ಕೊಪ್ಪಳ ಮಾರ್ಚ್ ೦೬: ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಯುವಜನತೆಗೆ ಉತ್ತೇಜನ ನೀಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ರಜತ ಮಹೋತ್ಸವ ಕ್ರೀಡಾ ಸಮಿತಿಯಿಂದ ಮಾರ್ಚ ೬ ಮತ್ತು ಮಾರ್ಚ ೭ರಂದು ನಡೆಯಲಿರುವ ಎರಡು ದಿನಗಳ ಕಬಡ್ಡಿ ಪಂದ್ಯಾವಳಿಗೆ ಮಾರ್ಚ ೬ರಂದು ಚಾಲನೆ ಸಿಕ್ಕಿತು.
ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಬೆಳಗ್ಗೆ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿ ಮೊದಲನೇ ದಿನ ಪುರುಷರ ಪಂದ್ಯಾವಳಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ ಯುವಜನರು ಕ್ರೀಡಾ ಚಟುವಟಿಕೆಗಳಲ್ಲಿ ಕೂಡ ಭಾಗಿಯಾಗಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಕೊಪ್ಪಳ ಜಿಲ್ಲೆ ಉದಯವಾಗಿ ೨೫ ವರ್ಷಗಳ ತುಂಬಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಯುವಜನರಲ್ಲಿ ಕ್ರೀಡಾ ಪಟುಗಳಲ್ಲಿ ಒಂದು ಉತ್ತಮ ಸಂದೇಶ ಹೋಗುವ ನಿಟ್ಟಿನಲ್ಲಿ ಜಿಲ್ಲಾಡಳಿತವು ವಿಶೇಷ ಕಾಳಜಿ ವಹಿಸಿ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟದಂತಹ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಜೇತ ತಂಡಕ್ಕೆ ಪ್ರಥಮ ೧೦,೦೦೦ ರೂ., ದ್ವಿತೀಯ ೭೦೦೦ ಹಾಗೂ ತೃತೀಯ ೫೦೦೦ ರೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಕ್ರೀಡಾ ಸಮಿತಿಯ ಅಧ್ಯಕ್ಷರಾದ ಬಿಸಿಎಂ ಇಲಾಖೆಯ ಉಪ ನಿರ್ದೇಶಕರಾದ ಜಿ ಎಂ ದೊಡ್ಡಮನಿ ಹಾಗು ಕ್ರೀಡಾ ಸಮಿತಿಯ ಇನ್ನೀತರ ಸದಸ್ಯರು ಇದ್ದರು. *ಮಾರ್ಚ ೭ರಂದು ಮಹಿಳಾ ಪಂದ್ಯಾವಳಿ:* ಮಾ. ೦೬ ರಂದು ಪುರುಷರ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆದಿವೆ. ಅದೇ ರೀತಿ ಮಾ. ೦೭ ರಂದು ಮಹಿಳೆಯರಿಗಾಗಿ ಸ್ಪರ್ಧೆಗಳು ನಡೆಯಲಿವೆ.
Gadi Kannadiga > State > ರಜತ್ ಮಹೋತ್ಸವ: ಕಬಡ್ಡಿ ಪಂದ್ಯಾವಳಿಗೆ ಚಾಲನೆ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023