ನಿವಾಸಿಗಳು ಹಾಗೂ ಸಂಚಾರಿಗಳಿಗೆ ಸುಸಜ್ಜಿತ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕು ಇಲ್ಲದಿದ್ದಲದಲಿ ನಮ್ಮ ಸಂಘಟನೆ ವತಿಯಿಂದ ಹಾಗೂಸಾರ್ವಜನಿಕರಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆನಂದ ಬಡಿಗೇರ, ರಘು ಧಾಗೆ, ಇರ್ಪಾನ್ ಅತ್ತಾರ, ಸುಧೀರ ಸಂಬಾಜಿ, ಯಲ್ಲಪ್ಪಾ ಬಸಾಪುರೆ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.