ಯಮಕನಮರಡಿ : ರೈತರ ಸರ್ವಾಂಗೀಣ ಅಭಿವೃದ್ದಿಯಾಗಬೇಕಾದರೆ ಗ್ರಾಮಸ್ಥರು ಸಹಕಾರ ಸಂಸ್ಥೆಗಳಲ್ಲಿ ರಾಜಕಾರಣ ಮಾಡದೇ ಸಹಕಾರ ಮನೋಭಾವದಿಂದ ಸಂಸ್ಥೆಯ ಪ್ರಗತಿಗೆ ಶ್ರಮಿಸಬೇಕೆಂದು ಬೆಳಗಾವಿಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅದ್ಯಕ್ಷ ರಮೇಶ ಕತ್ತಿ ಹೇಳಿದರು.
ಅವರು ಶುಕ್ರವಾರ ದಿ. ೧೮ ರಂದು ಹೊಸೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪತ್ತು ಮಂಜೂರಾದ ರೈತರಿಗೆ ಬೆಳೆಸಾಲ ವಿತರಿಸಿ ಮಾತನಾಡಿದರು. ಸಹಕಾರ ಸಂಸ್ಥೆಗಳಲ್ಲಿ ವ್ಯವಸ್ಥೆಯು ಹದೆಗೆಟ್ಟಿದ್ದರೆ ಸಂಸ್ಥೆಯ ಬೆಳವಣಿಗೆಯು ಕುಂಠಿತವಾಗುತ್ತದೆ. ಗ್ರಾಮದ ರೈತರು ಪಡೆದ ಸಾಲವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಸಕಾಲಕ್ಕೆ ಮರುಪಾವತಿಸಬೇಕು ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರದಿಂದ ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕು ಹುಕ್ಕೇರಿ ತಾಲೂಕಿನ ಸರ್ವಾಂಗೀಣ ಅಭಿವೃದ್ದಿಯಾಗಬೇಕೆಂಬ ನನ್ನ ಆಶಯವಾಗಿದ್ದು, ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೊರೆಯುವ ಸಹಾಯ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ರೈತರು ಸಾಲ ಪಡೆದುಕೊಂಡು ಕೃಷಿ ಚಟುವಟಿಕೆಗಳನ್ನು ವಿಸ್ತರಿಸಿಕೊಂಡು ತಮ್ಮ ಆರ್ಥಿಕ ಗುಣಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದು ರಮೇಶ ಕತ್ತಿ ಕರೆ £Ãಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಅಣ್ಣಪ್ಪ ಅಕ್ಕತೇಂಗೇರಹಾಳ, ಉಪಾಧ್ಯಕ್ಷ ಸುರೇಶ ಭೀಮಪ್ಪ ಕೋಟಗಿ, £ರ್ದೇಶಕರಾದ ಭೀಮಗೌಡ ಪಾಟೀಲ, ಬಾಹುಬಲಿ ನಾಗನೂರಿ,(ಹುಕ್ಕೇರಿ ತಾಲೂಕಾ ಜೈನ ಅಸೋಸಿಯೇಷನ ಅಧ್ಯಕ್ಷರು) ವಿಠ್ಠಲ ರಾಮಗೊನಟ್ಟಿ, ಲಕ್ಷö್ಮಣ ಅಕ್ಕತೆಂಗೇರಹಾಳ, ಬಸಗೌಡ ಪಾಟೀಲ, ರಜಾಕ ಕೊಣ್ಣೂರ, ಅಡಿವೆಪ್ಪ ಹರಿಜನ, ಹರೀಶ ಘಸ್ತಿ, ಜಯಶ್ರೀ ರಾಮಗೊನಟ್ಟಿ, ಪದ್ಮಶ್ರೀ ಬಸ್ತವಾಡಿ, ಹಾಗೂ ಸರ್ವಸದಸ್ಯರು ಸಿಬ್ಬಂದಿಗಳಾದ ಪಾರೇಶ ಹಲಕರ್ಣಿ, ಅಜ್ಜಪ್ಪ ಡಬ್ಬಗೋಳ ಉಪಸ್ಥಿತರಿದ್ದರು. ಮುಖ್ಯ ಕಾರ್ಯ£ರ್ವಾಹಕ ವಾಯ್.ಡಿ. ಗೋಲಬಾಂವಿ ಸ್ವಾಗತಿಸಿದರು. ಉಮೇಶ ಪಾಟೀಲ ಕಾರ್ಯಕ್ರಮ £ರೂಪಿಸಿದರು.
Gadi Kannadiga > Local News > ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ಸಲ್ಲದು ; ರಮೇಶ ಕತ್ತಿ
ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ಸಲ್ಲದು ; ರಮೇಶ ಕತ್ತಿ
Suresh18/08/2023
posted on
