ಯಮಕನಮರಡಿ: ಮೇ. ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಯಮಕನಮರಡಿ ಎಸ್.ಟಿ ಮೀಸಲು ಮತಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೇಸ್ ಅಭ್ಯರ್ಥಿ ಸತೀಶ ಜಾರಕಿಹೊಳಿಯವರ ಪರ ಯುವ ನಾಯಕ ರಾಹುಲ್ ಜಾರಕಿಹೊಳಿಯವರು ಯಮಕನಮರಡಿ ಹತ್ತರಗಿ, ಆನಂದಪೂರ, ದಾದಬಾನಹಟ್ಟಿ, ಯಮಕನಮರಡಿ ಆರ್.ಸಿ. ಗ್ರಾಮಗಳಲ್ಲಿ ಭರ್ಜರಿ ರೋಡ ಶೋ ನಡೆಸಿ ಮತಯಾಚಿಸಿದರು.
ಈ ವೇಳೆಯಲ್ಲಿ ರಾಹುಲ ಜಾರಕಿಹೊಳಿ ಮಾತನಾಡಿ ಈ ಚುನಾವಣೆಯಲ್ಲಿ ಯಮಕನಮರಡಿ ಮತಕ್ಷೇತ್ರದ ಅಭಿವೃದ್ದಿಗಾಗಿ ಸತೀಶ ಜಾರಕಿಹೊಳಿಯವರನ್ನು ಮತ್ತೆ ಗೆಲ್ಲಿಸಬೇಕು ಕಾಂಗ್ರೇಸ್ ಪಕ್ಷ ಜನಪರ ಕಾಳಜಿಯೊಂದಿಗೆ ೬ ಗ್ಯಾರಂಟಿಗಳನ್ನು ಘೋಷಿಸಿದ್ದು, ಈ ೬ ಗ್ಯಾರಂಟಿಗಳು ಜನಸಾಮಾನ್ಯರ ಬದುಕು ಒಳ್ಳಯದಾಗಲಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಯುವ ನಾಯಕ ಕಿರಣಸಿಂಗ ರಜಪೂತ, ವಿರಣ್ಣಾ ಬಿಸಿರೊಟ್ಟಿ, ಶಿವಶಂಕರ ಝುಟ್ಟಿ, ಗಿರೀಶ ಮಿಶ್ರಿಕೋಟಿ, ಓಂಕಾರ ತುಬಚಿ, ಗುಲಾಬಸಿಂಗ ರಜಪೂತ, ಮತ್ತು ರವೀಂದ್ರ ಜಿಂಡ್ರಾಳಿ, ದಸ್ತಗಿರ ಬಸ್ಸಾಪೂರಿ, ಮಹಾದೇವ ಪಟೋಳಿ ಸೇರಿದಂತೆ ಸಮಸ್ತ ಕಾಂಗ್ರೇಸ್ ಕಾರ್ಯಕರ್ತರು ರೋಡಶೋ ದಲ್ಲಿ ಪಾಲ್ಗೊಂಡಿದ್ದರು.
Gadi Kannadiga > Local News > ಯಮಕನಮರಡಿಯಲ್ಲಿ ರಾಹುಲ ಜಾರಕಿಹೊಳಿ ಭರ್ಜರಿ ರೋಡ ಶೋ
ಯಮಕನಮರಡಿಯಲ್ಲಿ ರಾಹುಲ ಜಾರಕಿಹೊಳಿ ಭರ್ಜರಿ ರೋಡ ಶೋ
Suresh04/05/2023
posted on
