This is the title of the web page
This is the title of the web page

Please assign a menu to the primary menu location under menu

State

ಮಾವು ಪ್ರದರ್ಶನ ಮಾರಾಟ, ಮೇಳ: ಮಳಿಗೆಗಾಗಿ ಹೆಸರು ನೋಂದಾಯಿಸಿ


ಕೊಪ್ಪಳ ಮೇ ೧೫ : ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಸತತ ೬ನೇ ವರ್ಷದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗುತ್ತಿದ್ದು, ಮಳಿಗೆಗಳನ್ನು ಕಾಯ್ದಿರಿಸಲು ಜಿಲ್ಲೆಯ ಆಸಕ್ತ ಮಾವು ಬೆಳೆಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಮಾವು ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸುವ ಮತ್ತು ಕೊಪ್ಪಳ ಜಿಲ್ಲೆಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಯೋಗ್ಯ ಬೆಲೆಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರಿಂದ ನೇರವಾಗಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯು ಮೇ ೨೩ ರಿಂದ ಮೇ ೩೧ರವರೆಗೆ ಮಾವು ಹಣ್ಣುಗಳ ಪ್ರದರ್ಶನ ಮತ್ತು ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳ ಮಾರಾಟ ಮೇಳವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಈ ಮೇಳದಲ್ಲಿ ಭಾಗವಹಿಸುವ ಆಸಕ್ತ ಜಿಲ್ಲೆಯ ಮಾವು ಬೆಳೆಗಾರರು ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಮುಂಗಡವಾಗಿ ಮಾರಾಟ ಮಳಿಗೆಗಳನ್ನು ಕಾಯ್ದಿರಿಸಲು ತಮ್ಮ ಹೆಸರನ್ನು ಇಲಾಖಾ ಅಧಿಕಾರಿಗಳ ಹತ್ತಿರ ಹೆಸರು ನೋದಾಯಿಸಬೇಕು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ರೈತರು ತಮ್ಮ ಪಹಣಿ ಪ್ರತಿಯೊಂದಿಗೆ, ತಮ್ಮ ಹೆಸರು, ವಿಳಾಸ, ಸರ್ವೆ ನಂಬರ್, ಬೆಳೆ, ತಳಿಗಳು ಹಾಗೂ ವಿಸ್ತೀರ್ಣ ಮುಂತಾದ ವಿವರಗಳೊಂದಿಗೆ ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಾದ ಕೊಪ್ಪಳ ಮೊ.ಸಂ: ೯೮೪೪೮೭೪೮೨೨, ಗಂಗಾವತಿ ಮೊ.ಸಂ: ೯೪೮೧೩೦೫೮೩೦, ಕುಷ್ಟಗಿ ಮೊ.ಸಂ: ೮೮೬೧೬೯೭೯೮೯ ಹಾಗೂ ಯಲಬುರ್ಗಾ ಮೊ.ಸಂ: ೯೬೧೧೮೮೮೬೦೭, ತೋಟಗಾರಿಕೆ ಉಪನಿರ್ದೇಶಕರ ಕಛೇರಿಯ ಕೇಂದ್ರ ಸ್ಥಾನಿಕ ಸಹಾಯಕರ ಮೊ.ಸಂ: ೯೭೪೧೦೫೭೦೪೭ ಮತ್ತು ಕೊಪ್ಪಳ ತೋಟಗಾರಿಕೆ ಕಿಸಾನ ಕೇರ್ ಸೆಂಟರ್ ಮೊ.ಸಂ: ೯೯೦೨೭೯೨೬೩೫ ಗೆ ಸಂಪರ್ಕಿಸಬಹುದಾಗಿದೆ.ಜಿಲ್ಲೆಯ ಆಸಕ್ತ ಮಾವು ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯಲು ಹಾಗೂ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮಾವು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕರ (ಜಿಪಂ) ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

 


Leave a Reply