ಸವದತ್ತಿ: ಇಂದು ನಮ್ಮ ಯುವ ಪೀಳಿಗೆಗಳು ಸಲ್ಲದ ದುಶ್ಚಟಗಳಿಗೆ ದಾಸರಾಗಿ ತಮ್ಮ ಸುಂದರ ಬದುಕನ್ನೆ ಹಾಳು ಮಾಡಿಕೊಳ್ಳುತ್ತಿರುವುದು. ನೋವಿನ ಸಂಗತಿಯಾಗಿದೆ ಎಂದು ಶಿರಗುಪ್ಪಿ ಬಸವ ಭವನದ ಶರಣರಾದ ಬಸವರಾಜ ವೆಂಕಟಾಪೂರ ಹೇಳಿದರು.
ಶ್ರಾವಣ ಮಾಸ ನಿಮಿತ್ಯ ಒಂದು ತಿಂಗಳವರೆಗೆ ಹಮ್ಮಿ???ಂಡ ಮನೆ ಮನೆಗೆ ಬಸವಜ್ಯೋತಿ ಕಾರ್ಯಕ್ರಮ ಪ್ರತಿ ದಿನದಂದು ಬೆಳಗ್ಗೆ ಪಟ್ಪಣದ ಓಣಿಗಳಲ್ಲಿ ಸಂಚರಿಸಿ, ದುಶ್ಚಟಗಳನ್ನು ತ್ಯಜಿಸಲು ಸಭೆ ಮುಖಾಂತರ ಯುವಕರಿಗೆ ಅವರು ಸಂದೇಶ ನೀಡಿದರು.
ಯುವಕರು ಇತ್ತೀಚಿಗೆ ಹೆಚ್ಚು ಹೆಚ್ಚು ದುಶ್ಚಟಗಳ ದಾಸರಾಗಿ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ರೋಗಗಳಿಗೆ ತುತ್ತಾಗಿ ಸಾವಿಗಿಡಾಗುತ್ತಿದ್ದಾರೆ. ಇದರಿಂದ ಮುಂದಿನ ಭವಿಷ್ಯದಲ್ಲಿ ಮಕ್ಕಳನ್ನೇ ಆಶ್ರಯಿಸುವ ತಂದೆ ತಾಯಿಗಳು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಆದ್ದರಿಂದ ದುಶ್ಚಟಗಳನ್ನು ಮುಚ್ಚುಮರೆಯಿಲ್ಲದೆ ಶ್ರೀಗಳ ಜೋಳಿಗೆಗೆ ಹಾಕಿ ವ್ಯಸನ ಮುಕ್ತ ವ್ಯಕ್ತಿಗಳಾಗಿ ರೂಪುಗೊಳ್ಳಿರಿ ಎಂದು ಶರಣರಾದ ಬಸವರಾಜ ವೆಂಕಟಾಪೂರ ಸಲಹೆ ನೀಡಿದರು. ಈ ವೇಳೆ ಸವದತ್ತಿ ಶರಣ ಸಂಗಮದ ಸದಸ್ಯರು ಹಾಗೂ ಬಸವಾಭಿಮಾನಿಗಳು ಇದ್ದರು.