This is the title of the web page
This is the title of the web page

Please assign a menu to the primary menu location under menu

Local News

ಡಾ ಅನುಪಮಾ ಆನಂದ ಖೋತ (ಉತ್ನಾಳ) ಅವರ ಕೃತಿಗಳ ಬಿಡುಗಡೆ


ಬೆಳಗಾವಿ ಜೂನ್ ೨೮: ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ಡಾ ಅನುಪಮಾ ಆನಂದ ಖೋತ (ಉತ್ನಾಳ) ಅವರ ಆರು ಕೃತಿಗಳ ಬಿಡುಗಡೆ ನಡೆಯಿತು.ಉದ್ಘಾಟನೆ ನೆರವೇರಿಸಿದ ಸಂಸ್ಕ್ರತ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಶ್ರೇಷ್ಠ ಚಿಂತಕ ಡಾ. ಮಲ್ಲೇಪುರಂ ಜಿ.ವೆಂಕಟೇಶ್ ಅವರು ಕನ್ನಡ ಶಾಸ್ತ್ರ,ವ್ಯಾಕರಣ, ಸಾಹಿತ್ಯ ಮತ್ತು ಭಾಷೆಗೆ ಶ್ರೀ ಮಂತ ಪರಂಪರೆಯಿದೆ. ಒಂದೊಂದು ಶಾಸ್ತ್ರ ಗಳಿಂದ ಹೊರ ಹೊಮ್ಮಿದ ಕೃತಿ ಗಳ ನ್ನು ಓದಿ ಅರ್ಥೈಸಿಕೊಳ್ಳಲು ಮೂವತ್ತಕ್ಕೂ ಹೆಚ್ಚು ವರ್ಷ ಗಳು ಬೇಕು. ಅನೇಕ ವ್ಯಾಕರಣ ದ ವೈವಿಧ್ಯ ಮಯ ವಾದ ಪರಂಪರೆಯೇ ಇದೆ ಇದನ್ನು ಸಾಹಿತಿ ಮತ್ತು ಭಾಷಾ ತಜ್ಞರು ಅಭ್ಯಾಸ ಮಾಡಬೇಕು ಎಂದರು. ಕೃತಿ ಬಿಡುಗಡೆ ಮಾಡಿದ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ . ಸ.ಚಿ ರಮೇಶ ಅವರು ಒಬ್ಬ ನಿಜವಾದ ಅಧ್ಯಾಪಕನು ಅಧ್ಯಯನ ಮತ್ತು ಸಂಶೋಧನ ಗಳಲ್ಲಿ ತನ್ನನ್ನು ನಿರಂತರ ತೊಡಗಿಸಿ ಕೊಂಡಿರುತ್ತಾ ನೆ ಅವೆರಡೂ ಅವನ ಉಚ್ಛವಾಸ ಮತ್ತು ನಿಚ್ವಾಸ ಇದ್ದ ಹಾಗೆ.ಅನುಪಮಾ ಅವರು ಇವೆರಡರಲ್ಲಿ ಯೂ ತಮ್ಮನ್ನು ತೊಡಗಿಸಿ ಕೊಂಡಿರುವ ದಕ್ಕೆ ಇಂದು ಬಿಡುಗಡೆ ಯಾಗುತ್ತಿರುವ ವಿವಿಧ ಸಾಹಿತ್ಯ ಪ್ರಕಾರಗಳ ಕೃತಿಗಳೇ ಸಾಕ್ಷಿ ಎಂದರು
ಡಾ .ಗುರುದೇವಿ ಹೂಲೆಪ್ಪನವರಮಠ ಅವರು ಡಾ ಅನುಪಮಾ ಅವರ ನಿಜ ಶರಣ ಅಂಬಿಗರ ಚೌಡಯ್ಯ ನಾಟಕ ಹಾಗೂ ಪ್ರಿಯ ಸಾಯಿ ಕೃತಿ ಗಳನ್ನು, ಚಿಂತನ ಸನ್ನಿಧಿ ಕೃತಿಯನ್ನು ಪ್ರೊ .ರಾಜನಂದ ಗಾರ್ಗಿ ಡಾ ಪೀ.ಜಿ. ಕೆಂಪನ್ನವರ ಕನ್ನಡ ಜಾನಪದ ಶಾಸ್ತ್ರಕ್ಕೆ ಎಸ್.ಎಸ್.ಅಂಗಡಿ ಅವರ ಕೊಡುಗೆ ಕೃತಿಯನ್ನು, ಪ್ರೊ ಮಹಾನಂದಾ ಪಾಟೀಲ ಅವರು ನಾಲ್ಕನೆಯ ಆಯಾಮ ಒಂದು ವಿಶ್ಲೇಷಣೆ ಕೃತಿ ಕುರಿತು ಡಾ. ನಿರ್ಮಲಾ ಬಟ್ಟ ಲ ಅವರು ತ್ಯಾಗವಿರ ಶಿರಸಂಗಿ ಲಿಂಗ ರಾಜರು ಕೃತಿ ಕುರಿತು ಮಾತನಾಡಿದರು
ಲೇಖಕಿ ಡಾ.ಅನುಪಮಾ ಉತ್ನಾಳ ತಮ್ಮ ಬರವಣಿಗೆಗೆ ನೆರವಾದವರನ್ನು ಸ್ಮರಿಸಿಕೊಂಡರು
ಡಾ. ಎಸ್.ಎಸ್. ಅಂಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭಾರತಿ ಸಂಗೊಳ್ಳಿ ನಿರೂಪಿಸಿದರು .ವೀಣಾ ರೆಡ್ಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳು ಡಾ. ಸರಜೂ ಕಾಟ್ಕರ್, ಡಾ. ಬಸವರಾಜ ಜಗಜಂಪಿ, ಯ.ರು.ಪಾಟೀಲ್, ಬಿ.ಎಸ್.ಗವಿಮಠ,ಎಂ ಎಸ್ ಇಂಚಲ, ಡಾ.ಗುರುಪಾದ ಮರಿಗುದ್ದಿ ಬಸವರಾಜ್ ಗಾರ್ಗಿ ಎ .ಎ. ಸನದಿ, ಡಾ. ರಾಜೇಶ್ವರಿ ಹಿರೇಮಠ,ಸುನಂದಾ ಎಮ್ಮಿ,ಆಶಾ ಕಡಪಟ್ಟಿ,ಜ್ಯೋತಿ ಬಾದಾಮಿ, ಹಮಿದಾ ದೇಸಾಯಿ ಡಾ ಭಾರತಿ ಮಠದ ಪ್ರಭಾ ಪಾಟೀಲ್, ಲಲಿತಾ ಪರ್ವತಿಕರ ವಿಜಯ ಲಕ್ಷ್ಮಿ ಉಲ್ಲೆಗಡ್ಡಿ ಸುನಿತಾ ನಂದೆನ್ನ ವರ, ಜಯಶೀಲ ಬ್ಯಾ ಕೋಡಿ ಮುಂತಾದ ಲೇಖಕಿಯರು ಉಪಸ್ಥಿತರಿದ್ದರು


Gadi Kannadiga

Leave a Reply