ಬಳ್ಳಾರಿ ಡಿ ೦೯. ಬಳ್ಳಾರಿ ನಗರದ ರಾಜಕುಮಾರ್ ರಸ್ತೆಯಲ್ಲಿರುವ ರೆಡ್ಡಿ ಜನ ಸಂಘದ ಶಾಂತಿನಿಕೇತನ ಆವರಣದಲ್ಲಿ ಡಿ.೧೧ ಕ್ಕೆ ೧೦ ಕೋಟಿ ರೂ ವೆಚ್ಚದಲ್ಲಿ ರೆಡ್ಡಿ ಭವನದ ಅಡಿಗಲ್ಲು ಸಮಾರಂಭದ ಹಮ್ಮಿಕೊಳ್ಳಲಾಗಿದೆ ಎಂದು ರೆಡ್ಡಿ ಗುರುಪೀಠದ ಶ್ರಿಗಳಾದ ವೇಮನಾನಂದ ಪುರಿ ಸ್ವಾಮಿಗಳು ತಿಳಿಸಿದರು. ಅವರು ಸಂಘದ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಮಾತಾಡಿದರು. ಈ ಸಮಾರಂಭದಲ್ಲಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಭೂಮಿಪೂಜೆ ಮತ್ತು ಹೆಚ್.ಕೆ.ಪಾಟೀಲ್ ಅವರು ಅಡಿಗಲ್ಲು ನೆರವೇರಿಸಲಿದ್ದಾರೆ. ಸಚಿವ ಹಾಲಪ್ಪಾಚಾರ್ ಮತ್ತು ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಶಾಲೆಯ ೨ ನೇ ಮಹಡಿಯನ್ನು ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಹಾಗು ಶಾಸಕ ಶಿವಶಂಕರ ರೆಡ್ಡಿ ಉದ್ಘಾಟನೆ ಮಾಡಲಿದ್ದು. ೪ ಮಹಡಿಯ ಸಭಾಂಗಣಕ್ಕೆ ರಾಜ್ಯ ಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭೂಮಿ ಪೂಜೆ ಮಾಡಲಿದ್ದಾರೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಎನ್, ಪ್ರತಾಪ್‌ರೆಡ್ಡಿಯವರು ತಿಳಿಸಿದ್ದಾರೆ. ಹಲವು ಗಣ್ಯರು ಹೇಮರೆಡ್ಡಿ ಮಲ್ಲಮ್ಮ ಮತ್ತು ಯೋಗಿ ವೇಮನ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದು ರೆಡ್ಡಿ ಜನ ಸಂಘದ ಜಿಲ್ಲಾ ಅಧ್ಯಕ್ಷ ಎನ್. ಪ್ರತಾಪ ರೆಡ್ಡಿ ಅಧ್ಯಕ್ಷತೆವಹಿಸಲಿದ್ದಾರೆ. ರಾಜ್ಯದ ವಿವಿಧಡೆಯಿಂದ ೩ ರಿಂದ ೫ ಸಾವಿರ ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
೧೯೫೧ ರಲ್ಲಿ ಸರ್ಕಾರ ಸಂಘಕ್ಕೆ ನಿವೇಶನ ನೀಡಿತ್ತು. ಇಲ್ಲಿನ ಶಾಲೆಯಲ್ಲಿ ೭೫೦ ಕ್ಕೂ ಹೆಚ್ಚು ಮಕ್ಕಳು ೧ ರಿಂದ ೧೦ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಗರದಲ್ಲಿಯೇ ಅತಿ ಕಡಿಮೆ ಶುಲ್ಕದಿಂದ ಇಂಗ್ಲೀಷ್ ಮೀಡಿಯಂ ತರಗತಿಗಳನ್ನು ನಡೆಸುತ್ತಿದೆಂದರು. ಬರುವ ಶೈಕ್ಷಣಿಕ ವರ್ಷದಿಂದ ಗ್ರಾಮೀಣ ಪ್ರದೇಶದ ೬೦ ರಿಂದ ೮೦ ಹೆಣ್ಣು ಮಕ್ಕಳಿಗೆ ವಸತಿ ನಿಲಯ ಆರಂಭ ಮಾಡಲು ಉದ್ದೇಶಿಸಿದೆಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸಂಘದ ಜಿಲ್ಲಾ ಗೌರವ ಅಧ್ಯಕ್ಷರೂ ಆಗಿರುವ ನಗರ ಶಾಸಕ ಸೋಮಶೇಖರ ರೆಡ್ಡಿ, ರಮಣರೆಡ್ಡಿ,ಹೇಮಚಂದ್ರರೆಡ್ಡಿ, ಚಿತ್ರಸೇನರೆಡ್ಡಿ, ತಿಮ್ಮಾರೆಡ್ಡಿ, ಮರಿಸ್ವಾಮಿರೆಡ್ಡಿ, ವೆಂಕಟರಮಣ ರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.