ಗದಗ ಮೇ ೧೬: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ೨೦೨೩ ರ ಮೇ ಮತ್ತು ಜೂನ್ ತಿಂಗಳಲ್ಲಿ ದ್ವಿತಿಯ ಪಿ.ಯು.ಸಿ. ಪೂರಕ ಪರೀಕ್ಷೆಗಳನ್ನು ಮೇ ೨೩ ರಿಂದ ಜೂನ್ ೨ ರವರೆಗೆ ಬೆ ೧೦.೧೫ ಗಂಟೆಯಿಂದ ಸಂಜೆ ೫.೩೦ ಗಂಟೆಯವರೆಗೆ ನಡೆಸಲಿದೆ. ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪ್ರತಿ ಪರಿಕ್ಷಾ ಕೇಂದ್ರಕ್ಕೆ ಒಬ್ಬ ವೀಕ್ಷಕರನ್ನು , ಪ್ರಶ್ನೆ ಪತ್ರಿಕೆ ವಿತರಿಸುವ ಮಾರ್ಗಾದಿಕಾರಿಗಳನ್ನು ಮತ್ತು ತ್ರಿಸದಸ್ಯರೊಳಗೊಂಡ ಪ್ರಶ್ನೆ ಪತ್ರಿಕಾ ಪಾಲಕರ ಮತ್ತು ದೃಢೀಕರಿಸುವವರ ಸಮಿತಿಯನ್ನು ನೇಮಕ ಮಾಡಲಾಗಿದೆ. ಪರೀಕ್ಷೆಗಳು ಜರುಗುವ ದಿನಗಳಂದು ವೀಕ್ಷಕರು ತಮಗೆ ವಹಿಸಿದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆಗಳನ್ನುಸುಗಮವಾಗಿ ಜರುಗಿಸಲು ಹಾಗೂ ಮಾರ್ಗಾಧಿಕಾರಿಗಳು ಮತ್ತು ತ್ರಿಸದಸ್ಯರೊಳಗೊಂಡ ಪ್ರಶ್ನೆ ಪತ್ರಿಕಾ ಪಾಲಕರ ಸಮಿತಿಯವರು ತಮಗೆ ವಹಿಸಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.
Gadi Kannadiga > State > ದ್ವಿತೀಯ ಪಿ.ಯು.ಸಿ.ಪೂರಕ ಪರೀಕ್ಷೆ : ವೀಕ್ಷಕರ,ಮಾರ್ಗಾಧಿಕಾರಿಗಳ ನೇಮಕ
ದ್ವಿತೀಯ ಪಿ.ಯು.ಸಿ.ಪೂರಕ ಪರೀಕ್ಷೆ : ವೀಕ್ಷಕರ,ಮಾರ್ಗಾಧಿಕಾರಿಗಳ ನೇಮಕ
Suresh16/05/2023
posted on
More important news
ಯಮನಪ್ಪ ಧರನಾಯಕ್ ನಿಧನ
02/06/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಂಗಳೂರು: ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ
31/05/2023