ಬೆಳಗಾವಿ: ಸಮಾಜ ಸೇವೆಯೇ ನಮ್ಮ ಮುಖ್ಯಗುರಿಯಾಗಿದ್ದು ಸಮಾಜದ ಅಭಿವೃದ್ಧಿಗಾಗಿ ನನ್ನ ವ್ಯಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಹೇಳಿದರು.
ಶನಿವಾರ ಬೆಳಗಾವಿ ನಗರದ ಗೃಹ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ, ಏಪ್ರಿಲ್ 12 ಹಾಗೂ 13ರಂದು ಜಿಲ್ಲಾ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಸಿದ್ದೇಶ್ವರ ಪ್ರೌಢ ಶಾಲೆ ಮುಚ್ಚಂಡಿಯಲ್ಲಿ ನಡೆಸಲಾಗುತ್ತದೆ ಎಂದರು.
ಈಗಾಗಲೇ 65 ತಂಡಗಳು ತಮ್ಮ ಹೆಸರು ನೋಂದಾಯಿಸಿದ್ದು, ಅದರಲ್ಲಿ 10 ಮಹಿಳಾ ಕಬಡ್ಡಿ ತಂಡಗಳಿವೆ, ಆಟಗಾರರಿಗೆ ಊಟಾ, ವಸತಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗಿದೆ, ಕ್ರೀಡಾ ವೀಕ್ಷಣೆಗೆ ಸುಮಾರು 3500 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಎಂದು ಮಾಹಿತಿ ನೀಡಿದರು.
ವಿಜೇತರಿಗೆ ಪ್ರಥಮ ಬಹುಮಾನ 30 ಸಾವಿರ, ದ್ವಿತಿಯ ಬಹುಮಾನ 20 ಸಾವಿರ ಹಾಗೂ, ತೃತಿಯ ಬಹುಮಾನ 10ಸಾವಿರ ರೂ. ಬಹುಮಾನದ ಮೊತ್ತವನ್ನು ನಿಗದಿ ಮಾಡಲಾಗಿದೆ. ಕ್ರೀಡೆ ಸಾಂಸ್ಕೃತಿಕ ಚಟುವಟಕೆಗಳಿಗೆ ನಮ್ಮ ತಂದೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದು ನಾವು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದ.. ಇನ್ನೂ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿ ಎಲ್ಲವೂ ತಂದೆಯವರ ಮಾರ್ಗದರ್ಶನದಂತೆ ಎಂದು ಹೇಳುತ್ತಾ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ.