This is the title of the web page
This is the title of the web page

Please assign a menu to the primary menu location under menu

Local News

ಅಥಣಿಯಲ್ಲಿ RSS ಮುಖಂಡರನ್ನ ಭೇಟಿಯಾದ ರಮೇಶ ಜಾರಕಿಹೊಳಿ


ಬೆಳಗಾವಿ : ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿ ಅವರೇ ಮುಂದುವರಿಯಲಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಹೇಳಿಕೆ ನೀಡಿದ್ದಾರೆ.ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಆಧ್ಯತೆ ಕೊಡುವಂತೆ ಸಿಎಂ ಬೊಮ್ಮಾಯಿ ಅವರಿಗೆ ಶಾಸಕರು ಮತ್ತು ಸಚಿವರಿಂದ ಒತ್ತಡ ಹೆಚ್ಚಿರುವ ಬೆನ್ನಲ್ಲೆ ಅಥಣಿಯಲ್ಲಿ ರಮೇಶ ಜಾರಕಿಹೊಳಿ ಆರ್‍ಎಸ್‍ಎಸ್ ಮುಖಂಡರನ್ನ ಭೇಟಿ ಮಾಡಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಮೇಶ ಜಾರಕಿಹೊಳಿ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಹೊಸಬರಿಗೆ ಅವಕಾಶದ ಜೊತೆಗೆ ಮಹೇಶ ಕುಮಠಳ್ಳಿ ಅಥವಾ ತಮಗೆ ಸಚಿವ ಸ್ಥಾನದ ವಿಚಾರವಾಗಿ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಇನ್ನು ಮುಂದಿನ 2023ರ ಚುನಾವಣೆ ಮತ್ತು ರಾಜಕಾರಣದ ಬಗ್ಗೆ ಮೊನ್ನೆ ಚರ್ಚೆಯ ಬಳಿಕ ಇಂದು ಅರವಿಂದರಾವ ದೇಶಪಾಂಡೆ ಮನೆಗೆ ಭೇಟಿ ನೀಡಿದ್ದೇನೆ ಎಂದರು.

ಇನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್, ಅಮಿತ್ ಷಾ ಮತ್ತು ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು.ಒಟ್ಟಿನಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಬೊಮ್ಮಾಯಿ ಅವರ ಪರವಾಗಿ ರಮೇಶ ಜಾರಕಿಹೊಳಿ ಬ್ಯಾಟಿಂಗ್ ಬೀಸಿದ್ದಾರೆ.


Gadi Kannadiga

Leave a Reply