This is the title of the web page
This is the title of the web page

Please assign a menu to the primary menu location under menu

State

ಕಿಲಾರಹಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹುದ್ದೆಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರಾಮೇಶ್ವರ ಡಾಣಿ ನೇಮಕ


ಕುಷ್ಟಗಿ:-ಇಂದು ಸರ್ಕಾರಿ ಪ್ರೌಢಶಾಲೆ ಕಿಲಾರಟ್ಟಿ ತಾಲೂಕು ಕುಷ್ಟಗಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗೆ ಕೊರಡಕೇರಾ ಸರಕಾರಿ ಪ್ರೌಢಶಾಲೆಯ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀ ರಾಮೇಶ್ವರ ವಿಡಾಣಿಯವರು ಹಾಜರಾದರು. ಈ ಸಂದರ್ಭದಲ್ಲಿ ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಾನನಗೌಡ ಕೆರೆ ಹಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹನುಮಗೌಡ ಪೊಲೀಸ್ ಪಾಟೀಲ್, ಕುಷ್ಟಗಿ ತಾಲೂಕಿನ ಪ್ರೌಢಶಾಲಾ ನಿರ್ದೇಶಕರುಗಳು ಕಿಲಾರಿಟಿ ಪ್ರೌಢಶಾಲೆಯ ಪ್ರಹ್ಲಾದ ಜಾದವ್ ,ಉಪಸ್ಥಿತರಿದ್ದು, ರಾಮೇಶ್ವರ ಡಾಣಿ ಮುಖ್ಯೋಪಾಧ್ಯಾಯರಿಗೆ ಸ್ವಾಗತಿಸಿ ಅಭಿನಂದಿಸಿದರು.ನಂತರ ರಾಮೇಶ್ವರ ಡಾಣಿ ಮಾತನಾಡಿ ಒಂದು ಶಾಲೆಯು ಅಭಿವೃದ್ಧಿಯಾಗಬೇಕೆಂದರೆ ಆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಕಾರಣೀ ಕರ್ತರು ಎಂದರು. ಎಲ್ಲಿ ಸಮಯ ಪಾಲನೆ ಯಶಸ್ಸು ಸಮಯ ಪಾಲನೆ, ಶಿಸ್ತು , ಸಂಯಮ ,ಕ್ರಿಯಾಶೀಲತೆಯ ಗುಣಗಳು ಇರುತ್ತವೆಯೋ ಆ ಸಂಸ್ಥೆ ಹಾಗೂ ವಿದ್ಯಾರ್ಥಿಗಳು ಪ್ರಗತಿಶೀಲರಾಗಿರುತ್ತಾರೆ, ಸಾಧಕರಾಗುತ್ತಾರೆ,ಶಾಲೆ ಗೌರವ ಹೆಚ್ಚಳವಾಗುತ್ತದೆ. ನಾವೆಲ್ಲರೂ ವಿದ್ಯಾರ್ಥಿಗಳು ಶಿಕ್ಷಕರು ಸೇರಿಕೊಂಡು ನಮ್ಮ ಶಾಲೆಯ ಕೀರ್ತಿ ಹೆಚ್ಚಿಸೋಣ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹನುಮಗೌಡ ಪೊಲೀಸ್ ಪಾಟೀಲ್ ಮಾತನಾಡುತ್ತಾ ನಮ್ಮ ಶಾಲೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನಮ್ಮೂರಿನ ಎಲ್ಲರ ಬೆಂಬಲ ನೀಡುತ್ತೇವೆ ಎಂದರು. ಹಿಂದಿನ ಪ್ರಭಾರಿ ಮುಖ್ಯೋಪಾಧ್ಯಾಯರಾದ ಪ್ರಹ್ಲಾದ್ ಜಾದವ್ ಮಾತನಾಡುತ್ತಾ ನಮ್ಮ ಶಾಲೆಯು ಇಂದು ಸಂಪೂರ್ಣ ಸಂಪನ್ಮೂಲಗಳನ್ನು ಹೊಂದಿರುವ ಶಾಲೆಯಾಯಿತು. ಮುಖ್ಯೋಪಾಧ್ಯಾಯರ ಆಗಮನ ನಮಗೆ ಆನೆ ಬಲಬಂದಂತಾಗಿದೆ ಎಂದರು .ನಮ್ಮೆಲ್ಲಾ ಶಿಕ್ಷಕರು ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದರು .ಈ ಸಂದರ್ಭದಲ್ಲಿ ಕಿಲಾರಹಟ್ಟಿ ಪ್ರೌಢಶಾಲೆ ಎಸ್ ಡಿಎಂಸಿ ಅಧ್ಯಕ್ಷರಾದ ಮಾನನಗೌಡ ಕೆರೆಹಾಳ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಹನುಮಗೌಡ ಪೊಲೀಸ್ ಪಾಟೀಲ್ ಕುಷ್ಟಗಿ ತಾಲೂಕ ಪ್ರೌಢಶಾಲಾ ನಿರ್ದೇಶಕರುಗಳಾದ ಮಲ್ಲಪ್ಪ ಭಂಡಾರಿ, ಮಲ್ಲಪ್ಪ ಓಲಿ ,ವೆಂಕನಗೌಡ ಪಾಟೀಲ್, ವೀರಭದ್ರಪ್ಪ, ಎಸ್ ಎಸ್ ವಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ದೇವೇಂದ್ರ ಗೌಡ ಪೊಲೀಸ್ ಪಾಟೀಲ್ ,ಹುಲಿಯಾಪೂರ ಪ್ರೌಢಶಾಲೆಯ ಚಿನ್ನಪ್ಪ ದಂಡಿನ,ಕಿಲಾರಹಟ್ಟಿ ಪ್ರೌಢಶಾಲೆಯ ಪ್ರಹ್ಲಾದ್ ಜಾದವ್, ರಮೇಶ್ ಹುನುಗುಂದ. ಪಿಡ್ಡನಗೌಡ್ರು ಹಳೆಗೌಡ್ರು, ಸೀತಾಬಾಯಿ ಏನ್ ದೇಸಾಯಿ, ಪ್ರೇಮಾ. ವಿ ಅಂಬುಡಕರ್, ದೊಡ್ಡಮ್ಮ ಪಾಟೀಲ್, ಶ್ರೀಧರ್ ದೇಸಾಯಿ ,ಬಸವರಾಜ್ ಬಿಂಗಿ, ರಾಜ್ ಮೊಹಮದ್ ಎಂ, ಶಾಹೀನ ಮೇಡಂ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ರಮೇಶ್ ಹುನುಗುಂದ ಸ್ವಾಗತಿಸಿ,ರಾಮೇಶ್ವರ ಠಾಣಿ ಅವರು ಪರಿಚಯ ಮಾಡಿಕೊಟ್ಟರು.ಪಿಡ್ಡನ ಗೌಡ್ರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ವಂದನಾರ್ಪಣೆ ಮಾಡಿದರು

ಇದೇ ಸಂದರ್ಭದಲ್ಲಿ ಕಿಲಾರಹಟ್ಟಿ ಪ್ರೌಢಶಾಲೆಯ ಎಸ್ ಡಿ ಎಮ್ ಸಿ ಹಾಗೂ ಗ್ರಾಮಸ್ಥರ ಪರವಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಸನ್ಮಾನಿಸಿ ಅಭಿನಂದಿಸಿದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Gadi Kannadiga

Leave a Reply