This is the title of the web page
This is the title of the web page

Please assign a menu to the primary menu location under menu

State

ರಾಷ್ಟ್ರೀಯ ಲೊöÃಕ್ ಅದಾಲತ್ ೧೯೨೬೭ ಪ್ರಕರಣಗಳ ಇತ್ಯರ್ಥ


ಕೊಪ್ಪಳ ಫೆಬ್ರವರಿ ೧೩ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯಾದ್ಯಂತ ಫೆಬ್ರವರಿ ೧೧ ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ೧೯೨೬೭ ಪ್ರಕರಣಗಳು ಇತ್ಯರ್ಥಗೊಂಡಿವೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದ ಮೇರೆಗೆ ಫೆ. ೧೧ ರಂದು ಜಿಲ್ಲೆಯ ಗಂಗಾವತಿ, ಕುಷ್ಟಗಿ ಯಲಬುರ್ಗಾ ಮತ್ತು ಕೊಪ್ಪಳ ನ್ಯಾಯಾಲಯಗಳಲ್ಲಿ “ರಾಷ್ಟ್ರೀಯ ಲೋಕ್ ಆದಾಲತ್‌ನ್ನು“ ವಿದ್ಯುನ್ಮಾನದ ಮೂಲಕ ಏರ್ಪಡಿಸಲಾಗಿತ್ತು. ಈ ಲೋಕ್ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿರುವ ಚಾಲ್ತಿ ಪ್ರಕರಣಗಳು ಹಾಗೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ೧೦೨ ಮೋಟಾರು ವಾಹನ ಅಪಘÁತ ಪರಿಹಾರ ಪ್ರಕರಣಗಳು, ೨೬೩ ಸಿವಿಲ್ ಪ್ರಕರಣಗಳು, ೧೪೬೬ ರಾಜೀ ಆಗಬಹÅದಾದ ಕ್ರಿಮಿನಲ್ ಪ್ರಕರಣಗಳು, ೯೫ ಚೆಕ್ ಬೌನ್ಸ್ ಪ್ರಕರಣಗಳು, ೨೯೧ ಇತರೆ ಕ್ರಿಮಿನಲ್ ಪ್ರಕರಣಗಳು , ೨೦೫ ವಿದ್ಯುತ್ ಪ್ರಕರಣಗಳು, ೧೬೮೪೫ ವ್ಯಾಜ್ಯ ಇತರಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು ೧೯೨೬೭ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿ ಒಟ್ಟು ೨೬,೩೭,೪೭,೦೫೨ ರೂ.ಮೊತ್ತದ ಪರಿಹಾರ ಹಣವನ್ನು ರಾಜೀ ಮೂಲಕ ಇತ್ಯರ್ಥ ಪಡಿಸಲಾಯಿತು ಎಂದು ಗೌರವಾನ್ವಿತ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್ ರೇಖಾ ಮತ್ತು ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ್ ಪಂಡಿತ್ ಅವರು ತಿಳಿಸಿದ್ದಾರೆ.
ಈ ಲೋಕ್ ಅದಾಲತ್‌ಗೆ ಸಹಕರಿಸಿದ ಜಿಲ್ಲೆಯ ಎಲ್ಲ ನ್ಯಾಯಾಧೀಶರುಗಳಿಗೆ, ಸಂಧಾನಕಾರರಿಗೆ, ವಕೀಲರ ಸಂಘಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳಿಗೆ, ಬ್ಯಾಂಕ್/ಇನ್ಸೂರೆನ್ಸ ಕಂಪನಿ ಮ್ಯಾನೇಜರ್‌ಗಳಿಗೆ, ಕಕ್ಷಿದಾರರಿಗೆ ಮತ್ತು ನ್ಯಾಯಾಲಯಗಳ ಸಿಬ್ಬಂದಿಗಳಿಗೆ ಹೃತ್ಪೂರಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಪ್ರಟಕಣೆ ತಿಳಿಸಿದೆ.


Gadi Kannadiga

Leave a Reply