ಮೂಡಲಗಿ: ‘ಜಾನಪದ ಕಲೆಗಳೊಂದಿಗೆ ಮನುಷ್ಯ ಬೆಳೆದು ಬಂದಿದ್ದು, ಅಂಥ ಸಂಭ್ರಮ, ಆನಂದವು ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಲಿದೆ’ ಎಂದು ಸಾಹಿತ್ಯ ಚಿಂತಕ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಶಿವಬೋಧರಂಗ ಸೊಸೈಟಿಯ ಸಭಾಭವನದಲ್ಲಿ ಜ್ಞಾನದೀಪ್ತಿ ಪ್ರತಿಷ್ಠಾನ, ಬೆಳಗಾವಿಯ ಪ್ರವೀಣ ಫೌಂಡೇಶನ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಇವರ ಸಹಯೋಗದಲ್ಲಿ ಯುಗಾದಿ ಹಬ್ಬದ ನಿಮಿತ್ತವಾಗಿ ಏರ್ಪಡಿಸಿದ್ದ ಜಾಗೃತ ಭಾರತ ಮತ್ತು ಹಾಸ್ಯ ಮನರಂಜನೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ನಿಜವಾದ ಜೀವನದ ಮೌಲ್ಯಗಳು ಜಾನಪದ, ದೇಸೀ ಸಂಸ್ಕೃತಿಯಲ್ಲಿ ಇದ್ದು, ಅದನ್ನು ಉಳಿಸಿಕೊಂಡು ಹೋಗುವುದು ಅವಶ್ಯವಿದೆ ಎಂದರು.
ಕಲಾವಿದ ರಾಮಚಂದ್ರ ಕಾಕಡೆ ಮಾತನಾಡಿ ಹಬ್ಬ ಹರಿದಿನಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ. ಸಂಪ್ರದಾಯ, ಆಚರಣೆಗಳ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು. ದೇಶದ ಬಗ್ಗೆ ಪ್ರತಿಯೊಬ್ಬರಲ್ಲಿ ಅಭಿಮಾನ ಇರಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಶಿವಬೋಧರಂಗ ಸೊಸೈಟಿಯ ಅಧ್ಯಕ್ಷ ರೇವಪ್ಪ ಕುರಬಗಟ್ಟಿ ಕಾರ್ಯಕ್ರಮವನ್ನ ಉದ್ಘಾಟಿಸಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಎಸ್.ಎಸ್. ಪಾಟೀಲ, ಜ್ಞಾನದೀಪ್ತಿ ಪ್ರತಿಷ್ಠಾನ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ಪ್ರವೀಣ ಫೌಂಡೇಶನ ಅಧ್ಯಕ್ಷ ಡಾ. ಸಚಿನ ಟಿ. ವೇದಿಕೆಯಲ್ಲಿದ್ದರು. ವೆಂಕಟೇಶ ಸೋನವಾಲಕರ, ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ, ಶಿವಬೋಧ ಯರಝರ್ವಿ, ಮಹಾಂತೇಶ ಹೊಸೂರ, ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ಅನಿಲ ಪಾಟೀಲ, ಈರಣ್ಣ ಕೊಣ್ಣೂರ, ಸುರೇಶ ನಾವಿ, ವಿಶಾಲ ಶೀಲವಂತ, ಪುಲಕೇಶ ಸೋನವಾಲಕರ, ಮಲ್ಲಪ್ಪ ಖಾನಗೌಡರ, ಕೃಷ್ಣಾ ಕೆಂಪಸಟ್ಟಿ ಇದ್ದರು. ಸುರೇಶ ಲಂಕೆಪ್ಪನ್ನವರ ಸ್ವಾಗಿಸಿದು, ಮಹಾವೀರ ಸಲ್ಲಾಗೋಳ ನಿರೂಪಿಸಿದರು.
Gadi Kannadiga > Local News > ನಿಜವಾದ ಜೀವನದ ಮೌಲ್ಯಗಳು ಜಾನಪದದಲ್ಲಿವೆ- ಚಿಂತಕ ಬಾಲಶೇಖರ ಬಂದಿ
ನಿಜವಾದ ಜೀವನದ ಮೌಲ್ಯಗಳು ಜಾನಪದದಲ್ಲಿವೆ- ಚಿಂತಕ ಬಾಲಶೇಖರ ಬಂದಿ
Suresh24/03/2023
posted on
