This is the title of the web page
This is the title of the web page

Please assign a menu to the primary menu location under menu

Local News

ಸರ್ವೇ ಸರಿಯಾಗಿ ಮಾಡಿ ನಮಗೂ ಮನೆ ನೀಡಿ ಎಂದು ನಿರಾಶ್ರಿತರ ಪ್ರತಿಭಟನೆ


ಬೆಳಗಾವಿ: ಭಾರಿ ಮಳೆಯಿಂದ ಮನೆಗಳು ಕುಸಿದಿದ್ದು ಅವುಗಳನ್ನು ಸರಿಯಾಗಿ ಸರ್ವೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಭಾವನೆ ತೋರಿದ್ದಾರೆ ಎಂದು ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣ ಹಾಗೂ ದೇವರಶೀಗಿಹಳ್ಳಿಯ ಸಂತ್ರಸ್ತರು ಪ್ರತಿಭಟನೆ ನಡೆಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಅವರು. ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣ ಹಾಗೂ ದೇವರಶೀಗಿಹಳ್ಳಿಯಲ್ಲಿ ಮಳೆಯ ಅವಾಂತರದಿಂದ ನೂರಾರು ಮನೆಗಳು ನೆಲಸಮಗೊಂಡಿವೆ. ಅವುಗಳನ್ನು ಸರ್ವೇ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಹಲವಾರು ಬಿದ್ದ ಮನೆಗಳನ್ನು ಪಟ್ಟಿಯಲ್ಲಿ ಸೇರಿಸದೇ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಫಿಸಿದರು.

ಮನೆ ಬಿದ್ದು ಒಂದು ವರ್ಷ ಆಗಿದೆ. ಬಿದ್ದ ಮನೆಯಲ್ಲಿಯೇ ಜೀವನ ನಡೆಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳನ್ನು ಸರಿಯಾಗಿ ಸರ್ವೇ ಮಾಡದೇ ನಮಗೆ ಅನ್ಯಾಯವಾಗಿದ್ದು ಮನೆ ಇಲ್ಲದೇ ಬೀದಿಗೆ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಬಿದ್ದ 24 ಗಂಟೆಗಳಲ್ಲಿ ಪರಿಹಾರ ಕೊಡುತ್ತೇವೆ ಎಂದು ಹೇಳುವ ಅಧಿಕಾರಿಗಳು, ಜನಪ್ರತಿನಿಧಿಗಳ ಮಾತು ಬರೀ ಹೇಳಿಕೆಗೆ ಮಾತ್ರ ಸಿಮೀತವಾಗಿದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.


Gadi Kannadiga

Leave a Reply