This is the title of the web page
This is the title of the web page

Please assign a menu to the primary menu location under menu

Local News

ನಾಗೇಶ್ ನಾಯಕ ಅವರ ‘ಕಾಡುವ ಕವಿತೆ’ ಸಂಕಲನ ಬಿಡುಗಡೆ


ಬೆಳಗಾವಿ: ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಸಹೃದಯ ಸಾಹಿತ್ಯ ಪ್ರತಿಷ್ಠಾನದ ಸಹಯೋಗದೊಂದಿಗೆ ಅಗಷ್ಟ್ ೬ ರಂದು ಬೆಳಿಗ್ಗೆ ೧೦ ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ಅವರ ‘ಕಾಡುವ ಕವಿತೆ’ ವಿಮರ್ಶಾ ಸಂಕಲನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ಎ. ಎ. ಸನದಿ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಸಾಹಿತಿಗಳಾದ ಶಿರೀಷ ಜೋಶಿ ಕೃತಿ ಬಿಡುಗಡೆ ಮಾಡಲಿದ್ದಾರೆ. ನಗರದ ಮ.ನ.ರ. ಸಂಘ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕವಯಿತ್ರಿ ಡಾ. ನಿರ್ಮಲಾ ಬಟ್ಟಲ ಸಂಕಲನದ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡಿಕೇರಿಯ ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸವರಾಜ ಗೌಡಪ್ಪ ಬಿಲ್‌ಶಿವಣ್ಣವರ (ದೊಡ್ಲಿ) ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದ ಕಾರ್ಯಪಾಲಕ ಅಭಿಯಂತರರಾದ ವಿಠಲ ತಡಸಲೂರ ಆಗಮಿಸಲಿದ್ದಾರೆ ಎಂದು ಸಹೃದಯ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ರಮೇಶ್ ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply