ಯಮಕನಮರಡಿ: ಸಮೀಪದ ಹುನ್ನೂರು ಆರ್.ಸಿ. ಗ್ರಾಮದ ಯುವಲೇಖಕ, ಪ್ರಥಮ ಪಿಯುಸಿ ವಿದ್ಯಾರ್ಥಿ ಸತ್ತೆಪ್ಪಾ ರಾಯಪ್ಪಾ ಅಡಕೆಪೂಜೇರಿಯವರು ರಚಿಸಿರುವ, ಹಿಡಕಲ್ ಡ್ಯಾಂ ಗಂಧದ ಗುಡಿ ಪ್ರಕಾಶನವರು ಹೊರತಂದಿರುವ ಮನಸ್ಸು ವೈಚಾರಿಕ ಲೇಖನವುಳ್ಳ ಚೊಚ್ಚಲ ಕೃತಿ ಬಿಡುಗಡೆಯು ದಿ. ೨೨ ರಂದು ಹೆಬ್ಬಾಳದಲ್ಲಿ ನಡೆದ ೧೧ನೇ ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಿತು.
£ಡಸೂಸಿ ಸಿದ್ದಸಂಸ್ಥಾನ ಮಠದ ಜಗದ್ಗುರು ಶ್ರೀ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಮನಸ್ಸು ಕೃತಿ ಬಿಡುಗಡೆಗೊಳಿಸಿ ಯುವ ಲೇಖಕ ಸತ್ತೆಪ್ಪಾ ಅಡಕೆಪೂಜೇರಿಯವರಿಗೆ ಶುಭಹಾರೈಸಿದರು.
ಈ ವೇಳೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮಹಾವೀರ ಬಾಳಿಕಾಯಿ, ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು, ಹತ್ತರಗಿ ಹರಿಮಂದಿರದ ಶ್ರೀ ಆನಂದ ಮಹಾರಾಜರು, ಮಾಜಿ ಸಚಿವ ಶಶಿಕಾಂತ ನಾಯಿಕ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಳಾ ಮೆಟಗುಡ್ಡ, ಹಿರಿಯ ಸಾಹಿತಿಗಳಾದ ಎಸ್.ಎಮ್.ಶಿರೂರ, ಕಾ.ಹೂ. ಶಿಂದೆ, ಉಪನ್ಯಾಸಕ ಎ.ಬಿ. ಗುರಕನವರ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹುಕ್ಕೇರಿ ತಾಲೂಕಾಧ್ಯಕ್ಷ ಪ್ರಕಾಶ ಹೊಸಮ£, ಯುವ ಕವಿ ಮಹಾಂತೇಶ ಹೊಸಮ£, ಕೃತಿಯ ಹೊರತರಲು ಪ್ರೇರಣೆ £Ãಡಿದ ಮುಖ್ಯ ಶಿಕ್ಷಕ ಉದಯಕುಮಾರ ಕಮ್ಮಾರ, ಬೆಳಗಾವಿ ಜಿಲ್ಲಾ ಕರವೇ ಉಪಾಧ್ಯಕ್ಷ ರಾಜು ನಾಶಿಪುಡಿ, ಬೆಳಗಾವಿ ತಾಲೂಕಾ ಕಸಾಪ ಅಧ್ಯಕ್ಷ ಸುರೇಶ ಹಂಜಿ, ಮಾದ್ಯಮ ಪ್ರತಿ£ಧಿ ವಿನೋದ ಜಗಜಂಪಿ, ಕುಂದರನಾಡಿನ ಸಾಹಿತಿಗಳಾದ ಆರ್.ಎಸ್. ಪಂಗನ್ನವರ, ವಿಠ್ಠಲ ಬೂಕನಟ್ಟಿ, ಪತ್ರಕರ್ತರಾದ ಎಸ್.ಬಿ.ಮಂಜರಗಿ, ಸಂಜೀವ ಮುಷ್ಟಗಿ, ಎ.ಎಮ್. ಕರ್ನಾಚಿ ಮತ್ತು ಸಾಹಿತ್ಯಾಭಿಮಾ£ಗಳು ಉಪಸ್ಥಿತರಿದ್ದರು.
Gadi Kannadiga > Local News > ಮನಸ್ಸು ಕೃತಿ ಬಿಡುಗಡೆ