ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಮನ್ನಿಕೇರಿ, ಅಗಸಗಿ, ಕೇದನೂ ಗ್ರಾಮಗಳಲ್ಲಿ ಬಣವಿಗಳಿಗೆ ಬೆಂಕಿ ಬಿದ್ದು ಹಾನಿಗೊಳಗಾಗಿದ್ದ 9 ರೈತರ ಕುಟುಂಬಗಳಿಗೆ ರಾಹುಲ್ ಜಾರಕಿಹೊಳಿ ಅವರು ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ತಲಾ 10 ಸಾವಿರ ರೂ. ಪರಿಹಾರ ವಿತರಣೆ ಮಾಡಿದರು.
ಗುರುವಾರ ನಗರದ ಕುವೆಂಪು ನಗರ ಕಚೇರಿಯಲ್ಲಿ ಸಂತ್ರಸ್ಥರಿಗೆ ಪರಿಹಾರ ವದಗಿಸಿ ಮಾತನಾಡಿದ ಆವರು ಯಮಕನಮರಡಿ ಕ್ಷೇತ್ರದ ಜನತೆಯ ಪರವಾಗಿ ಯಾವಾಗಲೂ ನಾವಿದ್ದೇವೆ ಎಂದು ಭರವಸೆ ನೀಡಿದರು.ಬಳಿಕ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಸಬಾಗದಿಂದ ಕುಂತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ ಅಲ್ಲಿನ ಸಾರ್ವಜನಿಕರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು 1 ಲಕ್ಷ ರೂಪಾಯಿ ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪರಶುರಾಮ ಧಗೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ., ಅರುಣ ಕಟಾಂಬಳೆ, ಮಲಗೌಡ ಪಾಟೀಲ್, ಶಿವಪುತ್ರ ಮೇತ್ರಿ, ಅಪ್ಪಯ್ಯಗೌಡ ಪಾಟೀಲ್, ಅಮೃತ ಮುದ್ದೆಣ್ಣವರ್, ಮಹಾದೇವ ಸಂಭಾಜಿ, ಗಾವಡು ಬಿರ್ಜೆ, ಯಲ್ಲಪ್ಪಾ ರಾದಾಯಿ, ಗುಂಡು ಕುರೇನ್ನವರ್, ಪುಂಡಲೀಕ ಕಜಬಾನಟ್ಟಿ ಸೇರಿದಂತೆ ಿನ್ನಿತರರು ಉಪಸ್ಥಿತರಿದ್ದರು.