This is the title of the web page
This is the title of the web page

Please assign a menu to the primary menu location under menu

State

ಚುಟುಕು ಚೌಪದಿ ಕೃತಿಗಳ ಬಿಡುಗಡೆ


ಬೈಲಹೊಂಗಲ : ದೇವರಾಜ ಅರಸ ಬಡಾವಣೆ, ಬಸವನ ಕುಡಚಿ ವೀರಶೈವ ಲಿಂಗಾಯತ ಶಿವಬಸವ ದೇವಾಲಯ ಟ್ರಸ್ಟ ಹಾಗೂ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಇಲ್ಲಿಯ ರಹವಾಸಿ ಹಿರಿಯ ಕವಿ, ಸಮಾಜ ಚಿಂತಕರಾದ ಶ್ರೀ ಗುರುಸಿದ್ಧಯ್ಯ ಹಿರೇಮಠ ಇವರ “ಚುಟುಕು ಚೌ ಚೌ ಚಮಕು”, “ಚುಟುಕು ಚೌಪದಿ ಚಂದನ” ಹಾಗೂ “ಚುಟುಕು ಚುಂಬಕ” ಕೃತಿಗಳ ಬಿಡುಗಡೆ ಮತ್ತು ಅವಲೋಕನ ಸಮಾರಂಭ ದಿನಾಂಕ: ೨೧-೦೫-೨೦೨೨ ರಂದು ಸಾಯಂಕಾಲ ಶಿವಾಲಯ ಮಂದಿರದಲ್ಲಿ ಇಲ್ಲಿಯ ನಾಗರಿಕರ ಸಮ್ಮುಖದಲ್ಲಿ ಜರುಗಿತು. ಮಹಿಳೆಯರ ಪ್ರಾರ್ಥನೆಯ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷತೆಯನ್ನು ಶ್ರೀ ನೀಲಕಂಠ ಶಾಸ್ತ್ರೀ ಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಸ ರಾ ಸುಳಕೂಡೆಯವರು ಶ್ರೀ ಗುರುಸಿದ್ಧಯ್ಯ ಹಿರೇಮಠರ ಕೃತಿ ಬಗ್ಗೆ ಮಾತನಾಡಿದರು. ಶ್ರೀ ಯ ರು ಪಾಟೀಲ ಕ.ಸಾಪ ಮಾಜಿ ಅಧ್ಯಕ್ಷರು ಬೋಧಕ ಸಾಹಿತಿಗಳಂತೆ ಬೋಧಕೇತರ ಸಾಹಿತಿಗಳ ಸಾಲಿನಲ್ಲಿ ಸೇರಿ ಶ್ರೀ ಗುರುಸಿದ್ಧಯ್ಯ ಹಿರೇಮಠರು ಸಾಹಿತ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ ಎಂದರು. ಪುಸ್ತಕ ಪರಿಚಯಿಸಿದ ಶ್ರೀ ಎ ಎ ಸನದಿ ಶ್ರೀ ಗುರುಸಿದ್ಧಯ್ಯ ಹಿರೇಮಠರು ಕವನ ಲೇಖನಗಳೊಂದಿಗೆ ಚುಟುಕು ಸಾಹಿತ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದು, ಸುಮಾರು ನಾಲ್ಕೆöÊದು ಸಾವಿರ ಚುಟುಕುಗಳನ್ನು ರಚಿಸಿ, ಐದು ಪುಸ್ತಕಗಳನ್ನು ಹೊರ ತಂದಿದ್ದು ಇದು ನಮ್ಮಲ್ಲಿ ದಾಖಲೆಯಾಗಿದೆ. ಹಿರಿಯರಿಂದ ಕಿರಿಯವರೆಗೆ ಅಮೂಲಾಗ್ರ ಜ್ಞಾನ ಸಂಪಾದನೆಗೆ ಇಲ್ಲಿಯ ವಿವಿಧ ಬಗೆಯ ವಿಷಯಗಳ ಚುಟುಕುಗಳು ಸಾಮಾನ್ಯ ಜ್ಞಾನ ನಿಧಿಗೆ ಪೂರಕವಾಗಿದೆ. ಅಲ್ಪದಲ್ಲಿ ಅದ್ಭುತ ವಿಷಯ ತಿಳಿಸಿ ಆಡುವ ಮುಟ್ಟದ ಸೊಪ್ಪಿಲ್ಲ ಶ್ರೀ ಹಿರೇಮಠರು ಬರೆಯದ ವಿಷಯವಿಲ್ಲ, ಚುಟುಕು ಕವಿ ಸರದಾರರಾಗಿ ಇವರು ಹೊರ ಹೊಮ್ಮಿದ್ದಾರೆ ಎಂದು ತಮ್ಮ ಮನದಾಳದ ಮಾತನ್ನು ತಪ್ಪು ಒಪ್ಪುಗಳ ಬಗ್ಗೆ ಸಹಿತ ಸುಧೀರ್ಘವಾಗಿ ಮಾತನಾಡಿದರು. ಸಮಾರಂಭದ ಕೇಂದ್ರ ಬಿಂದು ಶ್ರೀ ಗುರುಸಿದ್ಧಯ್ಯ ಹಿರೇಮಠ ಬಸವ ತತ್ವ ಪ್ರಕಾರ ಇವನಾರವ ಅನ್ನದೆ ಇವ ನಮ್ಮವ ಅನ್ನುತ ಬಾಳಿದರೆ ಸಮಾಜ ಶಾಂತಿಯ ತೋಟವಾಗುವುದು. ಹಾಗೆ ನಡೆಯೋಣ ಅಂದರು.
ಇದೇ ಸಂದರ್ಭದಲ್ಲಿ ಕವಿ ಶ್ರೀ ಗುರುಸಿದ್ಧಯ್ಯ ಹಿರೇಮಠರು ಎಲ್ಲ ಅತಿಥಿಗಳನ್ನು ಶಾಲು ಹಾಗೂ ಪುಷ್ಪಹಾರದೊಂದಿಗೆ ಸನ್ಮಾನಿಸಿದರು. ಶ್ರೀ ನದೀಮ ಸನದಿಯವರನ್ನು ಕೂಡಾ ಇದೇ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಿದರು. ವೇದಿಕೆ ಮೇಲೆ ಶಿವಾಲಯದ ಬಸವರಾಜ ಹವಾನಿ ಉಪಸ್ಥಿತಿ ವಹಿಸಿದ್ದರು. ಶ್ರೀ ವಿರೇಶ ಪವಾಡಿ ಸ್ವಾಗತಿಸಿದರು. ಶ್ರೀ ಬಸವರಾಜ ಬ ಮಠಪತಿ ನಿರೂಪಿಸಿದರು ಹಾಗೂ ಶ್ರೀ ಶಿವಬಸವ ಹಿರೇಮಠ ವಂದಿಸಿದರು.


Gadi Kannadiga

Leave a Reply