ಬೆಳಗಾವಿ: ಆತ್ಮ ಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ ಪಾಟೀಲ್ ಅವರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ಮಾಡಲಾಗಿದ್ದು ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೃತ ಸಂತೋಷ ಕುಟುಂಬಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಡಸ ಗ್ರಾಮದ ಮನೆಗೆ ಇಂದು ಗುರುವಾರ ಭೇಟಿ ನೀಡಿ ಮೃತ ಸಂತೋಷ ಪಾಟೀಲ್ ಪತ್ನಿ ಮತ್ತು ತಾಯಿಗೆ ಸಾಂತ್ವನ ಹೇಳಿದರು.
ಬಳಿಕ ಸಂತೋಷ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಮಸ್ಕರಿಸಿ ಗೌರವ ನಮನ ಸಲ್ಲಿಸಿದರು.