ಕುಷ್ಟಗಿ :- ಸೆಪ್ಟೆಂಬರ್ 28 ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ತಾಲೂಕಿನ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರೇಬಿಸ್ ಜಾಗೃತಿ ಕಾರ್ಯಕ್ರಮ ಮತ್ತು ಶ್ವಾನಗಳಿಗೆ ಗಳಿಗೆ ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಡಾಕ್ಟರ್ ಸಿದ್ದಲಿಂಗಯ್ಯ ಶಂಕೀನ್ ಹಿರಿಯ ಪಶು ವೈದ್ಯಾಧಿಕಾರಿಗಳು ಮಾತನಾಡಿದರು.
ಭಾರತವು ಏಷ್ಯಾ ಖಂಡದಲ್ಲಿ ಮಾರಣಾಂತಿಕ ರೇಬೀಸ್ ರೋಗಕ್ಕೆ ತುತ್ತಾಗಿ ,ಸಾವು ಸಂಭವಿಸುವುದರಲ್ಲಿ ಮೊದಲನೇ ಸ್ಥಾನದಲ್ಲಿದ್ದು. ಆದ್ದರಿಂದ ಕೇಂದ್ರ ಸರಕಾರ 2030 ರ ಇಸವಿಯ ಒಳಗೆ ರೇಬೀಸ್ ಮುಕ್ತ ವನ್ನಾಗಿ ಮಾಡಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಈ ರೋಗದ ಬಗ್ಗೆ ಜಾಗೃತಿ ವಹಿಸಬೇಕು ಎಂದರು. ರೇಬೀಸ್ ರೋಗದಿಂದ ದೇಶದಲ್ಲಿ 30 ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿದೆ. ಶೇಕಡ 90ರಷ್ಟು ನಾಯಿಗಳಿಂದಲೇ ರೇಬೀಸ್ ಕಾಯಿಲೆ ಬರುತ್ತಿದ್ದು ಮಕ್ಕಳು ಅಧಿಕ ಸಂಖ್ಯೆಯಲ್ಲಿ ರೋಗಕ್ಕೆ ತುತ್ತಾಗುತ್ತಿದ್ದು ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಎಚ್ಚರ ವಹಿಸುವುದು ಅಗತ್ಯ ಎಂದು ಡಾಕ್ಟರ್ ಸಿದ್ದಲಿಂಗಯ್ಯ ಶಂಕೀನ್ ತಿಳಿಸಿದರು.
ಸಾಕುಪ್ರಾಣಿಗಳು ಬೀದಿ ನಾಯಿ ಅಥವಾ ಬೇರೆ ಯಾವುದೇ ಪ್ರಾಣಿಗಳು ಕಚ್ಚಿದರೆ ಪರಿಚಿದರೆ ಆಯಾ ಗಾಯಕ್ಕೆ ಸೋಪು ಹಚ್ಚಿ ಶುದ್ಧ ನೀರಿನಲ್ಲಿ ತೊಳೆಯಬೇಕು 24 ಗಂಟೆ ಒಳಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಸುಣ್ಣ ಹಚ್ಚುವುದು ಬ್ಯಾಂಡೇಜ್ ಬಟ್ಟೆ ಗಟ್ಟಿಯಾಗಿ ಕಟ್ಟಿಕೊಳ್ಳುವುದು ಪದ್ಧತಿ ಬಿಡಬೇಕು ಎಂದರು. ಒಮ್ಮೆ ಸೋಂಕು ತಗಲಿದರೆ ಮರಣ ಖಚಿತ ಅದಕ್ಕಾಗಿ ಯಾವುದೇ ನಿರ್ಲಕ್ಷ ತೋರದೇ ಜನರು 5 ಇಂಜಕ್ಷನ್ ಪಡೆದುಕೊಳ್ಳಬೇಕು. ಇದು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಿದೆ ಕೆಲವರು ಒಂದೆರಡು ಡೋಸ್ ಮಾತ್ರ ಪಡೆಯುತ್ತಾರೆ ಇದರಿಂದ ರೇಬೀಸ್ ಆತಂಕ ತಪ್ಪುವುದಿಲ್ಲ.ಪ್ರಾಣಿಗಳನ್ನು ಸಾಕುವವರು ಮುಂಜಾಗ್ರತ ಕ್ರಮವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಮತ್ತು ಸಾಕಿದ ಪ್ರಾಣಿಗಳಿಗೂ ಮುಂಜಾಗ್ರತ ಕ್ರಮವಾಗಿ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಈ ಶಿಬಿರದಲ್ಲಿ ತಾಲೂಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಬಾಲಾಜಿ ಬಳಿಗಾರ, ಪದಾಧಿಕಾರಿಗಳಾದ ಶ್ರೀನಿವಾಸ್ ನಾಯಕ, ಶಿವಪ್ಪ ವಾಗಮೋರೆ,ಕಾಲೇಜು ಪ್ರಾಚಾರ್ಯರಾದ ಶ್ರೀಕಾಂತ್ ಗೌಡ ಪಾಟೀಲ್, ಶಿಕ್ಷಕರಾದ ಉಮೇಶ್ ವಿ, ಇತರೆ ಶಿಕ್ಷಕರು ಹಾಗೂ ಪಶುಪಾಲನಾ ಇಲಾಖೆ ಸಿಬ್ಬಂದಿಗಳಾದ ಸಂಗಪ್ಪ, ಪ್ರವೀಣ್, ಸಿದ್ದು, ಸೌಮ್ಯ, ವೀರೇಶ್, ಕರಿಂಸಾಬ್, ಮತ್ತು ವಿದ್ಯಾರ್ಥಿಗಳು ಜಾಗೃತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ