ಗಡಿ ಕನ್ನಡಿಗ
ಖಾನಾಪುರ:ಶನಿವಾರ ತಾಲೂಕಿನ ಇಟಗಿ ಗ್ರಾಮದಲ್ಲಿ ಸರಕಾರಿ ಶಾಲೆ ಸ್ಥಳಾಂತರ ವಿರೋದಿಸಿ ಹಲವು ಸಂಘಟನೆಗಳು ಬಂದ್ ಕರೆ ನೀಡಿದ್ದವು ಬಂದ್ ಮಾಡಿ ಪ್ರತಿಭಟನೆ ಮಾಡುವಂತಹ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನನ್ನ ಮನೆಗೆ ಬೀಗ ಹಾಕುವದಾಗಿ ಹೇಳಿದ್ದು ಧಮ್ ಇದ್ದವರು ನನ್ನ ಮನೆಗೆ ಬೀಗ ಹಾಕಿ ಎಂದು ಸವಾಲು ಹಾಕಿದ್ದಾರೆ.
ರವಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಶಾಸಕ ವಿಠ್ಠಲ ಹಲಗೇರ ತಾಲ್ಲೂಕಿನ ಪೂರ್ವ ಭಾಗದ ಇಟಗಿ ಗ್ರಾಮದ ಸರ್ಕಾರಿ ಹೈಸ್ಕೂಲ್‌ನ್ನು ಘಸ್ಟುಳಿಗೆ ವರ್ಗಾವಣೆ ಮಾಡಿದ್ದರ ವಿರುದ್ದಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಅಂಜಲಿ ನಿಂಬಾಳಕರ್ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿ “ಇಟಗಿ ಹೈಸ್ಕೂಲ್ ಮುಂದುವರಿಯಬೇಕು ಮತ್ತುಘಸ್ಟುಳಿಗೆ ಕಡೆಗೆ ಹೊಸ ಹೈಸ್ಕೂಲ್ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದ್ದು ಒಳ್ಳೆಯ ವಿಚಾರ.
ಆದರೆ ಶಾಲೆ ಸ್ಥಳಾಂತರ ವಿಷಯದಲ್ಲಿ ರಾಜಕೀಯ ನಡೆಯುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ಶಾಸಕ ವಿಠ್ಠಲ ಹಲಗೇಕರ್, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನಾ ಸ್ಥಳದಲ್ಲಿ “ಶಾಸಕರ ಮನೆಯನ್ನು ಬೀಗ ಹಾಕುತ್ತೇವೆ, ನೇಪಾಳದಂತ ಪರಿಸ್ಥಿತಿ ಮಾಡುತ್ತೇವೆ” ಎಂದು ಹೇಳಿದ್ದು ಸರಿಯಲ್ಲ “ಅವನಿಗೆ ನಿಜವಾಗಿಯೂ ಧೈರ್ಯವಿದ್ದರೆ ನನ್ನ ಮನೆಯನ್ನು ಬೀಗ ಹಾಕಿ ತೋರಿಸಲಿ” ಎಂದು ನೇರ ಸವಾಲು ಹಾಕಿದರು.
#ಧಮ್ ತೋರಿಸಲು ಸದ್ಯದರಲ್ಲೇ ವೇದಿಕೆ ಸಜ್ಜು ಕರವೇ#
ಇನ್ನೂ ಇದಕ್ಕೆ ಪ್ರಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅದ್ಯಕ್ಷ ವಿಠ್ಠಲ ಹಿಂಡಲಕರ ಹಾಗೂ ಜಿಲ್ಲಾ ಘಟಕದ ದಶರಥ ಬನೋಶಿ ಶಾಸಕರು ತಮ್ಮ ಜವಾಬ್ದಾರಿ ಮರೆತು ಮಾತನಾಡುತ್ತಿದ್ದಾರೆ ಪ್ರಿಭಟನೆ ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು ಶಾಸಕರು ಅದನ್ನ ಮರೆತು ಮಾತನಾಡುತ್ತಿದ್ದಾರೆ ಅದಕ್ಕೆ ಇಟಗಿ ಶಾಲೆ ಸ್ಥಳಾಂತರ ವಿಷಯದಲ್ಲಿ ಅವರ ಪಾತ್ರ ಇಲ್ಲವೆಂದಾದರೆ ಅದನ್ನ ಸ್ಪಷ್ಟಪಡಿಸಬೇಕು ಅದನ್ನ ಹೊರತು ಪಡಿಸಿ ಈ ರೀತಿ ಹೋರಾಟಗಾರರಿಗೆ ಸವಾಲು ಹಾಕುವದು ಸರಿಯಲ್ಲ ಅಲ್ಲದೇ ಇದನ್ನ ಸಂಘಟಣೆ ಗಂಭೀರವಾಗಿ ತೆಗೆದುಕೊಂಡಿದ್ದು ಇದು ಪ್ರತಿಯೊಬ್ಬ ಕನ್ನಡಿಗನಿಗೂ ಹಾಕಿದ ಸವಾಲಾಗಿದ್ದು ಮುಂದಿನ ದಿನಗಳಲ್ಲಿ ಶಾಸಕರಿಗೆ ತಾಕತ್ತು ತೋರಿಸುವ ವೇದಿಕೆ ಸಜ್ಜಾಗಲಿದೆ.