ಕೊಪ್ಪಳ ಅ. ೧೦: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಎನ್.ಸಿ.ಸಿ. ವಿಭಾಗದಿಂದ ಕ್ವಿಟ್ ಇಂಡಿಯಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ರಾಜು ಹೊಸಮನಿ ಅವರು ಮಾತನಾಡುತ್ತಾ ದೇಶದ ಸ್ವಾತಂತ್ರö್ಯಕ್ಕೆ ತಮ್ಮ ತನು-ಮನ-ಧನವನ್ನು ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಿದರು. ಅಲ್ಲದೇ ಗಾಂಧೀಜಿಯವರ ತ್ಯಾಗ, ಅಹಿಂಸಾವಾದ ಮತ್ತು ಸತ್ಯಾಗ್ರಹದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿ, ಭಾರತ ಬಿಟ್ಟು ತೊಲಗಿ ಎಂಬ ಘೋಷ ವಾಕ್ಯದ ಮಹತ್ವವನ್ನು ವಿಸ್ತರಿಸಿ ಹೇಳಿದರು. ಎಲ್ಲಾ ಎನ್.ಸಿ.ಸಿ. ಕ್ಯಾಡೆಟ್‌ಗಳಿಗೆ ದೇಶಪ್ರೇಮ ಮತ್ತು ವಿಶ್ವಬಂಧುತ್ವದ ಭಾವನೆಯನ್ನು ಅಳವಡಿಸಿಕೊಂಡು ಸಮಾಜದಲ್ಲಿ ಅದರ ಧ್ಯೇಯ ಉದ್ದೇಶಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ. ಕರಿಬಸವೇಶ್ವರ ಅವರು ವಹಿಸಿಕೊಂಡು ಮಾತನಾಡುತ್ತಾ ಎನ್.ಸಿ.ಸಿ. ಕ್ಯಾಡೆಟ್‌ಗಳ ಶಿಸ್ತು, ಸಮಯಪ್ರಜ್ಞೆ ಮತ್ತು ದೇಶಾಭಿಮಾನದ ಬಗ್ಗೆ ಇರುವ ಅವರ ಕಾಳಜಿಯನ್ನು ನೋಡಿ ಶ್ಲಾಘಿಸುತ್ತಾ; ಕ್ವಿಟ್ ಇಂಡಿಯಾ ಚಳುವಳಿಯ ಬಗ್ಗೆ ವಿವರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಗಾಂಧೀಜಿ, ಸುಭಾಷ್ ಮತ್ತು ತಿಲಕರು ದೇಶಕ್ಕಾಗಿ ತಮ್ಮ ಜೀವನವನ್ನು ಹೇಗೆ ಮುಡಿಪಾಗಿಟ್ಟು ಸ್ವಾತಂತ್ರö್ಯವನ್ನು ತಂದುಕೊಟ್ಟರು ಎಂಬುದರ ಕುರಿತು ವಿವರವಾಗಿ ತಿಳಿಸಿದರು.
ಎನ್.ಸಿ.ಸಿ. ಅಧಿಕಾರಿಗಳಾದ ಕ್ಯಾಪ್ಟನ್ ದಯಾನಂದ ಸಾಳುಂಕೆ ಅವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಸಿ.ಸಿ. ಸೀನಿಯರ್ ಕ್ಯಾಡೆಟ್‌ಗಳಾದ ಪ್ರೀತಿ ಎಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಎಲ್ಲಾ ಎನ್.ಸಿ.ಸಿ. ಕ್ಯಾಡೆಟ್‌ಗಳು ಕ್ವಿಟ್ ಇಂಡಿಯಾ ಜಾಥಾದಲ್ಲಿ ಪಾಲ್ಗೊಂಡು ಜನಜಾಗೃತಿಯನ್ನು ಮೂಡಿಸಿದರು.