ಬೆಳಗಾವಿ, ಸೆ.೦೪ : ಸರ್ಕಾರದ ಪ್ರಮುಖ ಯೋಜನೆಗಳು ಸಮರ್ಪಕ ಬಳಕೆಯಾಗಬೇಕು. ಅಧಿಕಾರಿಗಳು ವಿನಾಕಾರಣ ನೆಪ ಹೇಳದೆ, ಜಿಲ್ಲೆಯಲ್ಲಿ ಬಾಕಿಯಿರುವ ವಿವಿಧ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ (ಸೆ.೦೪) ನಡೆದ ೨೦೨೩-೨೪ ನೇ ಸಾಲಿನ ಜಿಲ್ಲಾ ಮಟ್ಟದ ದಿಶಾ ಸಮಿತಿ ತ್ರೆöÊಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಜಮೀನುಗಳ ಪಂಪ್ ಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಈ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಕೃಷಿ ಚಟುವಟಿಕೆಗಳಿಗೆ ಕನಿಷ್ಠ ೮ ಗಂಟೆಯ ವಿದ್ಯುತ್ ಪೂರೈಕೆಯಾಗಬೇಕು. ವಿದ್ಯುತ್ ಪೂರೈಕೆಯಲ್ಲಿ ಈಗಾಗಲೇ ಹಲವಾರು ತಾಂತ್ರಿಕ ದೋಷಗಳು ಕಂಡು ಬರುತ್ತಿದ್ದು, ತ್ವರಿತ ದುರಸ್ತಿ ಕಾಮಗಾರಿಗಳನ್ನು ಕೈಗೊಂಡ ಯಾವುದೇ ರೀತಿಯ ವಿದ್ಯುತ್ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಹಾಳಾಗದಂತೆ ಎಚ್ಚರಿಸಿ:
ಕುರಿಯುವ ನೀರು ಪೂರೈಕೆಗೆ ಪೈಪ್ ಲೈನ್ ಗಳನ್ನು ಅಳವಡಿಸಲು ಬೇಕಾಬಿಟ್ಟಿ ರಸ್ತೆಗಳು ಹಾಳಾಗುತ್ತಿವೆ. ಪೈಪ್ ಲೈನ್ ಅಳವಡಿಸುವಾಗ ರಸ್ತೆಗಳನ್ನು ಹಾಳು ಮಾಡದಂತೆ ಗುತ್ತಿಗೆದಾರರಿಗೆ ತಿಳಿಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚಿಸಬೇಕು.ಕಾಮಗಾರಿ ಪೂರ್ಣಗೊಂಡಲ್ಲಿ ಹಾಳಾದ ರಸ್ತೆಗಳ ದುರಸ್ತಿಗೆ ಕ್ರಮ ವಹಿಸಬೇಕು. ಒಂದುವೇಳೆ ದುರಸ್ತಿ ಮಾಡದ ಗುತ್ತಿಗೆದಾರರ ಬಿಲ್ ತಡೆ ಹಿಡಿದು, ಸರ್ಕಾರದ ಅನುದಾನ ಪೋಲ್ ಆಗದಂತೆ ನೋಡಿಕೊಳ್ಳಬೇಕು ಎಂದು ಈರಣ್ಣ ಕಡಾಡಿ ಅವರು ತಿಳಿಸಿದರು. ಜಿಲ್ಲೆಯಲ್ಲಿ ಬೀಜ ರಸಗೊಬ್ಬರಗಳು ಸಂಪೂರ್ಣ ಪುರೈಕೆಯಾಗಿವೆ ಯಾವುದೇ ರೀತಿಯ ಕೊರತೆಯಾಗಿಲ್ಲ.
ಜಿಲ್ಲೆಯ ೧೧ ತಾಲೂಕುಗಳಲ್ಲಿ ಕೆಲವೆಡೆ ಮಳೆಯಾಗದ ಕಾರಣ ಬರ ಪ್ರದೇಶಗಳನ್ನು ಗುರುತಿಸಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರು ವಿವರಿಸಿದರು.
ಬೆಳೆ ವಿಮೆಗಳ ಕ್ಲೆöÊಮ್ ಗೆ ಕ್ರಮ ವಹಿಸಿ:
ಈಗಾಗಲೇ ಕೃಷಿ ಬೆಳೆಗಳಿಗೆ ವಿಮಾ ಮಾಡಿಸಲಾಗಿದ್ದು, ವಿಮಾ ಕಂಪನಿಯವರು ಕೇವಲ ಬೆಳೆ ವಿಮಾ ಕಂತು ಭರಿಸಿಕೊಳ್ಳುವುದು ಮಾತ್ರವಲ್ಲದೇ ಆಯೋಜಿತ ಸಭೆಗಳಿಗೆ ಹಾಜರಾಗಬೇಕು. ಹಾಳಾಗಿರುವ ಬೆಳೆಗಳ ಕುರಿತು ಗಮನ ಹರಿಸಿ, ಕೂಡಲೇ ವಿಮೆ ಕ್ಲೆöÊಮ್ ಗೆ ಕ್ರಮ ವಹಿಸಲು ಸೂಚಿಸುವುದಾಗಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಈರಣ್ಣ ಕಡಾಡಿ ಅವರು ತಿಳಿಸಿದರು.
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ನೋಂದಾಯಿತ ರೈತರಿಗೆ ೧೪ನೇ ಕಂತು ಬಿಡುಗಡೆ ಮಾಡಲಾಗಿದೆ. ಕೆಲವರು ಈವರೆಗೂ ಇ-ಕೆವೈಸಿ ಮಾಡದೆ ಇರುವುದರಿಂದ ಬ್ಯಾಂಕ್ ಖಾತೆಗಳಲ್ಲಿ ಕಂತು ಜಮೆಯಾಗಿಲ್ಲ. ಇ-ಕೆವೈಸಿ ಮಾಡಿಸದ ರೈತರು, ಹೊಸ ಕೃಷಿಕರು ಕೆವೈಸಿ ಅಪ್ಡೇಟ್ ಮಾಡಲು ತಿಳಿಸಲಾಗುವುದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಈ ವೇಳೆ ಮಾತನಾಡಿದ ಸಂಸದೆ ಮಂಗಳಾ ಅಂಗಡಿ ಅವರು ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಬ್ಸಿಡಿ ಸಿಲಿಂಡರ್ ಒದಗಿಸಬೇಕು. ಈಗಾಗಲೇ ಸಿಲಿಂಡರ್ ಪಡೆಯಲು ಬೇಡಿಕೆಯಿದ್ದು, ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು ಎಂದು ತಿಳಿಸಿದರು. ಪ್ರತಿ ಸಿಲೆಂಡರ್ ಮೇಲೆ ೨೦೦ ರೂಪಾಯಿ ಕಡಿಮೆಗೊಳಿಸಿ ದರ ಪರಿಷ್ಕರಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಮರು ಪ್ರಾರಂಭಕ್ಕೆ ನಿರ್ದೇಶನ ನೀಡಿದೆ. ಮುಂದಿನ ದಿನಗಳಲ್ಲಿ ಉಜ್ವಲ ಯೋಜನೆಯಡಿ ಜಿಲ್ಲೆಯಲ್ಲಿ ವಿತರಿಸಲಾದ ಸಿಲಿಂಡರ್ ಗಳ ಅಂಕಿ ಅಂಶಗಳ ಮಾಹಿತಿ ಒದಗಿಸಲಾಗುವುದು ಎಂದು ಸಂಬಂಧಿತ ಅಧಿಕಾರಿಗಳು ವಿವರಿಸಿದರು.
ಡಿಜಿಟಲ್ ಮ್ಯಾಪಿಂಗ್:
ಈಗಾಗಲೇ ೮೭ ಗ್ರಾಮಗಳಲ್ಲಿ ಡ್ರೋನ್ ಮೂಲಕ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡಲಾಗಿದೆ. ಕೃಷಿ ಜಮೀನು ಸರ್ವೆಗೆ ಈವರೆಗೂ ಯಾವುದೇ ರೀತಿಯ ಆದೇಶ ನೀಡಿಲ್ಲ, ಗ್ರಾಮಗಳಲ್ಲಿನ ಜನ ವಸತಿ ಪ್ರದೇಶಗಳನ್ನು ಮ್ಯಾಪಿಂಗ್ ಮಾಡಲಾಗುವುದು. ಸದ್ಯ ೧೨೦೯ ಗ್ರಾಮಗಳನ್ನು ಸರ್ವೇ ಮಾಡಲಾಗಿದೆ ಎಂದು ಭೂ ಮಾಪನ ಇಲಾಖೆಯ ಅಧಿಕಾರಿಗಳು ಹೇಳಿದರು.
ಅದೇ ರೀತಿಯಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಪ್ರತಿ ಸದಸ್ಯರಿಗೆ ೫ ಕೆಜಿ ಅಕ್ಕಿ ಹಾಗೂ ೫ ಕೆಜಿ ಅಕ್ಕಿ ಬದಲಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಪ್ರತಿ ವರ್ಷ ಏರಿಕೆ ಪ್ರಮಾಣವಿತ್ತು ಆದರೆ ಈ ವರ್ಷ ಮಳೆ ವಿಳಂಬವಾದ ಕಾರಣ ಬೆಳಗಳ ಪ್ರಮಾಣ ಕಡಿಮೆಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು. ನರೇಗಾ, ಫಸಲ್ ಭಿಮಾ, ಪಿಎಂ ಆವಾಸ್ ಯೋಜನೆ, , ಕೃಷಿ ಬೋರವೆಲ್, ವ್ಯವಸ್ಥಿತ ಶಾಲಾ ಕೊಠಡಿ, ರಸ್ತೆ, ಚರಂಡಿ ನಿರ್ಮಾಣ ಹಾಗೂ ಪೋಷಣ್ ಅಭಿಯಾನ, ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸಂಸದೆ ಮಂಗಳಾ ಅಂಗಡಿ ಅವರು ಸೂಚಿಸಿದರು.
ಸಂಸದರ ಆದರ್ಶ ಗ್ರಾಮ:
ಸಂಸದರು, ಅಧಿಕಾರಿಗಳು ಸ್ವ-ಇಚ್ಛಾಶಕ್ತಿಯಿಂದ ಆದರ್ಶ ಗ್ರಾಮಗಳು ನಿರ್ಮಾಣವಾಗುತ್ತವೆ. ಇದಕ್ಕೆ ಪೂರಕವಾಗಿ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಿದೆ. ಗ್ರಾಮಗಳಲ್ಲಿ ಬ್ಯಾಂಕ್, ಬಸ್, ಸಾಲ ಸೌಲಭ್ಯ, ಆರೋಗ್ಯ, ಶಿಕ್ಷಣ, ಕೃಷಿ ಚಟುವಟಿಕೆ ಸೇರಿದಂತೆ ಎಲ್ಲ ಸೌಲಭ್ಯಗಳು ಅಗತ್ಯ ಪ್ರಮಾಣದಲ್ಲಿ ದೊರೆತಾಗ ಆದರ್ಶ ಗ್ರಾಮವಾಗಲು ಸಾಧ್ಯ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಿಳಿಸಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್, ನಗರ ಉಪ ಪೊಲೀಸ್ ಆಯುಕ್ತರಾದ ಹೆಚ್.ಟಿ ಶೇಖರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರದ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಲಕ್ಷö್ಮಣ ಬಬಲಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ್ ಕೋಣಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ ತೋಟಗಾರಿಕೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ರಾಜೀವ್ ಕೂಲೇರ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪ್ಥಿತರಿದ್ದರು.
Gadi Kannadiga > Local News > ಜಿಲ್ಲಾಡಳಿತ, ಜಿಲ್ಲಾ ಮಟ್ಟದ (ದಿಶಾ) ಸಮಿತಿಯ ತ್ರೆöÊಮಾಸಿಕ ಸಭೆ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ: ಈರಣ್ಣ ಕಡಾಡಿ
ಜಿಲ್ಲಾಡಳಿತ, ಜಿಲ್ಲಾ ಮಟ್ಟದ (ದಿಶಾ) ಸಮಿತಿಯ ತ್ರೆöÊಮಾಸಿಕ ಸಭೆ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ: ಈರಣ್ಣ ಕಡಾಡಿ
Suresh04/09/2023
posted on
