This is the title of the web page
This is the title of the web page

Please assign a menu to the primary menu location under menu

State

20 ರಂದು ಬೆಳಗಾವಿ ನಗರಕ್ಕೆ ರಂಭಾಪುರಿ ಜಗದ್ಗುರುಗಳು


ಬೆಳಗಾವಿ ; ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ‌‌ ಶಾಖೆಗೆ ಜೂ.20 ಸೋಮವಾರದಂದು ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದರು ಆಗಮಿಸಲಿದ್ದಾರೆ.

ಸೋಮವಾರ ಬೆಳಗ್ಗೆ 6 ರಿಂದ 7 ಗಂಟೆವರೆಗೆ ಹುಕ್ಕೇರಿ ಹಿರೇಮಠದಲ್ಲಿ ನಡೆಯುತ್ತಿರುವ ಐದು ದಿನದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡಿರುವ ಯೋಗ ಶಿಬಿರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶೀರ್ವದಿಸಲಿದ್ದಾರೆ. 10 ಗಂಟೆಯವರೆಗೆ ಬೆಳಗಾವಿ ಹುಕ್ಕೇರಿ ಹಿರೇಮಠದಲ್ಲಿ ಜಗದ್ಗುರುಗಳು ಇರಲಿದ್ದು, ಸದ್ಬಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಳ್ಳಬೇಕು.
10.30ಕ್ಕೆ‌ ಖಾಸಬಾಗದ ವರದಪ್ಪಗಲ್ಲಿಯಲ್ಲಿ ಮುರುಗೋಡ ಅವರ ನಿವಾಸದಲ್ಲಿ ಪಾದ ಪೂಜೆ ಹಾಗೂ ವರದಪ್ಪಗಲ್ಲಿಯಲ್ಲಿ ಜಗದ್ಗುರುಗಳ ಸಾರೋಟ ಉತ್ಸವ ಮತ್ತು ಶ್ರೀಗಳ ಶುಭಾಶೀರ್ವಾದ ಸಂದೇಶ ಜರುಗಲಿದೆ.
ಬೆಳಗಾವಿ ‌ನಗರದ ಸಮಸ್ತ ಸದ್ಬಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಇದೇ ಸಂದರ್ಭದಲ್ಲಿ ರಂಭಾಪುರಿ ಜಗದ್ಗುರುಗಳ ಅಮೃತಹಸ್ತದಿಂದ ಉಚಿತ ರುದ್ರಾಕ್ಷಿ ವಿತರಣೆ ಮತ್ತು ಉಚಿತ ಮಾಸ್ಕ್ ವಿತರಣೆ ಮಾಡಲಾಗುವುದು . ದರ್ಶನವನ್ನು ತೆಗೆದುಕೊಳ್ಳುವವರು ಬೆಳಗ್ಗೆ ಹುಕ್ಕೇರಿ ಹಿರೇಮಠಕ್ಕೆ ಆಗಮಿಸಿ ಜಗದ್ಗುರುಗಳ ದರ್ಶನ ಪಡೆದುಕೊಳ್ಳಬೇಕೆಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply