ಬೆಳಗಾವಿ ೨೭ : ದಿÀ ೨೭. ರಂದು ಬೆಳಗಾವಿಯ ವಾರ್ಡ ನಂಬರ ೩೫ ಮತ್ತು ೩೬ ರಲ್ಲಿ ಶಾಸಕ ಅನಿಲ ಬೆನಕೆರವರು ಮಹಾನಗರ ಪಾಲಿಕೆ, ಹೆಸ್ಕಾಂ, ಲೋಕೋಪಯೋಗಿ ಇಲಾಖೆ, ಎಲ್ ಆಂಡ್ ಟಿ ಹಾಗೂ ಸ್ಮಾರ್ಟ ಸಿಟಿ ಅಧಿಕಾರಿಗಳೊಂದಿಗೆ ಅಲ್ಲಿನ ನಗರ ಸೇವಕರು ಮತ್ತು ರಹವಾಸಿಗಳೊಂದಿಗೆ ಜನಸಂಪರ್ಕ ಅಭಿಯಾನವನ್ನು ನಡೆಸಿದರು. ಸಭೆಯಲ್ಲಿ ವಾರ್ಡಗಳಲ್ಲಿ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳು ಹಾಗೂ ಆಗಬೇಕಾದ ಅಬಿವೃಧ್ದಿ ಕೆಲಸಗಳ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ಪ್ರಮುಖವಾಗಿ ಬೆಳಗಾವಿ ನಗರದಲ್ಲಿ ಎಲ್ ಆಂಡ್ ಟಿ ಅಧಿಕಾರಿಗಳು ನಡೆಸುತ್ತಿರುವ ೨೪*೭ ನೀರಿನ ಪೈಪಲೈನ್ ಅಳವಡಿಸುವ ಕಾಮಗಾರಿಗಳಿಂದ ನಗರದ ರಸ್ತೆಗಳು ಹಾಳಾಗಿದ್ದು, ಎಲ್ ಆಂಡ್ ಟಿ ಕಂಪನಿಯವರು ರಸ್ತೆ ಮರುಡಾಂಬರೀಕರಣ ಮಾಡಬೇಕೆಂಬ ಶರತ್ತುಗಳಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ಮರು ಡಾಂಬರೀಕರಣ ಕಾಮಗಾರಿ ವಿಳಂಬವಾಗಿರುವುದರಿಂದ ಎಲ್ ಆಂಡ್ ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬರುವ ಎರಡು ತಿಂಗಳುಗಳಲ್ಲಿ ಕಾಮಗಾರಿ ನಡೆದ ಸ್ಥಳದಲ್ಲಿ ಎರಡು ತಿಂಗಳುಗಳಲ್ಲಿ ಮರು ಡಾಂಬರಿಕರಣ ಮಾಡುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ವಾರ್ಡ ನಂ. ೩೫ ಮತ್ತು ೩೬ ರ ನಗರ ಸೇವಕರು, ಸ್ಥಳಿಯ ಹಿರಿಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Gadi Kannadiga > Local News > ಶಾಸಕ ಅನಿಲ ಬೆನಕೆಯವರಿಂದ ಜನಸಂಪರ್ಕ ಅಭಿಯಾನ