This is the title of the web page
This is the title of the web page

Please assign a menu to the primary menu location under menu

Local News

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಬಸವಣ್ಣನವರಿಗೆ ಅವಮಾನ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ


ಬೆಳಗಾವಿ: ಪಠ್ಯಪುಸ್ತಕ ಪರಿಷ್ಕರಣಾ ಸಮೀತಿಯು ಒಂಬತ್ತನೆ ತರಗತಿ ಪುಸ್ತಕದಲ್ಲಿ ಬಸವಣ್ಣನವರ ಕುರಿತು ತಪ್ಪು ವಿಷಯಗಳನ್ನು ರವಾಣಿಸಲಾಗಿದ್ದು ಅದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಬಸವ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಂಮತ್ರಿಗಳಿಗೆವಮನವಿ ಸಲ್ಲಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲ ಪ್ರತಿಭಟನೆ ನಡಿಸಿದ ಅವರು ಪಠ್ಯಪುಸ್ತಕ ಪರಿಷ್ಕರಣಾ ಸಮೀತಿಯು ಒಂಬತ್ತನೆ ತರಗತಿಯ ಸಮಾಜ ವಿಜ್ಙಾನ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ಲೋಪದೋಷವಿರುವ ವಿಷಗಳನ್ನು ಅಳವಡಿಸಿದ್ದು ಅದು ಅನೈತಿಹಾಸಿಕ ಜೀವನಚರಿತ್ರೆಯಾಗಿದೆ ಕೂಡಲೆ ಇದನ್ನು ಗಮನಿಸಿ ಸೂಕ್ತಕ್ರಮದಲ್ಲಿ ಸರಿಪಡಿಸಬೇಕು ಇಲ್ಲದಿದ್ದರೆ ಊಗ್ರಹೋರಾಟ ಮಾಡಲಾಗುತ್ತದೆ ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ಮಾತನಾಡಿ ಬಸಬಣ್ಣನವರ ವಿಷಯಕ್ಕೆ ಸಂಬಂಧಿಸಿದಂತೆ ಪಿಸ್ತಕದಲ್ಲಿ ಉಪನಯನ ನಂತರ ಕೂಡಲ ಸಂಗಮಕ್ಕೆ ನಡೆದರು ಎಂದು ಬರೆಯಲಾಗಿದೆ ಅದು ತಪ್ಪಾಗಿದ್ದು ಬಸವಣ್ಣನವರು ಉಪನಯನ ತಿರಸ್ಕರಿಸಿ ಕೂಡಲ ಸಂಗಮಕ್ಕೆ ಹೋಗಿದ್ದರು. ಇನ್ನು ಬಸವಣ್ಣನವರು ಲಿಂಗದೀಕ್ಷೆಯನ್ನೇ ಪಡೆದಿರಲಿಲ್ಲ ಆದರೆ ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆ ಪಡೆದಿದ್ದರು ಎಂದು ಉಲ್ಲೇಖಿಸಲಾಗಿದೆ ಎಂದರು.

ಪಠ್ಯಪುಸ್ತಕದಲ್ಲಿ ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ಬರೆಯಲಾಗಿದೆ ಆದರೆ ಬಸವಣ್ಣನವರು ಕೇವಲ ಲಿಂಗಾಯತ ಧರ್ಮದ ಸ್ಥಾಪಕರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ ವೀರಶೈವ ಅಭಿವೃದ್ಧಿ ಪಡಿಸಿದರು ಎನ್ನುವುದು ಶುದ್ಧ ಸುಳ್ಳು ಎಂದು ಆರೋಪಿಸಿದರು.

ಪಠ್ಯಪುಸ್ತಕದಲ್ಲಿ ವಸವಣ್ಣನವರ ಕುರಿತು ಈ ಎಲ್ಲ ತಪ್ಪು ಮಾಹಿತಿಗಳನ್ನು ಸೇರಿಸಲಾಗಿದ್ದು ಕೂಡಲೇ ಇದನ್ನು ಪರಿಶೀಲಿಸಿ ಒಂದು ವಾರದ ಒಳಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಪ್ರತಿಭಟನೆಯಲ್ಲಿ ಶಂಕರ ಗುಡಸ, ಅರವಿಂದ ಪಾರುಶೆಟ್ಟಿ, ಎ ವೈ ಬೆಂಡಿಗೇರಿ, ಎಸ್ ಜಿ ಸಿದ್ನಾಳ, ಬಿ ಎಸ್ ಸುಲ್ತಾನಪುರಿ, ಸತೀಶ್ ಚೌಗಲಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


Gadi Kannadiga

Leave a Reply