ಯರಗಟ್ಟಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದ ಅಭಿವೃದ್ಧಿಗೆ ಮೋದಿಜಿ ಅವರು ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿ ತಂದಿದ್ದು. ಮೋದಿಜಿ ಅವರ ಸಾಧನೆಗಳನ್ನು ಗುರುತಿಸಿ ಎಲ್ಲರೂ ತಪ್ಪದೇ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕೆಂದು ಬಿಜೆಪಿ ಅಭ್ಯರ್ಥಿ ರತ್ನಕ್ಕ ಮಾಮನಿ ಹೇಳಿದರು.
ಅವರು ಸಮೀಪದ ಗೊರಗುದ್ದಿ ಗ್ರಾಮದ ಶಿವನಗೌಡ ಅವರ ತೋಟದಲ್ಲಿ ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಮುಖಂಡರನ್ನು ಸ್ವಾಗತ ಮಾಡಿ ಮಾತನಾಡಿದರು. ನಂತರ ಗೊರಗುದ್ದಿ ಹಾಗೂ ಕಡಬಿ ಗ್ರಾಮಗಳಲ್ಲಿ ಪ್ರಚಾರ ಕಾರ್ಯಕ್ರಮ ಕೈಗೊಂಡರು.
ಸಂದರ್ಭದಲ್ಲಿ ಶಿವನಗೌಡ ನಾಯ್ಕರ, ನಾಗೇಶ ಸುಣಧೋಳಿ, ಶ್ರೀಕಾಂತ ವಂಟಮುರಿ, ರಾಜು ಮಾನಪ್ಪನವರ, ಶಿವಾನಂದ ಫೋತಲಿ, ಜಾನು ಕಿತ್ತೂರ, ಮಂಜುನಾಥ ಕಿತ್ತೂರ, ಲಕ್ಷö್ಮಣ ವಂಟಮುರಿ, ಮಾದೇವ ಮಾನಪ್ಪನವರ, ರುದ್ರಪ್ಪ ಕನಗಾರ, ನಾಯ್ಕಪ್ಪ ಹಿರಲಿ, ಯಲ್ಲಪ್ಪ ಗುಂಡಪ್ಪನವರ, ನಾಗೇಶ ವಂಟಮುರಿ, ವಿಠ್ಠಲ ಸುಣಧೋಳಿ, ಪ್ರವೀಣ ಜಗಮೈನವರ, ಬಾಳಪ್ಪ ಹಗಿದಾಳ, ಮಯೂರ ಬೈಲವಾಡ, ರಾಜು ಬಳಿಗಾರ, ಮಲ್ಲಪ್ಪ ಹಗಿದಾಳ, ಮಾಳಪ್ಪ ಬಡಿಗೇರ, ವಿಠ್ಠಲ ಮಾನಪ್ಪನವರ ಹಾಗೂ ಊರಿನ ಗ್ರಾಮಸ್ಥರು ಉಪಸ್ಥೀತರಿದ್ದರು.