This is the title of the web page
This is the title of the web page

Please assign a menu to the primary menu location under menu

State

ಎರಡು ದಿನಗಳ ಕಮ್ಮಟ : ಭಾಗವಹಿಸಲು ಹೆಸರು ನೋಂದಾಯಿಸಿ


ಕೊಪ್ಪಳ, ಸೆ. ೨೯ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ವಿಜ್ಞಾನ ಮತ್ತು ಪತ್ರಿಕೋದ್ಯಮ ಪದವೀಧರರಿಗೆ “ವಿಜ್ಞಾನ ಮತ್ತು ತಂತ್ರಜ್ಞಾನ ಪಠ್ಯ ಅನುವಾದ’’ ವಿಷಯದ ಬಗ್ಗೆ ಎರಡು ದಿನಗಳ ಕುಮ್ಮಟವನ್ನು ಅಕ್ಟೋಬರ್ ೧೮ & ೧೯ ರಂದು ಆಯೋಜಿಸಲಾಗಿದ್ದು, ಭಾಗವಹಿಸಲು ಹೆಸರು ನೋಂದಾಯಿಸಬೇಕು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆ ವಿಜ್ಞಾನ್ ಪ್ರಸಾರ್ ಮತ್ತು ಕುವೆಂಪು ಭಾಷಾ ಭಾರತಿ ಇವರ ಸಹಯೋಗದಲ್ಲಿ ವಿಜ್ಞಾನ ಮತ್ತು ಪತ್ರಿಕೋದ್ಯಮ ಪದವೀಧರರಿಗಾಗಿ “ವಿಜ್ಞಾನ ಮತ್ತು ತಂತ್ರಜ್ಞಾನ ಪಠ್ಯ ಅನುವಾದ’’ ವಿಷಯದ ಬಗ್ಗೆ ಎರಡು ದಿನಗಳ ಕುಮ್ಮಟವನ್ನು ಅಕ್ಟೋಬರ್ ೧೮ ಮತ್ತು ೧೯ ರಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಲ್ಲಿ ಏರ್ಪಡಿಸಲಾಗಿದೆ. ಕುಮ್ಮಟದಲ್ಲಿ ವಿಶೇಷ ಉಪನ್ಯಾಸಗಳು, ಅನುವಾದ ತಂತ್ರಗಳ ಟಿಪ್ಪಣಿ ಮತ್ತು ಅಭ್ಯಾಸ ಅಧಿವೇಶನಗಳನ್ನು ಏರ್ಪಡಿಸಲಾಗಿದ್ದು, ಗರಿಷ್ಠ ೩೦ ವಿದ್ಯಾರ್ಥಿಗಳು ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಅಕ್ಟೋಬರ್ ೦೮ ಕೊನೆಯ ದಿನವಾಗಿದ್ದು, ಮೊದಲು ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಈ ಕಮ್ಮಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪ್ರೋ. ಯು.ಆರ್. ರಾವ್ ವಿಜ್ಞಾನ ಭವನ, ಜಿ.ಕೆ.ವಿ.ಕೆ. ಆವರಣ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು-೫೬೦೦೯೭ ವಿಳಾಸಕ್ಕೆ ಅಥವಾ ದೂ.ಸಂ: ೦೮೦-೨೯೭೨೧೫೫೦, ಅಕಾಡೆಮಿ ವೆಬ್‌ಸೈಟ್ ತಿತಿತಿ.ಞsಣಚಿಛಿಚಿಜemಥಿ.iಟಿ ಮತ್ತು ಇ-ಮೇಲ್ ಞsಣಚಿ.goಞ@gmಚಿiಟ.ಛಿom ಗೆ ಸಂಪರ್ಕಿಸಬಹುದು ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply