This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಗ್ರಾಮೀಣ ಬಿಇಓ ಕೆಛೇರಿ: ಗಣಪತಿ ಗಲ್ಲಿಗೆ ಸ್ಥಳಾಂತರ


ಬೆಳಗಾವಿ,ಜೂನ್೧೩: ನಗರದ ಚವ್ಹಾಟ ಗಲ್ಲಿಯ ಮರಾಠಿ ಹಿರಿಯ ಪ್ರಾಥಮಿಕ ನಂಬರ್೫ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಗಣಪತಿಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ನಂಬರ್೨ಕ್ಕೆ ಸ್ಥಳಾಂತರಿಸಲಾಗಿದೆ.
ಈ ಮೊದಲಿದ್ದ ಕಟ್ಟಡದ ಕಚೇರಿ ಕೊಠಡಿ ಶಿಥಿಲಗೊಂಡಿದ್ದು ಆತಂಕದ ವಾತವರಣ ಇತ್ತು. ಹೀಗಾಗಿ ಗಣಪತಿ ಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ನಂಬರ್೨ರ ಕಟ್ಟಡದ ಮೊದಲ ಅಂತಸ್ತಿನ ೬ ಕೊಠಡಿ ಹಾಗೂ ನೆಲಮಹಡಿ ಎಡಭಾಗದ ೨ ಕೊಠಡಿಗಳಲ್ಲಿ ಜೂನ್ ೧೦ ರಂದು ಈ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply