ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ, ರಾಯಬಾಗ ತಾಲೂಕಾ ೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ ದಿ:೨೧/೦೧/೨೦೨೩ ರಂದು, ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ಪರಮಾನಂದವಾಡಿಯಲ್ಲಿ ಜರುಗಲಿದೆ.
ಮುಂಜಾನೆ:೮:೦೦ ಘಂಟೆಗೆ, ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಕಮೀಟಿ, ಪರಮಾನಂದವಾಡಿ ಅಧ್ಯಕ್ಷರು ಶ್ರೀ ಧರೆಪ್ಪ ಗಂಡೋಶಿ ಅವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸುವರು. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ನಾಡ ಧ್ವಜಾರೋಹಣವನ್ನು ನೆರವೇರಿಸುವರು. ಕ.ಸಾ.ಪ.ರಾಯಬಾಗ ತಾಲೂಕಾ ಅಧ್ಯಕ್ಷರು ಶ್ರೀ ರವೀಂದ್ರ ಪಾಟೀಲ ಅವರು ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸುವರು. ಸಮ್ಮೇಳನವು ಪ.ಪೂ.ಶ್ರೀ.ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಚಿಂತಕರಾದ ಶ್ರೀ ಧರ್ಮಣ್ಣ ಸಿ ನಾಯಿಕ ಅವರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮಾಜಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಕುಡಚಿ ಮಾನ್ಯ ಶಾಸಕರು ಶ್ರೀ ಪಿ ರಾಜೀವ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ ರಾಯಬಾಗ ಶಿಶು ಅಭಿವೃದ್ಧಿ ಅಧಿಕಾರಿಗಳು ಶ್ರೀ ಸಂತೋಷ ಕಾಂಬಳೆ, ತಾಲೂಕಾ ಆರೋಗ್ಯ ಅಧಿಕಾರಿಗಳು ಡಾ.ಸೋಮನಗೌಡ ಪಾಟೀಲ, ವೃತ್ತ ನಿರೀಕ್ಷಕರು ಶ್ರೀ ಹಸನಸಾಬ ಮುಲ್ಲಾ, ಶ್ರೀ ರವಿಚಂದ್ರನ್ ಬಡಫಕೀರಪ್ಪ, ಕ.ರಾ.ಸ.ನೌ.ಸಂ.ಅಧ್ಯಕ್ಷರು ಶ್ರೀ ವಿಶ್ವನಾಥ ಹಾರೂಗೇರಿ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಆಗಮಿಸಿಲಿದ್ದಾರೆ.
ಕ.ಸಾ.ಪ.ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಸಾಹಿತಿಗಳು, ಕಲಾವಿದರು, ಬೆಳಗಾವಿ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು ಮತ್ತು ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆತರಬೇಕೆಂದು, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಹಾಗೂ ಕ.ಸಾ.ಪ.ರಾಯಬಾಗ ತಾಲೂಕಾ ಅಧ್ಯಕ್ಷರು ಶ್ರೀ ರವೀಂದ್ರ ಪಾಟೀಲ ಅವರು ವಿನಂತಿಸಿಕೊಂಡಿದ್ದಾರೆ.
Gadi Kannadiga > Local News > ರಾಯಬಾಗ ತಾಲೂಕಾ ೬ನೇ ಕನ್ನಡ ಸಾಹಿತ್ಯ ಸಮ್ಮೇಳನ