This is the title of the web page
This is the title of the web page

Please assign a menu to the primary menu location under menu

State

ಗೃಹ ರಕ್ಷಕ ದಳದ ಕಛೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ


ಕುಷ್ಟಗಿ. ಜ.೨೬. ಇಲ್ಲಿನ ತಾಲೂಕು ಕ್ರೀಡಾಂಗಣ ದಲ್ಲಿ ಇರುವ ಗೃಹರಕ್ಷಕ ದಳದ ಕಛೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ ಮಾತನಾಡಿ ಸಂವಿಧಾನ ರಚನೆಯಾಗಿ ಅಂದು ೧೯೫೦ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನವರೆಗೂ ಗಣರಾಜ್ಯೋತ್ಸವ ಆಚರಿಸುತ್ತಾ ಬರಲಾಗಿದೆ ಸರ್ವರಿಗೂ ಸಮಪಾಲು ಸಮಬಾಳು ಅನ್ನುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ನಮ್ಮೆಲ್ಲರ ಹಕ್ಕು ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಸರಕಾರಗಳು ಇರಬೇಕು.ಪ್ರಜಾಪ್ರಭುತ್ವ ಉಳಿಯಬೇಕು ಎನ್ನುವ ಸಮಾಜಿಕ ಸಮಾನತೆಯನ್ನು ಸಾರಿದ‌ ಸಂವಿಧಾನ ಇದಾಗಿದೆ‌ .ಹಾಗೂ ಇವತ್ತಿನ ದಿನ‌ ವೀರ‌ ಸಂಗೂಳ್ಳಿರಾಯಣ್ಣನವರ ಸ್ಮರಣೆ ಕೂಡಾ ಇದ್ದು ಇಂತಹ ವೀರ ಧೀರರ‌ ತ್ಯಾಗ ಬಲಿದಾನವನ್ನು ಸ್ಮರಿಸಬೇಕು ಎಂದು ನುಡಿದರು.
ಅಥಿತಿ ಯಾಗಿ ಆಗಮಿಸಿದ್ದ‌ ಕುಷ್ಟಗಿ ಗೃಹರಕ್ಷಕ ದಳದ ಘಟಕದ ಸ್ಥಾಪಕರಲ್ಲಿ ಒಬ್ಬರಾಗಿದ್ದ ತಿರುಪತಿ ಆರ್.ಜೋಶಿ ಮಾತನಾಡಿ ಗಣರಾಜ್ಯೋತ್ಸವದ ಶುಭಾಶಯ ಕೋರಿ ಪ್ರತಿಯೊಬ್ಬರು ಕೂಡಾ ಜೀವನದಲ್ಲಿ ಶಿಸ್ತು ,ಪ್ರಮಾಣಿಕತೆ ಅಳವಡಿಸಿಕೊಳ್ಳ ಬೇಕು ಎಂದು ಹೇಳಿದರು.
ಘಟಕಾಧಿಕಾರಿ ಶಿವಪ್ಪ ಚೂರಿ ಸ್ವಾಗತಿಸಿದರು ನಂತರ ಅತ್ಯುತ್ತಮ ಗೃಹರಕ್ಷಕ ರಾದ ರಾಜೇಸಾಬ ಮಾಟಲದಿನ್ನಿ‌,ಮಲ್ಲಿಕಾರ್ಜುನ ಬಳೂಟಗಿ, ಮತ್ತು ಘಟಕಾಧಿಕಾರಿ ಶಿವಪ್ಪ ಚೂರಿ ,ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಗೃಹರಕ್ಷಕ ಶರಣಪ್ಪ ಆಡೂರು.ಸೇರಿದಂತೆ ಘಟಕದ ಎಲ್ಲಾ ಗೃಹರಕ್ಷಕರು ಭಾಗವಹಿಸಿದ್ದರು. ನಂತರ ತಾಲೂಕು ಆಡಳಿತದಿಂದ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಂಥ ಸಂಚಲನ ದಲ್ಲಿ ಭಾಗವಹಿಸಿ ಶಾಸಕ ಅಮರೇಗೌಡ ಬಯ್ಯಾಪೂರ ಅವರಿಂದ ಪ್ರಶಸ್ತಿ ಪಡೆದುಕೊಂಡರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Gadi Kannadiga

Leave a Reply