ಬೆಳಗಾವಿ, ಮೇ.೧೬ : ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (೬-೮) ವೃಂದದ ನೇಮಕಾತಿಗಾಗಿ ಮಾರ್ಚ.೦೮ ೨೦೨೩ ರಂದು ೧:೧ ರಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಮಾನ್ಯ ವಿಶೇಷಾಧಿಕಾರಿಗಳು ಕೇಂದ್ರೀಕೃತ ದಾಖಲಾತಿ ಘಟಕ ಬೆಂಗಳೂರು ರವರು ಪ್ರಕಟಿಸಿರುತ್ತಾರೆ.
ಉPSಖಿಖ-೨೦೨೨ ನೇ ಸಾಲಿನ ೧:೧ ರ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖೆಲಗಳನ್ನು ಸ್ವೀಕರಿಸುವ ಮತ್ತು ನೈಜತೆ ಪರಿಶೀಲನೆ ಮಾಡಿಸಲು ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿರುತ್ತಾರೆ.
ಈ ಸಂಬಂಧವಾಗಿ ೧:೧ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ನಿಗಧಿತ ದಿನಾಂಕಗಳಂದು ನಿಗಧಿಪಡಿಸಿರುವ ವಿಷಯವಾರು ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಹಾಗೂ ಒಂದು ಪ್ರತಿ ದೃಢೀಕೃತ ಝೇರಾಕ್ಸ್ ಪ್ರತಿಗಳು ಮತ್ತು (೬ ಪಾಸ್‌ಪೋರ್ಟ ಅಳತೆಯ) ಭಾವಚಿತ್ರಗಳನ್ನು ಉಪನಿರ್ದೇಶಕರು(ಆಡಳಿತ) ಕಛೇರಿಯಲ್ಲಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲ ದಾಖಲೆಗಳ ಸ್ವೀಕೃತಿ ವೇಳಾ ಪಟ್ಟಿ:
ಮೇ.೨೨ ೨೦೨೩ ರಂದು ಇಂಗ್ಲೀಷ ವಿಷಯ ಹಾಜರಾಗಬೇಕಾದ ಅಭ್ಯರ್ಥಿಗಳ ಸಂಖ್ಯೆ ೦೧ ರಿಂದ ೧೨೮
ಮೇ.೨೩ ೨೦೨೩ ಗಣಿತ ಮತ್ತು ವಿಜ್ಞಾನ (ಕನ್ನಡ) ವಿಷಯ ಹಾಜರಾಗಬೇಕಾದ ಅಭ್ಯರ್ಥಿಗಳ ಸಂಖ್ಯೆ ೦೧ ರಿಂದ ೧೪೩
ಮೇ.೨೪ ೨೦೨೩ ಗಣಿತ ಮತ್ತು ವಿಜ್ಞಾನ (ಮರಾಠಿ) ಹಾಜರಾಗಬೇಕಾದ ಅಭ್ಯರ್ಥಿಗಳ ಸಂಖ್ಯೆ ೦೧ ರಿಂದ ೧೨, ಗಣಿತ ಮತ್ತು ವಿಜ್ಞಾನ (ಉರ್ದು) ೦೧ ರಿಂದ ೦೬, ಸಮಾಜ ವಿಜ್ಞಾನ(ಕನ್ನಡ) ೦೧ ರಿಂದ ೧೦೦
ಮೇ.೨೫ ೨೦೨೩ ಸಮಾಜ ವಿಜ್ಞಾನ(ಕನ್ನಡ) ೧೦೧ ರಿಂದ ೨೨೫
ಮೇ.೨೬ ೨೦೨೩ ಸಮಾಜ ವಿಜ್ಞಾನ(ಕನ್ನಡ) ೨೨೬ ರಿಂದ ೨೫೧
ಮೇ.೨೯ ೨೦೨೩ ಸಮಾಜ ವಿಜ್ಞಾನ(ಮರಾಠಿ) ೦೧ ರಿಂದ ೩೩, ಸಮಾಜ ವಿಜ್ಞಾನ(ಉರ್ದು) ೦೧ ರಿಂದ ೦೭, ಜೀವ ವಿಜ್ಞಾನ(ಕನ್ನಡ) ೦೧ ರಿಂದ ೨೬, ಜೀವ ವಿಜ್ಞಾನ(ಮರಾಠಿ) ೦೧ ರಿಂದ ೦೩, ಜೀವ ವಿಜ್ಞಾನ(ಉರ್ದು) ೦೧ ರಿಂದ ೦೬ ಇರುತ್ತದೆ.
Gadi Kannadiga > Local News > ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕರ (೬-೮) ವೃಂದದ ನೇಮಕಾತಿ
ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕರ (೬-೮) ವೃಂದದ ನೇಮಕಾತಿ
Suresh16/05/2023
posted on