This is the title of the web page
This is the title of the web page

Please assign a menu to the primary menu location under menu

Local News

ಅಕ್ರಮವಾಗಿ ಪಡೀತರ ಚೀಟಿ ಅಕ್ಕಿ ಸಾಗಾಟಗಾರರ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ


ಬೆಳಗಾವಿ : ಇತ್ತಿಚ್ಚೀಗೆ ಕರ್ನಾಟಕ ರಾಜ್ಯಾದ್ಯಾಂತ ಪಡೀತರ ಚೀಟಿ ಅಕ್ಕಿಯ ಅಕ್ರಮ ಸಾಗಾಟ ಎಗ್ಗಿಲ್ಲದೆ ಸಾಗುತ್ತಿದೆ ಇದರ ವಿರುದಗ್ದ ಸೂಕ್ರಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರವೇ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ನಗರದ ಹೃದಯ ಭಾಗವಾದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಪಡೀತರ ಅಕ್ಕಿಯ ಅಕ್ರಮವಾಗಿ ಸಾಗಾನಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಪ್ರತಿದಿನವೂ ಹಳ್ಳಿ ಹಳ್ಳಿಗೆ ಹೋಗಿ ಎಲ್ಲ ಅಕ್ರಮವಾಗಿ ಪಡೀತರ ಚೀಟಿಯ ಅಕ್ಕಿಯನ್ನು ಪಡೆದುಕೊಂಡು ತದನಂತರ ಅದನ್ನು ಒಂದು ಹತ್ತಿರು ದಾಸ್ತಾನು ಮಾಡಿ ಎಲ್ಲ ಅಕ್ಕಿಯನ್ನು ಸುಸಜ್ಜಿತವಾಗಿ ಚೀಲಗಳಲ್ಲಿ ತುಂಬಿ ಅದಕ್ಕೆ ಡುಪ್ಲಿಕೇಟ್ ಬಿಲ್ ಅನ್ನು ರೇಡಿ ಮಾಡಿ ಲಾರಿಗಳಲ್ಲಿ ಸುಮಾರು ಟನ್ ಗಟ್ಟಲೇ ನೆರೆಯ ರಾಜ್ಯ ಮಹಾರಾಷ್ಟ್ರಕ್ಕೆ ದುಡ್ಡಿನ ಆಸೆಗಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.

ಮೊನ್ಯನೆಯಷ್ಟೇ ಬೆಳಗಾವಿ ಜಿಲ್ಲೆಯ ಕಾಕತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ತರಹದ ಎರಡು ಲಾರಿಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯದ ಕಾರ್ಯಕರ್ತರು ಅನುಮಾನಸ್ಪದವಾಗಿ ಹಿಡಿದು ನೋಡಿದಾಗ ಆ ಲಾರಿಗಳಲ್ಲಿ ಅಕ್ರಮ ಪಡಿತರ ಅಕ್ಕಿ ಇರುವುದು ದೃಢವಾಗಿದೆ. ತದನಂತರ 112 ತುರ್ತುವಾಹಿನಿಗೆ ಕರೆ ಮಾಡಿ ಮಾಹಿತಿ ನೀಡಿರುತ್ತಾರೆ ನಂತರ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೂ ಸುದ್ದಿ ಮುಟ್ಟಿಸಿ ಆ ಎರೆಡೂ ಲಾರಿಗಳನ್ನು ಕಾಕತಿ ಪೋಲಿಸ್ ಠಾಣೆಗೆ ಒಪ್ಪಿಸಿರುತ್ತಾರೆ.

ಇದೇ ರೀತಿ ಮುಂದೆ ನಡೆಯದಂತೆ ಜಿಲ್ಲಾಡಳಿತ ಎಚ್ಚರವಹಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತಕ್ರ ಜರುಗಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಸಂಘಟನೆಯ ಬೆಳಗಾವಿ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗನಟ್ಟಿ, ಮಹಿಳಾ ಜಿಲ್ಲಾ ಅಧ್ಯಕ್ಷೆ ಸಂಗೀತಾ ಕಾಂಬಳೆ, ಗೋಕಾಕ ತಾಲೂಕಾ ಅಧ್ಯಕ್ಷ ಅಶೋಕ ಗಾಡಿವಡ್ಡರ, ಸಂಘಟನೆಯ ಪದಾಧಿಕಾರಿಗಳಾದ ರವಿ ಗಾಡಿವಡ್ಡರ, ಮಂಜುನಾಥ ಗಾಡಿವಡ್ಡರ, ಜಯಶ್ರೀ ಮೇಖಳಿ ಹಾಗೂ ಅನೇಕ ಕನ್ನಡ ಸಂಘಟನೆಯ ಪದಾಧಿಕಾರಿಗಳು ಸಿದ್ದಪ್ಪ ಜಳಕದ.ಸಿದ್ರಾಮ ಹೊಸಮನಿ. ರಮೇಶ ಹರಿಜನ. ಮಹೇಶ ಪೋಳ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.


Gadi Kannadiga

Leave a Reply