This is the title of the web page
This is the title of the web page

Please assign a menu to the primary menu location under menu

Local News

ಯಂಗ್ ಇಂಡಿಯಾ ಕೀ ಬೋಲ್”  ಎರಡನೇ ವರ್ಷದ ಅಭಿಯಾನಕ್ಕೆ ಚಾಲನೆ  ಜೂ.2ರಿಂದ ಚಾಲನೆ: ರಾಹುಲ್ ಮಾಚಕನುರ


ಬೆಳಗಾವಿ: ಕಾಂಗ್ರೆಸ್ ಪಕ್ಷದಿಂದ “ಯಂಗ ಇಂಡಿಯಾಕಿ ಬೋಲ್” ಎಂಬ ಅಭಿಯಾನದಡಿ, ಯುವಕರಿಗೆ ಒಳ್ಳೆಯ ವೇದಿಕೆ ಕಲ್ಪಿಸಲಾಗಿದೆ,  ಜಿಲ್ಲೆಯ ವಾಕ್ಚಾತುರ್ಯ  ಯುವಕರು ಈ ಅಭಿಯಾನದ  ಲಾಭ ಪಡೆಯಬೇಕೆಂದು ಜಿಲ್ಲಾ ಅಭಿಯಾನದ ವಕ್ತಾರ ಉಸ್ತುವಾರಿ ರಾಹುಲ್ ಮಾಚಕನುರ ಹೇಳಿದರು.

ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡ ಯುವ ಕಾಂಗ್ರೆಸ್ ಘಟಕದಿಂದ ಘಟಕದ  ಮುಂದಿನ ಕ್ರಿಯಾಯೋಜನೆ ವಿವರಣೆ ಸಂಬಂಧಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗಾಂಧಿಜಿ ಕನಸಿನ ಕೂಸಾಗಿರುವ “ಯಂಗ್ ಇಂಡಿಯಾಕಿ ಬೋಲ್” ಎಂಬ ಯೋಜನೆಯು ಕಳೆದ ವರ್ಷ ಶುರುವಾಯಿತು. ಇದರ ಮುಖ್ಯ ಉದ್ದೇಶ ದೇಶದ ಯಾವುದೇ ಮೂಲೆಯ, ರಾಜಕೀಯ ಹಿನ್ನೆಲೆ ಇಲ್ಲದಂಥ, ಸಾಮಾನ್ಯ ಯುವಕ ಯುವತಿಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ವೇದಿಕೆ ಇದಾಗಿದೆ.

ಆಡಳಿತ ಪಕ್ಷ ಯುವಕರ ದ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಇಂತಹ ವೇದಿಕೆ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಯುವಕರು ತಮ್ಮ ಅನಿಸಿಕೆ ಹಂಚಿಕೊಳ್ಳಲಿ ಎಂಬ ಅಭಿಲಾಷೆ ಇರುವ ವೇದಿಕೆಯೇ “ಯಂಗ್ ಇಂಡಿಯಾ ಕೀ ಬೋಲ್” ಯೋಜನೆ ಎಂದರು.

ಕಳೆದ ವರ್ಷ ಹಮ್ಮಿಕೊಳ್ಳಲಾಗಿದ್ದ  ಅಭಿಯಾನ ಯಶಸ್ವಿಯಾಗಿ ನಡೆದಿದ್ದು. ಈ ವರ್ಷವೂ ನಮ್ಮ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಯಶಸ್ವಿ ಅಭಿಯಾನ ಆಗುತ್ತದೆ ಎಂದರು.

ಜೂನ್ 2ರಿಂದ ಜೂನ್ 15ರವರೆಗೆ ಸಾಮಾಜೀಕ ಜಾಲತಾಣಗಳಲ್ಲಿ  ಪಕ್ಷದ ವತಿಯಿಂದ ಒಂದು ಲಿಂಕ್ ಹಂಚಿಕೊಳ್ಳಲಾಗುತ್ತಿದ್ದು, ಅಲ್ಲಿ 18 ರಿಂದ 20 ವಯಸ್ಸಿನ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಜಿಲ್ಲೆಯಿಂದ ಹತ್ತು ಜನ ಅತ್ಯುತ್ತಮ ವಕ್ತಾರರನ್ನಾ ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ, ಅಲ್ಲಿಂದ ಆಯ್ಕೆ ಮಾಡಿ ರಾಷ್ಟ್ರ ಮಟ್ಟಕ್ಕೆ ನೇಮಕ ಮಾಡುವ ಯೋಜನೆ ಇದೆ ಎಂದರು.

ಆಯ್ಕೆ ಬಯಸುವ ಯುವ ಸಮೂಹವು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರಬೇಕು, ಈ ಸ್ಪರ್ಧೆಗೆ ಅದೊಂದೇ ಷರತ್ತು.  ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಹಮ್ಮದ ನಲಪಾಡ್ ಅವರು ಐ ಫೋನ್ ಗಳನ್ನ ಕಾಣಿಕೆಯಾಗಿ ನೀಡುತ್ತಾರೆ ಎಂದರು..

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾರ್ತಿಕ್ ಪಾಟೀಲ, ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಯಲ್ಲಪ್ಪ ಶಿಂಧೆ,  ಅಭಿಯಾನದ ಉಸ್ತುವಾರಿ   ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಂಕಲಗಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ  ಮಂಜು ಕಾಂಬ್ಳೆ, ಇನ್ನಿತರ ಪದಾಧಿಕಾರಿಗಳಾದ ಉಮೇಶ್ ಹುಗ್ಗಿ, ಸಂಗಮೇಶ್, ಈರಣ್ಣ  ಮುಂತಾದವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


Gadi Kannadiga

Leave a Reply