ಬೆಳಗಾವಿ: ಮೃತ ಸಂತೋಷ ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಇವತ್ತೆನೆ ಬಿಡುಗಡೆ ಮಾಡಲಿ ಬೇಜವಾಬ್ದಾರಿ ಹೇಳಿಕೆ ಕೊಡುವುದರ ಮೂಲಕ ಗೊಂದಲ ಸೃಷ್ಟಿಸಬಾರದು ಎಂದು ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಮೃತ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಯಾರಿದ್ದಾರೆ ಎಂಬ ದಾಖಲೆಗಳಿದ್ದರೆ ರಮೇಶ್ ಜಾರಕಿಹೊಳಿ ಅವರು ಸೋಮವಾರದ ವರೆಗೆ ಕಾಯುವುದ ಬೇಡ ಇವತ್ತೇ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ದಾರಾವಾಹಿಯಂತೆ ಮುಂದಕ್ಕೆ ಹಾಕುತ್ತ ಬೇಜವಾಬ್ದಾರಿ ಹೇಳಿಕೆ ನೀಡುವ ಬದಲು ಇಂದೇ ದಾಖಲೆಗಳನ್ನು ಬಿಡುಗಡೆ ಮಾಡಲಿ. ನಿರಾಣಿ ಅವರು ಕೆಲಸ ಆಗಿದೆ ನಾಲ್ಕು ಕೋಟಿ ಬಿಡುಗಡೆ ಮಾಡಸ್ತಿವಿ ಅಂತ ಹೇಳ್ತಾರೆ, ಗ್ರಾ.ಪಂ ಅಧ್ಯಕ್ಷ ಸಂತೋಷ ಮತ್ತು ನಾನು ಎರಡು ಬಾರಿ ಈಶ್ವರಪ್ಪ ಅವರನ್ನ ಬೇಟಿ ಮಾಡಿದಿವಿ ಅಂತ ಹೇಳ್ತಾರೆ. ರಮೇಶ ಜಾರಕಿಹೊಳಿ ಹೇಳ್ತಾರೆ ಕೆಲಸ ಖಂಡಿತವಾಗಿ ಆಗಿದೆ ಎಂದು ಆಧರೆ ಬಿಜೆಪಿ ಪದಾಧಿಕಾರಿಗಳು ಸಂತೋಷ ಬಿಜೆಪಿ ಅಭ್ಯರ್ಥಿಯಲ್ಲ ಎಂದು ಹೇಳ್ತಿದಾರೆ ಇದೆಲ್ಲವನ್ನು ನೋಡಿದರೆ ಬಿಜೆಪಿಯೇ ಗೋಂದಲದಲ್ಲಿದೆ ಮೊದಲು ಗೊಂದಲದಿಂದ ಹೊರ ಬರಲಿ ಎಂದರು.