This is the title of the web page
This is the title of the web page

Please assign a menu to the primary menu location under menu

Local News

ದೃಶ್ಯ ಮಾದ್ಯಮಕ್ಕಿಂತ ರೇಡಿಯೋ ಉತ್ತಮ ತಿಳುವಳಿಕೆಯ ಸಾಧನ : ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು


ಬೆಳಗಾವಿ : ಕೆಲಸಕ್ಕೆ ತೂಂದರೆ ಮಾಡಿ, ಸಮಯ ಹಾಳು ಮಾಡವ ದೃಶ್ಯ ಮಾದ್ಯಮಕ್ಕಿಂತ ರೇಡಿಯೋ ಉತ್ತಮ ತಿಳುವಳಿಕೆಯ ಸಾಧನ ಮತ್ತು ಕೆಲಸವನ್ನು ಮಾಡುತ್ತಲೇ ನಮಗೆ ಬೇಕಾದ ಜ್ಞಾನ, ತಿಳುವಳಿಕೆ, ಕೃಷಿ ತಿಳುವಳಿಕೆ,ಅದ್ಯಯನ,ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ, ಆಗಾಗ ಬಿತ್ತರಿಸುವ ರ‍್ತೆಗಳು, ಈಗಲೂ ಮೂಡಿಬರುವ ಕರಿ ಎತ್ತ ಕಾಳಿಂಗ ,ಬಿಳಿ ಎತ್ತ ಮಾ£ಂಗ ಹೊಯ್! ಹೊಯ್! ಎನ್ನುವ ಕಿವಿಗೆ ತಂಪು £ಡುವ ಆಕಾಶವಾಣಿ ಕಾರ್ಯಕ್ರಮಗಳು ಮಾನವನ ಬುದ್ದಿ ಮಾಧ್ಯಮಕ್ಕೆ ಸದಾ ಬೆಳಕಾಗುತ್ತವೆ ಅದೇ ರೀತಿ “ನಮ್ಮೂರ ಬಾನುಲಿ” ಸಮೂದಾಯ ರೇಡಿಯೋ ಕೇಂದ್ರ ಗ್ರಾಮೀಣ ಭಾಗದ ಜನರ ಆಶಾಕಿರಣವಾಗಿದೆ ಎಂದು ಘೋಡಗೇರಿ ಶಿವಾನಂದ ಮಠದ ಮ.£.ಪ.್ರಸ್ವ ಮಲ್ಲಯ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಜಿಲ್ಲೆಯ ಹುಕ್ಕೇರಿ ತಾಲೂಕಿನ ಕರಗುಪ್ಪಿ-ಯಲ್ಲಾಪೂರ ಗ್ರಾಮದ ಶ್ರೀ ಸೋಮನಾಥ ಮಂದಿರದ ಕಲ್ಯಾಣ ಮಂಟಪದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನೂಲಿ ಸಮುದಾಯ ರೇಡಿಯೋ ಕೇಂದ್ರದ ಏಳನೇ ವಾರ್ಷಿಕ ಮಹಾಸಭೆ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ನಡೆದ ಬಾನುಲಿ ಕೇಂದ್ರದ ಕಾರ್ಯ ಸಾಧನೆಗಳ ಸಮ್ಮೇಳನದಲ್ಲಿ ಮಾತನಾಡಿ ಸಾಮಾಜಿಕ ಜಾಲತಾಣದಿಂದ ಆಗುವ ಲಾಭ ನಷ್ಟ ದ ಬಗ್ಗೆ ಹೇಳುವದಾದರೆ ಇಂದಿನ ಮಕ್ಕಳು ಮೊಬೈಲ£ಂದ ಹಾಳಾಗುತ್ತಿರುವ ಸಂಗತಿಗಳು ಬೆಳಕಿಗೆ ಪತ್ರಿಕೆಯ ಮುಖಾಂತರವೇ ಬರುತ್ತಿದ್ದು ಇಂದು ರೇಡಿಯೋ ಮಾತ್ರ ಬಳಕೆ ಮಾಡುವ ವ್ಯಕ್ತಿಗಳಲ್ಲಿ ನಾನು ಒಬ್ಬ ಎಂದು ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಹೇಳಿದರು.
ಕರ್ನಾಟಕ ಪತ್ರಕರ್ತರÀ ಸಂಘದ ರಾಜ್ಯಾದ್ಯಕ್ಷ ಮುರುಘೇಶ ಶಿವಪೂಜಿ ಮಾತನಾಡಿ ನಾವೆಲ್ಲ ಬೆಳೆದದ್ದು ಕಲಿತಿದ್ದು ನಾಗನೂರ ಮಠದ ಶಿಕ್ಷಣ ಸಂಸ್ಥೆಯಲ್ಲಿ ನಮಗೆ ಕಲಿಸಿದ ಶ್ರೇಷ್ಠ ಶಿಕ್ಷಕರು ಎಂ ಎಸ್ ಚೌಗಲಾ ಅವರ ಪತ್ನಿ ಅವರು ಸಹಿತಾ ಸರ್ಕಾರಿ ನೌಕರರು ಅವರು ಸೇವಾ £ವೃತ್ತಿ ನಂತರ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳದೇ ಮಹಿಳಾ ಕಲ್ಯಾಣ ಎಂಬುವ ಕಲ್ಯಾಣ ಸಂಸ್ಥೆಯನ್ನು ಸ್ಥಾಪಸಿ, ಬಡವರ, £ರ್ಗತಿಕರ À,ನೊಂದ ಮಹಿಳೆಯರ, ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಆಶ್ರಯ, ಶಿಕ್ಷಣ, ಊಟ, ವಸತಿ ಹಾಗೂ ವೃದ್ದಶ್ರಮಗಳನ್ನು ತಾವೇ ಮುಂದೇ £ಂತು ಸಾಮಾನ್ಯರಂತೆ ಕಾರ್ಯ ಮಾಡುವ ಇವರು ಕಾಯಕ ಶ್ರೇಷ್ಠವಾದದ್ದು ಮತ್ತು ಅವರಿಗೆ ಸೇವಾ ಮನೋಭಾವಣೆ ಮೂಲ ಉದ್ಧೇಶ ಹೊತು ಹಣ ಗಳಿಸುವದಲ್ಲ ಎಂದರು.
ಮಹಿಳಾ ಕಲ್ಯಾಣ ಸಂಸ್ಥೆಯ £ರ್ದೇಶಕ ಎಂ ಎಸ್ ಚೌಗಲಾ ಅವರು ಮಾತನಾಡಿ ೪೫ ವರ್ಷಗಳ ಹಿಂದೆ ೧ಬಾಲವಾಡಿ ಯೊಂದಿಗೆ ಪ್ರಾರಂಭವಾದ ಸಂಸ್ಥೆ ಇಂದು ಹತ್ತಾರು ಕಡೆಗಳಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿದೆ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಯುವುದು ಅವರಿಗೆ ಪುನರವಸತಿ ಕಲ್ಪಿಸುವುದು ಊಟ ವಸತಿ ವೈದ್ಯಕೀಯ ಸೇವೆ £Ãಡಿ ವೃತ್ತಿ ತರಬೇತಿ ಶಿಕ್ಷಣ £Ãಡಿ ಸ್ವಾವಲಂಬಿಗಳನ್ನಾಗಿಸುವುದು ,ಕಾನೂನು ನೆರವು ಪೊಲೀಸ್ ರಕ್ಷಣೆ ಮತ್ತು ಸೂಕ್ತ ಸಲಹೆ £Ãಡುವುದು ಮತ್ತು ಈ ಕುರಿತು ಸಾರ್ವಜ£ಕರಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ,ಕೌಟುಂಬಿಕ ಸಮಸ್ಯೆಗಳು ಪರಿಹಾರ ಅದಕ್ಕಾಗಿ ೨೪ ಗಂಟೆಗಳ ದೂರವಾಣಿ ಸೌಲಭ್ಯ ,£ರ್ಗತಿಕರು ಬಡವರು ತಿರಸ್ಕೃತರೂ ನೊಂದವರು ದೌರ್ಜನ್ಯಕ್ಕೆ ಮತ್ತು ಅತ್ಯಾಚಾರಕ್ಕೆ ಒಳಪಟ್ಟ ಮಹಿಳೆಯರಿಗಾಗಿಯೇ ಆಶ್ರಯ ಯೋಜನೆಯ ಅಡಿಯಲ್ಲಿ ಉಚಿತ ಊಟ ಉಪಹಾರ ವಸತಿ ವ್ಯವಸ್ಥೆ ಕಲ್ಪಿಸಿ ಅವರಿಗೆ ವೃತ್ತಿಪರ ತರಬೇತಿ £Ãಡಿ ಸ್ವಾವಲಂಬಿಗಳನ್ನಾಗಿಸಲು ಸಂಸ್ಥೆ ದುಡಿಯುತ್ತಿದೆ ,ಹೀಗೆ ಸಂಗಾತಿ ಸಾಂತ್ವನ ಉಜ್ವಲ ಆಶ್ರಯ ಸೇವಾಮಿತ್ರ ನಗರ ಕುಟುಂಬ ಕಲ್ಯಾಣ ಕೇಂದ್ರ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ತೊಟ್ಟಿಲು ಮನೆಗಳು ವೃದ್ಧಾಶ್ರಮ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಸಂಸ್ಥೆ ದುಡಿಯುತ್ತಿದೆ ಅದಕ್ಕಾಗಿ ಸರ್ಕಾರ ಇಲ್ಲಿಯವರೆಗೆ ೮ ಪ್ರಶಸ್ತಿಗಳನ್ನು £Ãಡಿ ಸಂಸ್ಥೆಯನ್ನು ಗೌರವಿಸಿದೆ ಎಂದು ಸಂಸ್ಥೆಯ ಈವರೆಗಿನ ಕಾರ್ಯವನ್ನು ವಿವರಿಸಿದರು .
ನಮ್ಮೂರ ಬಾನುಲಿ ಕೇಂದ್ರದ £ಲಯ £ರ್ದೇಶಕ ಅಕ್ಷಯ್ ಕುಲಕರ್ಣಿ ಮಾತನಾಡಿ ರೈತರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳು ಸ್ಥಳೀಯ ಸುದ್ದಿಗಳ ಪ್ರಸಾರ ಮಕ್ಕಳು ಮಹಿಳೆಯರು ಗ್ರಾಮೀಣ ಜನರಲ್ಲಿ ಅಡಗಿರುವ ಪ್ರತಿಭೆ ಅನಾವರಣ ಸರಕಾರ ಸೌಲಭ್ಯಗಳ ಬಗ್ಗೆ ಮಾಹಿತಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ದುರ್ಬಲ ವರ್ಗದವರ ಮುಖವಾಣಿಯಾಗಿ ಕೆಲಸ ಗ್ರಾಮೀಣ ಜನರಲ್ಲಿ ನಾಯಕತ್ವ ಬೆಳೆಸುವುದು ಐತಿಹಾಸಿಕ ಸಂಪ್ರದಾಯ ಹಾಗೂ ಆಚರಣೆಗಳ ಕುರಿತು ಪ್ರಸಾರ ಮಾಡುವುದು ಗ್ರಾಮೀಣ ಕಲೆಗಳ ಪುನರುಜ್ಜೀವನಕ್ಕೆ ಪ್ರಯತ್ನಿಸುವುದು ಗ್ರಾಮೀಣರ ಜ್ಞಾನಭಂಡಾರ ಹೆಚ್ಚಿಸುವುದು ಪಾರಂಪರಿಕ ಕಲೆ ಮತ್ತು ಸಂಸ್ಕöÈತಿಗೆ ಉತ್ತೇಜನ £Ãಡುವುದು ಸಮುದಾಯದ ಸಮಸ್ಯೆ ಬಗ್ಗೆ ಗಮನ ಸೆಳೆಯುವುದು ಮಕ್ಕಳಿಗಾಗಿ ಪ್ರತಿಭಾ ಕಾರಂಜಿ ಸ್ಪರ್ದೇಗಳು ಶೈಕ್ಷಣಿಕ ಕಾರ್ಯಕ್ರಮ ಹಾಡು ಕಥೆ ನಾಟಕ ವಿಜ್ಞಾನ ತಿಳುವಳಿಕೆ ಮನ ರಂಜನೆ ಬೋಧನೆ ಸಾವಯವ ಕೃಷಿ ಹವಾಮಾನ ಮಾಹಿತಿ ಪರಿಸರ ರಸಗೊಬ್ಬರಗಳ ಬಗ್ಗೆ ಜಾಗ್ರತಿ ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು ಆರೋಗ್ಯ ಜಾಗೃತಿ ಕಾರ್ಯಕ್ರಮ ಸ್ವಸಹಾಯ ಸಂಘಗಳ ಅಭಿವೃದ್ಧಿಗೆ ಕಾರ್ಯಕ್ರಮ ಜಾನಪದ ಕಲೆಗಳ ಪ್ರಸರಣ ರೈತರ ಸಾಧನೆಗಳ ಬಗ್ಗೆ ಪ್ರಚಾರ ಯುವಜನರಿಗೆ ಮುಂದಾಳತ್ವ ಕುರಿತು ಕಾರ್ಯಕ್ರಮ ಸ್ವಯಂ ಉದ್ಯೋಗ ಮತ್ತು ಉದ್ಯೋಗ ಕುರಿತು ತಜ್ಞರೊಂದಿಗೆ ಸಂದರ್ಶನ ಹಾಗೂ ನೇರ ಫೋನ್ ಇನ್ ಕಾರ್ಯಕ್ರಮಗಳು ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮತ್ತು ದುರ್ಬಲ ವರ್ಗದ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ತಮ್ಮ ರೇಡಿಯೋ ಕೇಂದ್ರದಿಂದ ಬಿತ್ತರಗೊಳಿಸಲಾಗುತ್ತದೆ ಎಂದು ವಿವರಿಸಿದರು .
ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ ಅವರು ಸ್ವಾಗತಿಸಿದರು ,ವಕೀಲರಾದ ಮಂಜುನಾಥ ತೊರಗಲ್ ,ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಪತ್ ಮುಚಳಂಬಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮಮದಲ್ಲಿ ೬೦ ವರ್ಷ ಮೀರಿದ ಐವರು ಹಿರಿಯ ಪತ್ರಕರ್ತರನ್ನು ಸನ್ಮಾ£ಸಲಾಯಿತು


Gadi Kannadiga

Leave a Reply