ಬೆಳಗಾವಿ : ನಗರದಲ್ಲಿ ಮಂಗಳವಾರ ಸಾಯಂಕಾಲ 4 ಗಂಟೆಗೆ ಸುರಿದ ಅಕಾಲಿಕ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದ, ಸಾವು ಮತ್ತು ಅಪಾರ ಹಾನಿಯಾಗಿದೆ.
ಮಳೆ ಗಾಳಿಯ ಆರ್ಭಟಕ್ಕೆ ನಗರದ ನಾನಾ ಕಡೆಯಲ್ಲಿ ಹಾನಿ ಉಂಟಾಗಿದ್ದು , ಜಿಲ್ಲಾ ಆಸ್ಪತ್ರೆಯ ಎದುರಿನ, ನಾಗಶಾಂತಿ ಹೀರೋ ಶೋ ರೂಮ್ ಎದುರಿಗಿನ ಎರಡು ಬ್ರಹತ್ ಮರಗಳು ನೆಲಕ್ಕೆ ಉರುಳಿವೆ.
ಇದರ ಪರಿಣಾಮ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು 30 – 40 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಅಲ್ಲಲ್ಲಿ ಗಿಡ ಮರಗಳು ಬಿದ್ದಿದ್ದು, ಅನೇಕ ಕಡೆಗಳಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿದೆ.
ಕ್ಲಬ್ ರೋಡಲ್ಲಿ ಬೈಕ ಸವಾರನ ಮೇಲೆ ಮರ ಉರುಳಿದ್ದು ಸವಾರನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.