This is the title of the web page
This is the title of the web page

Please assign a menu to the primary menu location under menu

Local News

ಶಾಸಕ ಅನಿಲ ಬೆನಕೆಯವರಿಂದ ಸಾರ್ವಜನಿಕ ಶೌಚಲಯ ಉದ್ಘಾಟನೆ


ಬೆಳಗಾವಿ ೨೩ :ಶನಿವಾರದಂದು ಮಹಾನಗರ ಪಾಲಿಕೆ ಅನುದಾನದಡಿ ನಗರದ ಚೆನ್ನಮ್ಮ ವೃತ್ತದ ಬಳಿ ಸುಮಾರು ೨೨ ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗಿರುವ ಪೇ ಆಂಡ್ ಯುಸ್ ಸಾರ್ವಜನಿಕ ಶೌಚಾಲಯವನ್ನು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರು ಬೆಳಗಾವಿ ಚೆನ್ನಮ್ಮ ವೃತ್ತ ನಗರದ ಕೇಂದ್ರ ಬಿಂದು ಆಗಿದೆ. ಈ ಸ್ಥಳದಲ್ಲಿ ಸಾಕಷ್ಟು ಜನರು ಪ್ರತಿನಿತ್ಯ ಓಡಾಟ ನಡೆಸುತ್ತಾರೆ. ಹಾಗಾಗಿ ಜನರಿಗೆ ಅನುಕೂಲ ಆಗುವ ಹಿತ ದೃಷ್ಠಿಯಿಂದ ೨೨ ಲಕ್ಷ ಖರ್ಚು ಮಾಡು ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಈ ಶೌಚಾಲಯದಲ್ಲಿ ಪೇ ಆಂಡ್ ಯುಸ್ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.
ಬೆಳಗಾವಿ ನಗರದಲ್ಲಿ ನರಗುಂದಕರ ಭಾವೆಚೌಕ, ರವಿವಾರ ಪೇಟ್ ಈ ಸ್ಥಳಗಳು ಸಾಕಷ್ಟು ಜನಜಂಗುಳಿಯಿಂದ ಕುಡಿರುವುದರಿಂದ ಇಲ್ಲಿಯು ಸಹ ಶೌಚಾಲಯ ನಿರ್ಮಾಣ ಆಗಲಿದೆ. ಮುಂದಿನ ಒಂದು ತಿಂಗಳಲ್ಲಿ ಆ ಶೌಚಾಲಯಗಳು ಸಹ ಜನರ ಬಳಕೆಗೆ ಬರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆರೋಗ್ಯ ನೀರಿಕ್ಷಕರಾದ ಸುವರ್ಣ ಪವಾರ ಸೇರಿದಂತೆ ಗುತ್ತಿಗೆದಾರರು, ಇಂಜಿನೀಯರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Gadi Kannadiga

Leave a Reply