This is the title of the web page
This is the title of the web page

Please assign a menu to the primary menu location under menu

State

ಯಾವುದೇ ರಾಜ್ಯದ ಕನ್ನಡಿಗರ ಜೊತೆ ಸರಕಾರ ಇರುತ್ತದೆ- ರಘುನಾಥ ರಾವ ಮಲಕಾಪುರೆ


(ಚಿತ್ರ ವರದಿ ನವೀನ್ ಕೆ ಇನ್ನ)
ಮುಂಬಯಿ,ಜು.-. ನಾಡಿನ ಪ್ರತಿನಿಧಿಗಳಾಗಿ ಮಹಾನಗರ ಮುಂಬಯಿಯಲ್ಲಿ ಭಾಷೆ- ಸಂಸ್ಕೃತಿ ಉಳಿಸುವ ಕೆಲಸವನ್ನು ಮಾಡುತ್ತಿರುವುದು ಪ್ರಶಂಸಾರ್ಹ ವಿಷಯ.
ಪರ ಭಾಷೆ, ಸಂಸ್ಕೃತಿಗೆ ಗೌರವ ಸಲ್ಲಿಸುವ ಜೊತೆಗೆ ಸ್ವಂತಿಕೆಯನ್ನು ಉಳಿಸುವ ಕೆಲಸವನ್ನು ಮುಂಬಯಿ ಕನ್ನಡಿಗರು ಮಾಡುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. ದೇಶದ ಯಾವುದೇ ರಾಜ್ಯದ ಕನ್ನಡಿಗರ ಜೊತೆ ಸರಕಾರ ಇರುತ್ತದೆ. ಕನ್ನಡ ಭಾಷೆ, ಸಂಸ್ಕೃತಿ, ಸಂಸ್ಕಾರ, ಪದ್ಧತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ರಾಜ್ಯ ಸರಕಾರದ ಪ್ರತಿನಿಧಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿರುವುದು ಅಭಿನಂದನೀಯ ಎಂದು ಕರ್ನಾಟಕ ವಿಧಾನ ಪರಿಷತ್ತು ಸಭಾಪತಿಗಳು ರಘುನಾಥ ರಾವ ಮಲಕಾಪುರೆ ನುಡಿದರು.
ಅವರು ಜು.17ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಕರ್ನಾಟಕ ಸಂಘ ಅಂಧೇರಿ(ರಿ)ಚೆಂಬೂರು ಕರ್ನಾಟಕ ಸಂಘ( ರಿ) ಆಶ್ರಯದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಮುಂಬಯಿಯ ವಿವಿಧ ಕನ್ನಡಪರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹೊರ ನಾಡ ಕನ್ನಡ ಸಂಸ್ಕೃತಿ ಸಂಭ್ರಮ 2022 ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪು ಕಾರ್ಯಕ್ರಮಗಳನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಪ್ರಾಸ್ತಾವಿಕವಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಅಧ್ಯಕ್ಷ ಡಾ.ಸಿ. ಸೋಮಶೇಖರ ಐಎಎಸ್( ನಿವೃತ್ತ) ಅವರು ಮಾತನಾಡಿ
ಕನ್ನಡದ ಅಸ್ಮಿತೆಗೆ ದಕ್ಕೆ ಬರುವ ಯಾವುದೇ ಸಂದರ್ಭದಲ್ಲಿ ಪ್ರಾಧಿಕಾರ ತನ್ನದೇ ಕೊಡುಗೆ ನೀಡಲಿದೆ.
ಮುಂಬಯಿ ಹೊರನಾಡು ಎಂದು ನಾನು ಭಾವಿಸುವುದಿಲ್ಲ.
ಅದು ಕೂಡ ಗಡಿನಾಡು ಎಂದು ಹೇಳುತ್ತೇನೆ. ಮುಂಬಯಿಯ ಎಲ್ಲಾ ಕನ್ನಡ ಸಂಘಟನೆಗಳು ಒಕ್ಕೂಟ ರಚಿಸಿದರೆ ಮುಂಬಯಿ ಕನ್ನಡಿಗರಿಗೆ ಇನ್ನೂ ಹೆಚ್ಚಿನ ಬಲ ಬರ ಬಹುದು. ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಂಡು ಬರುತ್ತಿರುವ ಮುಂಬಯಿ ಕನ್ನಡಿಗರನ್ನು ಅಭಿನಂದಿಸುತ್ತೇನೆ ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷ,ಜೆರಿಮೆರಿ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್ ಎನ್ ಉಡುಪ ಅವರು ಆಶೀರ್ವಚನ ನೀಡಿ, ಇವತ್ತಿನ ಕಾರ್ಯಕ್ರಮ ಅತ್ಯಂತ ಅಭೂತಪೂರ್ವವಾದುದು. ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿ ,ದೇಶವನ್ನು ಪ್ರೀತಿಸಬೇಕು. ಸಂಸ್ಕೃತಿಯನ್ನು ಆರಾಧಿಸುವ ಬದುಕು ಸೊಗಸು. ಆ ನಿಟ್ಟಿನಲ್ಲಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ನಮ್ಮ ಭಾಷೆ ಸಂಸ್ಕೃತಿಯನ್ನು ಸದಾ ಕಾಲ ಉಳಿಸಿ ಬೆಳೆಸಬೇಕು. ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಮಕ್ಕಳು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಈ ಕಾರ್ಯಕ್ರಮಗಳಿಗೆ ಕರ್ನಾಟಕ ಸರಕಾರ ಪ್ರೋತ್ಸಾಹ ನೀಡುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು.
ಕನ್ನಡ ಸಾಧಕರ ಭಾವಚಿತ್ರ ಅನಾವರಣ ಮಾಡಿ ಹಿರಿಯ ಆರ್ಥಿಕ ತಜ್ಞ ಸಮಾಜ ಸೇವಕ ಪ್ರವೀಣ್ ಬಿ ಶೆಟ್ಟಿ ಅವರು ಮಾತನಾಡಿ ಭಾರತದ 22 ಭಾಷೆಗಳಲ್ಲಿ ಅತ್ಯಂತ ಮುದ್ದಾದ ಭಾಷೆ ಕನ್ನಡ. ಮುಂಬಯಿಯ ಹೊರನಾಡ ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿಯ ಉನ್ನತಿಗೆ ಶ್ರಮಿಸಿ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ನಮ್ಮ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ ಅವರು ಮಾತನಾಡಿ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ, ಮಾತೃ ಭಾಷೆಗೆ ಶಕ್ತಿ ಕೊಡುವಂತಹ ಕೆಲಸವನ್ನು ಕರ್ನಾಟಕ ಸರಕಾರ ಮಾಡುತ್ತಿದೆ. ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುವ, ಎಲ್ಲಾ ಕನ್ನಡಿಗರು ಒಂದಾಗಿಸುವ ಇದೊಂದು ಒಳ್ಳೆಯ ಕಾರ್ಯಕ್ರಮ. ನಾಡಿನ, ದೇಶದ ಪ್ರಗತಿಯಲ್ಲಿ ಹೊರನಾಡ ಕನ್ನಡಿಗರ ಸಾಧನೆ ,ಕೊಡುಗೆ ತುಂಬಾ ಇದೆ. ಅಂತವರನ್ನು ಗುರುತಿಸುವ, ಗೌರವಿಸುವ ಚಿಂತನೆಯನ್ನು ಸರಕಾರ
ಮಾಡಬೇಕು ಎಂದರು.
ಮುಂಬಯಿ ಸಹಾಯಕ ಪೊಲೀಸ್ ಆಯುಕ್ತ( ಐಪಿಎಸ್) ವೀರೇಶ್ ಪ್ರಭು ಅವರು ಮಾತನಾಡಿ ಕನ್ನಡಿಗರು ಹೆಮ್ಮೆ ಪಡುವ ಕಾರ್ಯಕ್ರಮ ಇದಾಗಿದೆ. ನಮ್ಮ ದೇಶದ ಪ್ರಗತಿಯಲ್ಲಿ, ಸಾಧನೆಯಲ್ಲಿ ಕನ್ನಡನಾಡಿನ ಛಾಪು ಇದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಾಡು ನಮ್ಮದು. ಕನ್ನಡ ನಾಡಿನ ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಕೆಲಸ ಆಗಬೇಕು. ಕನ್ನಡ ನಾಡಿನ ಹೊರಗಿದ್ದರೂ ಮುಂಬಯಿ ಕನ್ನಡಿಗರು ಭಾಷೆ- ಸಂಸ್ಕೃತಿಯ ಉನ್ನತಿಗಾಗಿ ಕೆಲಸ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.
ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಸುಧಾಕರ ಅರಾಟೆ ಅವರು ಮಾತನಾಡಿ ಸಂಸ್ಕೃತಿ ಸಂಭ್ರಮ ಅಂದರೆ ದೊಡ್ಡ ಹಬ್ಬ. ಇಂದಿನ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣವಿದೆ. ಮುಂಬಯಿಯಲ್ಲಿನ ಬಿಡುವಿಲ್ಲದ ಬದುಕಿಗೆ ಈ ಸಂಸ್ಕೃತಿ ಸಂಭ್ರಮ ಉತ್ಸಾಹದ ಚಿಲುಮೆಯಾಗಿದೆ. ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಕಲಾವಿದರಿಗೆ, ಅತಿಥಿ ಗಣ್ಯರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮದಲ್ಲಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಉಡುಪ ಅವರು ತೆಂಗಿನಕಾಯಿ ಹೊಡೆಯುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಆ ಬಳಿಕ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕನ್ನಡ ಸಾಧಕರ ಭಾವಚಿತ್ರಗಳ ಅನಾವರಣವನ್ನು ಹಿರಿಯ ಆರ್ಥಿಕ ತಜ್ಞರೂ ,ಸಮಾಜ ಸೇವಕರಾದ ಪ್ರವೀಣ್. ಬಿ. ಶೆಟ್ಟಿ ನೆರವೇರಿಸಿದರು. ಸಾಧಕರ ಪರಿಚಯವನ್ನು ಅಧ್ಯಾಪಕಿ ಅಮೃತಾ ಶೆಟ್ಟಿ ಇವರು ಮಾಡಿದರು. ಆ ಬಳಿಕ ಕರ್ನಾಟಕ ಸಂಘ ಅಂಧೇರಿ
ಸಂಘದ ಮಹಿಳಾ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷರಾದ ಅಡ್ವಕೇಟ್ ಸುಧಾಕರ ಆರಾಟೆ ಇವರ ಉಪಸ್ಥಿತಿಯಲ್ಲಿ “ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ -2022 ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ರಘುನಾಥ ರಾವ ಮಲಕಾಪುರೆ ಮಾಡಿದರು.
ಕರ್ನಾಟಕ ಸಂಘ ಅಂಧೇರಿ ಅಧ್ಯಕ್ಷ ಭಾಸ್ಕರ್ ಸುವರ್ಣ ಸಸಿಹಿತ್ಲು ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ
ದಯಾಸಾಗರ ಚೌಟ ಅತಿಥಿಗಳನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಅಥಿತಿಗಳಾಗಿ ಕರ್ನಾಟಕ ಗಡಿ ಪ್ರಾಧಿಕಾರ ಕರ್ನಾಟಕ ಸರಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಬಾಬಾ ಗ್ರೂಪ್ ಸಿ ಎಂ ಡಿ ಮಹೇಶ್ ಶೆಟ್ಟಿ, ಉದ್ಯಮಿ ಗಣಪತಿ ಶೇರೆಗಾರ್, ಮಾಜಿ ನಗರ ಸೇವಕ ಅಶೋಕ್ ಕರಟ್ ಮಲ್, ಚೆಂಬೂರು ಕರ್ನಾಟಕ ಸಂಘದ ಕಾರ್ಯದರ್ಶಿ
ದೇವದಾಸ್ ಶೆಟ್ಟಿಗಾರ್, ಕರ್ನಾಟಕ ಸಂಘ ಅಂಧೇರಿ ಇದರ ಮಾಜಿ ಅಧ್ಯಕ್ಷ ಹ್ಯಾರಿ ಸಿಕ್ವೇರಾ, ಸಲಹೆಗಾರ ಪುತ್ತೂರು ಧನಂಜಯ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುರೇಖಾ ಎಸ್ ಶೆಟ್ಟಿ
ಟೆಕ್ನಿಕ್ ಗ್ರೂಪ್ ಎಮ್. ಡಿ. ನಾಗರಾಜ ಪಡುಕೋಣೆ, ಲಲಿತಾ ಟ್ರೇಡರ್ಸ್ ನ ಮಾಧವ ಶೆಟ್ಟಿ, ಭ್ರಮರಾಂಬಿಕಾ ದೇವಸ್ಥಾನ ಪೂಜಾ ಸಮಿತಿ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಸಫೇದ್ ಪೂಲ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಕವಿ ಭೋಜರಾಜ ಶೆಟ್ಟಿ ವಿರಚಿತ ” ಕಲ್ಪವೃಕ್ಷ “ಮತ್ತು “ಕಾಮಧೇನು ” ಕೃತಿಯನ್ನು ರಘುನಾಥ ರಾವ್ ಮಲಕಾಪುರೆ ಹಾಗೂ ಡಾ.ಸಿ. ಸೋಮಶೇಖರ ಬಿಡುಗಡೆ ಮಾಡಿದರು.
ಕೃತಿ ಪರಿಚಯವನ್ನು ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಮಾಡಿದರು. ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ
ತುಳು ಅಧ್ಯಯನ ಪೀಠ ಮಂಗಳೂರು ಸದಸ್ಯರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತು ತಜ್ಞ ” ವಾಸ್ತು ಮಾರ್ತಾಂಡ ” ಬಿರುದಾಂಕಿತ ಪಂಡಿತ್ ನವೀನ್ ಚಂದ್ರ ಆರ್. ಸನಿಲ್, ಕವಿ, ಸಾಹಿತಿ ಹಾಗೂ ಯಕ್ಷಗಾನ ಪ್ರಸಂಗಕರ್ತ ಉದನೇಶ್ವರ ಪ್ರಸಾದ್ ಭಟ್ ಮೂಲಡ್ಕ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸ್ವಾಗತ ಸಮಿತಿಯ ಸಂಚಾಲಕ ಬಾಬ ಪ್ರಸಾದ ಅರಸ ಮಾಡಿದರು.
ಆ ಬಳಿಕ ರಾಷ್ಟ್ರಭಕ್ತಿ- ನಾಡ ಪ್ರೀತಿ ಕನ್ನಡ ಸಮೂಹ ಗಾಯನ ಸ್ಪರ್ಧೆ ನಡೆಯಿತು. ಕಾರ್ಯಕ್ರಮಕ್ಕೆ ಆರುಣ್ ಕುಮಾರ್ ಶೆಟ್ಟಿ ಮತ್ತು ಪ್ರಮೋದ ಶೆಟ್ಟಿ ಚಾಲನೆ ನೀಡಿದರು. ನಿರೂಪಣೆಯನ್ನು ವಿದುಷಿ ಶ್ಯಾಮಲಾ ರಾಜೇಶ್ ಮಾಡಿದರು. ತೀರ್ಪುಗಾರರಾಗಿ ಲಕ್ಷ್ಮಿ ರಾಜಶೇಖರ್, ಶೈಲಜಾ ಶೆಟ್ಟಿ, ಅಂತರಾಷ್ಟ್ರೀಯ ಗಾಯಕ ಗೋನಾ ಸ್ವಾಮಿ ಸಹಕರಿಸಿದರು. ಆ ಬಳಿಕ ಮಧು ಅಶೋಕ್ ವಸ್ತ್ರದ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗಳಾಗಿ ವೇಣುಗೋಪಾಲ್ ಶೆಟ್ಟಿ ಇನ್ನಂಜೆ, ಆಲೂರು ಪಿ ಸುಧಾಕರ್, ಗಾಯತ್ರಿ ನಾಗೇಶ್, ಜಯಲಕ್ಷ್ಮಿ ಪಿ ಶೆಟ್ಟಿ, ಪ್ರಭಾಕರ ಶೆಟ್ಟಿ, ಪ್ರಪುಲ್ಲಾ ಡಿ ಶೆಟ್ಟಿ, ಅಲ್ಲದೆ ಉಮಾ ಕೃಷ್ಣ ಶೆಟ್ಟಿ ಭಾಗವಹಿಸಿದರು. ರಂಗನಟ ನಿರ್ದೇಶಕ ನಾರಾಯಣ ನಂದಳಿಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಕವಿ ಗೋಷ್ಠಿ ಬಳಿಕ ವಿವಿಧ ಕನ್ನಡ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದ ಗೋನಾ ಸ್ವಾಮಿ ಇವರಿಂದ ಜಾನಪದ ಗಾಯನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ರಂಗ ಕಲಾವಿದ, ಸಂಘಟಕ ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ ನಿರೂಪಿಸಿದರು.ಆ ಬಳಿಕ ಮುಂಬಯಿಯಲ್ಲಿ ಕನ್ನಡಿಗರ ಆರ್ಥಿಕ ,ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪರಿಸ್ಥಿತಿಯ ಒಂದು ಅವಲೋಕನ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಿತು . ಉದ್ಯಮಿ ರವಿ ಶೆಟ್ಟಿ ಮತ್ತು ಪ್ರಮೀಳಾ ದಂಪತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಎಸ್ಎಂ ಶೆಟ್ಟಿ ಕಾಲೇಜು ಪ್ರಾಂಶುಪಾಲರಾದ ಡಾ. ಶ್ರೀಧರ್ ಶೆಟ್ಟಿ, ಹಿರಿಯ ಪತ್ರಕರ್ತರು, ದಯಾಸಾಗರ್ ಚೌಟ ಮಂಡಿಸಿದರು. ಮುಂಬಯಿಯಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ವಿಷಯ ಮಂಡನೆಯನ್ನು ಶಾರದಾ ಹೈ ಸ್ಕೂಲ್ ಮುಖ್ಯೋಪಾಧ್ಯಾಯರು ವನಿತಾ ಶೆಟ್ಟಿ, ಅಧ್ಯಾಪಕಿ ವಿಜೇತ ಮಹೇಶ್ ಸುವರ್ಣ ಮಾಡಿದರು. ವಿಚಾರ ಸಂಕಿರಣ ಬಳಿಕ ನೃತ್ಯ ಸ್ಪರ್ಧೆ ನಡೆಯಿತು. ಸಾವಿರಾರು ಮಂದಿ ಕನ್ನಡ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.


Gadi Kannadiga

Leave a Reply